newsfirstkannada.com

ಕಲುಷಿತ ನೀರು ಸೇವಿಸಿದ್ದಕ್ಕೆ ವಾಂತಿ-ಭೇದಿ.. ಮಕ್ಕಳು ಸೇರಿ 21ಕ್ಕೂ ಹೆಚ್ಚು ಮಂದಿ ಅಸ್ವಸ್ಥ!

Share :

20-06-2023

    ಕಲುಷಿತ ನೀರು ಸೇವಿಸಿದ್ದ ಹಲವು ಮಂದಿಗೆ ವಾಂತಿ-ಭೇದಿ

    ಮಕ್ಕಳು, ವೃದ್ಧರು ಸೇರಿ 21ಕ್ಕೂ ಹೆಚ್ಚು ಸ್ಥಳೀಯರು ಅಸ್ವಸ್ಥ

    ಸರ್ಕಾರಿ ಆಸ್ಪತ್ರೆಯಲ್ಲಿ ಅಸ್ವಸ್ಥರಾದವರಿಗೆ ಸಂಪೂರ್ಣ ಚಿಕಿತ್ಸೆ

ಬೀದರ್​​: ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಔರಾದ್ ತಾಲೂಕಿನ ಕರಕ್ಯಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮ ಪಂಚಾಯಿತಿ ಸಿಬ್ಬಂದಿ ಅಜಾಗರೂಕತೆ ಕಾರಣದಿಂದಾಗಿ ಈ ದುರಂತ ಸಂಭವಿಸಿದೆ.

ಇನ್ನು, ಗ್ರಾಮ ಪಂಚಾಯಿತಿಯಿಂದ ಪೂರೈಕೆಯಾಗುವ ನೀರು ಸೇವಿಸಿದ ಕರಕ್ಯಾಳ ಗ್ರಾಮಸ್ಥರ ಆರೋಗ್ಯದಲ್ಲಿ ದಿಢೀರ್​ ಏರುಪೇರಾಗಿದೆ. ಇದರ ಪರಿಣಾಮ ಮಕ್ಕಳು, ವೃದ್ಧರೂ ಸೇರಿದಂತೆ 21 ಮಂದಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ.

ಸದ್ಯ ಅಸ್ವಸ್ಥರಾದ ಎಲ್ಲರನ್ನು ಔರಾದ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಗ್ರಾಮದ ಪ್ರತಿಯೊಬ್ಬರಿಗೂ ಆರೋಗ್ಯ ಇಲಾಖೆ ಚಿಕಿತ್ಸೆ ಕೊಡುತ್ತಿದೆ. ಕಲುಷಿತಿ ನೀರು ಪೂರೈಕೆ ಮಾಡಿದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಲುಷಿತ ನೀರು ಸೇವಿಸಿದ್ದಕ್ಕೆ ವಾಂತಿ-ಭೇದಿ.. ಮಕ್ಕಳು ಸೇರಿ 21ಕ್ಕೂ ಹೆಚ್ಚು ಮಂದಿ ಅಸ್ವಸ್ಥ!

https://newsfirstlive.com/wp-content/uploads/2023/06/Ill.jpg

Load More