newsfirstkannada.com

20 ಗಂಟೆ ಬುಲೆಟ್‌ ಪ್ರೂಫ್‌ ರೈಲಿನ ಪ್ರಯಾಣ; ಅಮೆರಿಕ ಎಚ್ಚರಿಕೆ ನಡುವೆಯೂ ರಷ್ಯಾ ತಲುಪಿದ ಕಿಮ್ ಜಾಂಗ್ ಉನ್

Share :

12-09-2023

    ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್ ಉನ್‌ ಭೇಟಿ

    ತನ್ನ ಖಾಸಗಿ ಬುಲೆಟ್ ಪ್ರೂಫ್‌ ರೈಲಿನಲ್ಲಿ 20 ಗಂಟೆ ಪ್ರಯಾಣ

    ಯಾವುದೇ ಶಸ್ತ್ರಾಸ್ತ್ರ ಒಪ್ಪಂದ ಮಾಡಿಕೊಳ್ಳದಂತೆ ಅಮೆರಿಕ ಎಚ್ಚರಿಕೆ

ಮಾಸ್ಕೊ: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್ ಉನ್‌ ಸತತ 20 ಗಂಟೆ ಪ್ರಯಾಣದ ಬಳಿಕ ತಮ್ಮ ಖಾಸಗಿ ಬುಲೆಟ್ ಪ್ರೂಫ್‌ ರೈಲಿನಲ್ಲಿ ರಷ್ಯಾ ತಲುಪಿದ್ದಾರೆ. ಕಳೆದ ಭಾನುವಾರ ಕಿಮ್ ಜಾಂಗ್ ಉನ್‌ ಅವರು ಉತ್ತರ ಕೊರಿಯಾದ ಪ್ಯೊಂಗ್ಯಾಂಗ್‌ನಿಂದ ರಷ್ಯಾದತ್ತ ತೆರಳಿದ್ದರು. ಕಿಮ್ ಜಾಂಗ್ ಉನ್ ಬುಲೆಟ್‌ ಪ್ರೂಫ್ ರೈಲು ಗಂಟೆಗೆ 50 ಕಿಲೋ ಮೀಟರ್ ಮಾತ್ರ ಸಂಚರಿಸುತ್ತೆ. ಸತತ 20 ಗಂಟೆಯ ಪ್ರಯಾಣದ ಬಳಿಕ ಕಿಮ್‌ ಜಾಂಗ್ ಉನ್‌ ಕೊನೆಗೂ ರಷ್ಯಾವನ್ನು ತಲುಪಿದ್ದಾರೆ.

ಕಿಮ್‌ ಜಾಂಗ್ ಉನ್ ರೈಲಿನಲ್ಲಿ ಉನ್ನತ ಶಸ್ತ್ರಾಸ್ತ್ರಗಳು, ಮಿಲಿಟರಿ ಅಧಿಕಾರಿಗಳು ಮತ್ತು ವಿದೇಶಾಂಗ ಸಚಿವರು ಪ್ರಯಾಣ ಮಾಡಿದ್ದಾರೆ. ಮಾಸ್ಕೋ ತಲುಪಿದ ಕಿಮ್‌ ಜಾಂಗ್ ಉನ್‌ ಅವರನ್ನ ರಷ್ಯಾ ಅಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಕಿಮ್‌ ಜಾಂಗ್ ಉನ್ ಅವರು ಇಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನ ಭೇಟಿ ಮಾಡಲಿದ್ದಾರೆ. ರಷ್ಯಾ ಹಾಗೂ ಉಕ್ರೇನ್ ಮಧ್ಯೆ ಯುದ್ಧ ಮುಂದುವರೆದಿದೆ. ಈ ಸಂದರ್ಭದಲ್ಲಿ ರಷ್ಯಾಗೆ ಶಸ್ತ್ರಾಸ್ತ್ರ ಸರಬರಾಜು ಮಾಡುವ ಕುರಿತಾಗಿ ಕಿಮ್ ಜಾಂಗ್ ಉನ್ ಉನ್ನತ ಮಟ್ಟದ ಸಭೆ ನಡೆಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ಅಬ್ಬಾ.. 2 ಡ್ಯಾಮ್ ಹೊಡೆದ ರಭಸಕ್ಕೆ ಕೊಚ್ಚಿ ಹೋದ ಇಡೀ ನಗರ; 2 ಸಾವಿರಕ್ಕೂ ಅಧಿಕ ಜನ ಸಾವು

