14 ತಿಂಗಳುಗಳಿಂದ ಅಪಹರಣಕಾರನ ಬಳಿಯೇ ಇದ್ದ 2 ವರ್ಷದ ಮಗು
ಕಿಡ್ನಾಪ್ ಆದ ಮಗುವನ್ನು ಕಂಡು ಹಿಡಿದು ಮಗುವನ್ನು ರಕ್ಷಿಸಿದ ಪೊಲೀಸರು
ಅಪಹರಣಕಾರನನ್ನು ಬಿಟ್ಟು ಬರಲು ಮಗುವಿನ ಹಠ, ಆರೋಪಿ ಕಣ್ಣಲ್ಲೂ ನೀರು
ಜೈಪುರ: ಮಕ್ಕಳು ಅಂದ್ರೆ ದೇವರ ಸಮಾನ ಅಂತಾರೆ. ಪ್ರೀತಿ ನೀಡಿದರೆ ವಾಪಸ್ ಅವರಿಂದ ನಮಗೆ ಅದರಷ್ಟೇ ಪ್ರೀತಿ ಸಿಗುತ್ತದೆ. ಏನೂ ಅರಿಯದ ಮುಗ್ಧ ಮನಗಳು ಅವು. ಒಮ್ಮೆ ಯಾರನ್ನಾದರು ಭಾವುಕವಾಗಿ ಹಚ್ಚಿಕೊಂಡರೆ ಮುಗೀತು ಅವರನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಕಲ್ಲೆದೆಯನ್ನು ಕೂಡ ಕರಗಿಸಿ ಬಿಡುವ ಶಕ್ತಿ ಮಕ್ಕಳ ಮುಗ್ಧ ಪ್ರೀತಿಯಲ್ಲಿದೆ. ಜೈಪುರದಲ್ಲಿ ಒಂದು ಘಟನೆ ನಡೆದಿದೆ. ಯಾವ ಬಾಲಿವುಡ್ ಸಿನಿಮಾಗೂ ಕೂಡ ಕಡಿಮೆಯಿಲ್ಲದಂತಹ ಕಥೆಯದು. ಎಂತವರ ಕಣ್ಣು ಕೂಡ ಒಮ್ಮೆ ತೇವಗೊಳ್ಳುವಂತ ಘಟನೆ.
ಇದನ್ನೂ ಓದಿ: ಮೋದಿಗೆ ಆಹ್ವಾನ ನೀಡಿದ ಪಾಕಿಸ್ತಾನ; ಹೊಸ ಚರ್ಚೆ ಹುಟ್ಟುಹಾಕಿದ ಪಾಕ್ನ ಬಿಗ್ ಸ್ಟೇಟ್ಮೆಂಟ್..!
ಜೈಪುರದಲ್ಲಿ ಕೆಲವು ತಿಂಗಳುಗಳ ಹಿಂದೆ 11 ತಿಂಗಳ ಬಾಲಕನ ಅಪಹರಣ 14 ತಿಂಗಳುಗಳ ಹಿಂದೆ ನಡೆದಿತ್ತು. ಸಂಗಾನೇರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ತನುಜ್ ಚಹಾರ್ ಎಂಬ ವ್ಯಕ್ತಿ ಈ ಹಿಂದೆ ಯುಪಿಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದವನು. ಈ 11 ತಿಂಗಳ ಮಗುವಿನ ಅಪಹರಣ ಮಾಡಿದ್ದ. ಈತನು ಎಷ್ಟು ಚಾಲಾಕಿ ಅಂದ್ರೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧು ವೇಷ ಹಾಕಿಕೊಂಡು ತಿರುಗುತ್ತಿದ್ದ, ಒಂದೊಮ್ಮೆ ಉದ್ದನೆಯ ಗಡ್ಡ ಬಿಡೋದು. ಮತ್ತೊಮ್ಮೆ ಕ್ಲೀನ್ ಶೇವ್ ಮಾಡಿಕೊಳ್ಳುವುದು, ಅಪ್ಪಿತಪ್ಪಿಯೂ ಕೂಡ ಅಪರಿಚತರಿಗೆ ತನ್ನ ಹೆಸರು ಹೇಳುತ್ತಿರಲಿಲ್ಲ. ಪೊಲೀಸರು ಟ್ರೇಸ್ ಮಾಡುವ ಭಯದಿಂದ ಮೊಬೈಲ್ ಕೂಡ ಯೂಸ್ ಮಾಡುತ್ತಿರಲಿಲ್ಲ. ಇಂತವ ಬೆನ್ನಟ್ಟಿದ ಪೊಲೀಸ ತಂಡ ಮಥುರಾ ಆಗ್ರಾ ಮತ್ತು ಅಲಿಘರ್ನಲ್ಲಿ ಜಾಲಾಡಿ ಅವನನ್ನು ಬಂಧಿಸಿತ್ತು. ಅದಾದ ನಂತರವೇ ಒಂದು ಭಾವುಕ ಸನ್ನಿವೇಶಕ್ಕೆ ಜೈಪುರ ಪೊಲೀಸ್ ಠಾಣೆ ಸಾಕ್ಷಿಯಾಯ್ತು.
