newsfirstkannada.com

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದವಳನ್ನೇ ಕತ್ತು ಕೊಯ್ದು ಬರ್ಬರ ಹತ್ಯೆ.. ಅಸಲಿಗೆ ಪ್ರೇಮಿಗಳ ಮಧ್ಯೆ ಆಗಿದ್ದೇನು?

Share :

17-11-2023

  ಒಟ್ಟಿಗೆ ಬಾಳೋಣ ಅಂದಿದ್ದವನೇ ಕತ್ತು ಕೊಯ್ದು ಕೊಂದು ಬಿಟ್ಟ

  ಗೆಳತಿಯ ಮೇಲೆ ಯಾಕಿಷ್ಟು ಕೋಪ? ಅಷ್ಟಕ್ಕೂ ಸುಚಿತ್ರಾ ಮಾಡಿದ್ದೇನು?

  ಪ್ರೀತಿ-ಗೀತಿ ಇತ್ಯಾದಿಯಲ್ಲಿ 20 ವರ್ಷದ ಸುಂದರ ಯುವತಿಯ ಕೊಲೆ

ಈ ಪ್ರೀತಿ ಪ್ರೇಮ ಅನ್ನೋದೆ ಹಾಗೆ. ಈ ಒಲವಿನ ವಿಚಾರದಲ್ಲಿ ಒಮ್ಮೆ ಯಡವಟ್ಟಾದ್ರೆ ಇಡೀ ಬದುಕೇ ಪಶ್ಚಾತ್ತಾಪ ಪಡಬೇಕಾಗುತ್ತೆ. ಇವತ್ತಿನ ಕಥೆಯಲ್ಲೂ ಈ ಪ್ರೀತಿ ವಿಚಾರಕ್ಕೆ ಬಾಳಿ ಬದುಕಬೇಕಾಗಿದ್ದ ಹುಡುಗಿಯ ಜೀವ ಹೋಗಿದೆ. ನನ್ನ ಜೀವ ನೀನು ಅಂದ ಪ್ರಿಯಕರನೇ ಜೀವ ತೆಗೆದಿದ್ದಾನೆ. ಓದೋ ವಯಸ್ಸು. ಬದುಕಿನ ಬಗ್ಗೆ ಹತ್ತಾರು ಆಸೆ ಇಟ್ಕೊಂಡಿದ್ದ ಹುಡುಗಿ. ಜೀವನದ ಬಗೆಗಿನ ಆಸೆಗಳು ಆ ಕಣ್ಣುಗಳಲ್ಲೇ ಕಾಣುತ್ತೀವೆ. ಆದ್ರೆ ಪ್ರೀತಿ ಪ್ರೇಮದ ಮೋಹಕ್ಕೆ ಈ ಸುಂದರಿ ಬದುಕು ದುರಂತ ಅಂತ್ಯ ಕಂಡಿದೆ. ನನ್ನ ಜೀವ ನೀನು, ನಿನಗಾಗಿ ನಾನು ಅಂದಿದ್ದ ಪ್ರೇಮಿಯೇ ಈ ಹುಡುಗಿ ಉಸಿರು ನಿಲ್ಲಿಸಿದ್ದಾನೆ.

ಪ್ರೇಯಸಿ ಕತ್ತು ಕೊಯ್ದು ಹತ್ಯೆ ಮಾಡಿದ ಪ್ರೇಮಿ

ಪ್ರೀತಿಯ ಬಲೆಗೆ ಬಿದ್ದವರಲ್ಲಿ ಸಕ್ಸಸ್ ಕಂಡವರಿಗಿಂತ ನೋವು ಕಂಡವರೆ ಹೆಚ್ಚು. ಅದ್ರಲ್ಲೂ ಪ್ರೇಮ​ ಕಹಾನಿಗಳು ಹ್ಯಾಪಿ ಎಂಡಿಂಗ್ ಕಂಡಿರೋದು ತುಂಬ ವಿರಳ. ಆದ್ರೆ ಒಮ್ಮೊಮ್ಮೆ ಈ ಪ್ರೇಮದ ಮೋಹ ತೀವ್ರ ರೂಪಕ್ಕೆ ಹೋದ್ರೆ ಅಂತ್ಯ ಭೀಕರವಾಗಿಯೇ ಇರುತ್ತೆ. ಅದಕ್ಕೆ ಸಾಕ್ಷಿಯೇ ಈ ಹುಡುಗಿ. ಅಷ್ಟಕ್ಕೂ ಈ ಹುಡುಗಿಯ ಹೆಸರು ಸುಚಿತ್ರಾ. ಇನ್ನೂ 20 ವರ್ಷ ವಯಸ್ಸು. ಹಾಸನದ ಮೊಸಳೆ ಹಳ್ಳಿಯಲ್ಲಿರುವ ಸರ್ಕಾರಿ ಇಂಜಿನಿಯರ್ ಕಾಲೇಜನಲ್ಲಿ ಬಿಇ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದಳು. ಆದ್ರೆ ಈ ವೇಳೆ ಶಂಕರನಹಳ್ಳಿ ಗ್ರಾಮದ ತೇಜಸ್​ ಅನ್ನೋ ಯುವಕ ಸುಚಿತ್ರಾ ಪರಿಚಯವಾಗಿದ್ದ, ಈ ಪರಿಚಯ ಪ್ರೀತಿಗೆ ತಿರುಗಿ ಇಬ್ಬರು ಅನುರಾಗದ ಅಲೆಯಲ್ಲಿ ತೇಲಾಡ್ತಿದ್ರು. ಆದ್ರೆ ಇದೇ ಅನುರಾಗದ ಅಲೆ ಸುಚಿತ್ರಾ ಜೀವಕ್ಕೆ ಬಲೆಯಾಗಿ ಹೋಗಿದೆ.