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್ ಉನ್ ಅವರು ಖಂಡಾಂತರ ಕ್ಷಿಪಣಿಗಳನ್ನು ಪರೀಕ್ಷೆ ಮಾಡುವ ಮೂಲಕ ವಿಶ್ವದ ದೊಡ್ಡಣ್ಣ ಅಮೆರಿಕಾಕ್ಕೆ ಸೆಡ್ಡು ಹೊಡೆದಿದ್ದರು. ಸೂಪರ್ ಪವರ್ ದೇಶವಾಗಲು ಹೊರಟಿರೋ ಉತ್ತರ ಕೊರಿಯಾದ ವಿರುದ್ಧ ಅಮೆರಿಕ ಕೆಂಡವನ್ನೇ ಕಾರುತ್ತಿದೆ. ಉತ್ತರ ಕೊರಿಯಾ ಜೊತೆ ಯಾವುದೇ ಶಸ್ತ್ರಾಸ್ತ್ರ ಒಪ್ಪಂದಗಳನ್ನು ಮಾಡಿಕೊಳ್ಳಬಾರದು ಎಂದು ಅಮೆರಿಕ ಎಚ್ಚರಿಕೆಯನ್ನು ನೀಡಿದೆ. ಈ ಎಚ್ಚರಿಕೆಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸೊಪ್ಪು ಹಾಕಿಲ್ಲ. ನೆರೆಯ ರಾಷ್ಟ್ರಗಳ ಜೊತೆ ಬಾಂಧವ್ಯವನ್ನು ಗಟ್ಟಿಗೊಳಿಸುತ್ತೇವೆ ಎನ್ನುತ್ತಿರುವ ಉತ್ತರ ಕೊರಿಯಾ ರಷ್ಯಾ ಪ್ರವಾಸವನ್ನು ಕೈಗೊಂಡಿದೆ.

2019ರಲ್ಲಿ ಪುಟಿನ್ ಜೊತೆ ಕಿಮ್‌ ಜಾಂಗ್ ಭೇಟಿ

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್ ಉನ್‌ 4 ವರ್ಷಗಳ ಹಿಂದೆ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾಗಿದ್ದರು. ಕೊವಿಡ್-19 ಸಾಂಕ್ರಾಮಿಕ ಕಾಲದಲ್ಲಿ ಕಿಮ್‌ ಜಾಂಗ್ ಉನ್ ಸಾವನ್ನಪ್ಪಿದ್ದಾರೆ ಎಂದೇ ಸುದ್ದಿಯಾಗಿತ್ತು. ಕೊವಿಡ್-19 ಇಡೀ ವಿಶ್ವವನ್ನೇ ಕಾಡುತ್ತಿದ್ದಾಗ ಕಿಮ್ ಜಾಂಗ್ ಉನ್ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಬಹಳ ದಿನಗಳ ಬಳಿಕ ಕಿಮ್‌ ಜಾಂಗ್ ಉನ್ ಅವರು ದೇಶ ಬಿಟ್ಟು ಹೊರ ಬಂದಿದ್ದು ಇಡೀ ವಿಶ್ವದ ಗಮನ ಸೆಳೆದಿದೆ. ಉಕ್ರೇನ್ ಮೇಲಿನ ಯುದ್ಧವನ್ನು ನಿಲ್ಲಿಸಲು ಪ್ರಯತ್ನಿಸುತ್ತಿರುವಾಗ ಉತ್ತರ ಕೊರಿಯಾ ಹಾಗೂ ರಷ್ಯಾದ ಬಾಂಧವ್ಯ ಹೊಸ ತಲೆನೋವಾಗಿ ಪರಿಣಮಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

20 ಗಂಟೆ ಬುಲೆಟ್‌ ಪ್ರೂಫ್‌ ರೈಲಿನ ಪ್ರಯಾಣ; ಅಮೆರಿಕ ಎಚ್ಚರಿಕೆ ನಡುವೆಯೂ ರಷ್ಯಾ ತಲುಪಿದ ಕಿಮ್ ಜಾಂಗ್ ಉನ್

https://newsfirstlive.com/wp-content/uploads/2023/09/Kim-Jong-Un.jpg

Load More