ಇದನ್ನೂ ಓದಿ:Flood photos: ಭಾರೀ ಮಳೆಗೆ 28 ಮಂದಿ ಸಾವು; 11 ಜಿಲ್ಲೆಗಳಿಗೆ ಮತ್ತೆ ರೆಡ್ ಅಲರ್ಟ್..
ಕಳೆದ 14 ತಿಂಗಳುಗಳಿಂದ ಕಿಡ್ನಾಪ್ ಆದ ಮಗು ಆ ಅಪಹರಣಕಾರನ ಹತ್ತಿರವೇ ಇದೆ. ಅವನನ್ನು ತುಂಬಾ ಹಚ್ಚಿಕೊಂಡು ಬಿಟ್ಟಿದೆ. ಪೊಲೀಸರು ಅವನನ್ನು ಹಿಡಿದು ಪೊಲೀಸ್ ಠಾಣೆಗೆ ತಂದು ಮಗುವಿನ ಪೊಷಕರನ್ನು ಕರೆದು ಮಗುವನ್ನು ಅವರಿಗೆ ಒಪ್ಪಿಸಲು ಸಜ್ಜಾಗಿದ್ದಾರೆ. ಈ ವೇಳೆ ಆ 2 ವರ್ಷದ ಮಗು ಕಿಡ್ನಾಪರ್ ತನುಜ್ ಚಾಹರ್ನನ್ನು ಬಿಟ್ಟು ಬರಲು ಹಠ ಮಾಡಿದೆ. ತಂದೆಯೂ ಕರೆದುಕೊಳ್ಳಲು ಹೋದಾಗ ಅಪಹರಣಕಾರನನ್ನು ಗಟ್ಟಿಯಾಗಿ ತಬ್ಬಿಕೊಂಡು ಅಳಲು ಶುರು ಮಾಡಿದೆ. ಮಗುವಿನ ಆ ಮುಗ್ಧ ಪ್ರೇಮವನ್ನು ಕಂಡ ತನುಜ್ ಚಾಹರ್ ಕೂಡ ಗಳಗಳನೇ ಅತ್ತು ಬಿಟ್ಟಿದ್ದಾನೆ. ಕೊನೆಗೆ ಒತ್ತಾಯ ಪೂರ್ವಕವಾಗಿ ಮಗುವನ್ನು ಅವನಿಂದ ಕಿತ್ತುಕೊಂಡು ಪೊಷಕರಿಗೆ ನೀಡಿದ್ದಾರೆ ಪೊಲೀಸರು. ಈ ಒಂದು ಘಟನೆ ಪೊಲೀಸ್ ಠಾಣೆಯಲ್ಲಿ ನೆರೆದಿದ್ದ ಎಲ್ಲ ಕಣ್ಣನ್ನು ತೇವಗೊಳಿಸಿದ್ದವು. ಅದಕ್ಕೆ ಅಲ್ವಾ ಪ್ರೀತಿಗೆ ದಾನವನನ್ನು ಮಾನವ ಮಾಡುವ ಗುಣ ಇರೋದು ಅಂತ ಹೇಳೊದು.. ಈ ಸಾಲಿಗೆ ಸಾಕ್ಷಿಯಾಗಿ ನಿಂತಿದ್ದು ಜೈಪುರ ಪೊಲೀಸ್ ಠಾಣೆ .
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