ಲವ್ ಬ್ರೇಕಪ್​.. ಪ್ರೇಯಸಿ ಜೀವ ಬಲಿ ಪಡೆದ ಪ್ರಿಯಕರ

ಕೆಲ ದಿನಗಳ ಕಾಲ ಸುಚಿತ್ರಾ ಮತ್ತು ತೇಜಸ್​ ಪ್ರೀತಿ ಪ್ರೇಮ ಅಂತ ಸುತ್ತಾಡಿದ್ದಾರೆ. ಆದ್ರೆ ಇಂಜಿನಿಯರಿಂಗ್ ಮುಗಿದ ಬಳಿಕ ತೇಜಸ್​ ತರಬೇತಿಗಾಗಿ ಬೆಂಗಳೂರು ಸೇರಿದ್ದ. ಇಲ್ಲಿಂದ ಇವರಿಬ್ಬರ ಪ್ರೀತಿಯಲ್ಲಿ ಬಿರುಕು ಉಂಟಾಗಿತ್ತು. ಬೆಂಗಳೂರಿನಲ್ಲಿದ್ದ ತೇಜಸ್,​ ಸುಚಿತ್ರಾ ಕಾಲ್ ಮೆಸೆಜ್​ಗೆ ಸರಿಯಾಗಿ ರೆಸ್ಪಾನ್ಸ್ ಮಾಡ್ತಿರಲಿಲ್ವಂತೆ. ಇದರಿಂದ ಬೇಸತ್ತಿದ್ದ ಸುಚಿತ್ರಾ, ತೇಜಸ್​ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾಳೆ. ಇದಾದ ಮೇಲೂ ಸುಮ್ಮನಿರದ ತೇಜಸ್​, ಸುಚಿತ್ರಾಳನ್ನು ಪದೇ ಪದೇ ಫೋನ್ ಮಾಡಿ ಪಿಡೀಸುತ್ತಿದ್ದನಂತೆ. ಇದರಿಂದ ರೋಸಿ ಹೋಗಿದ್ದ ಸುಚಿತ್ರಾ ನಿನ್ನ ಪಾಡಿಗೆ ನೀನು ಇರು, ನನ್ನ ಪಾಡಿಗೆ ನಾನು ಇರ್ತಿನಿ ಅಂತ ಅಂದಿದ್ಳಂತೆ. ಇಷ್ಟೆ ನೋಡಿ ಮುಂದೆ ನಡೆದಿದ್ದು ಮಹಾ ದುರಂತ. ಅದ್ಯಾವಾಗ ಸುಚಿತ್ರಾ ತೇಜಸ್​ನಿಂದ ದೂರಾವಾದಾಗಲೂ ಪ್ರೀತಿಯ ತೊಳಲಾಟಕ್ಕೆ ಸಿಲುಕಿದ್ದ ತೇಜಸ್​ ಬೆಂಗಳೂರಿನಿಂದ ವಾಪಸ್ ಊರಿಗೆ ಓಡೋಡಿ ಬಂದಿದ್ದ. ಹೇಗಾದ್ರೂ ಮಾಡಿ ಅವಳನ್ನ ಒಪ್ಪಿಸಬೇಕು ಅಂತ ನಿರ್ಧರಿಸಿದ್ದ. ಆಕೆ ಪ್ರೀತಿಯನ್ನ ಪಡೆಯಲೇ ಬೇಕು ಅಂತ ಹಠಕ್ಕೆ ಬಿದ್ದಿದ್ದ. ಗುರುವಾರ ಬೆಳಗ್ಗೆ ಸುಚಿತ್ರಾ ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಪೋಷಕರಿಂದ ನೂರು ರೂಪಾಯಿ ಪಡೆದು ಮನೆಯಿಂದ ಹೊರಟಿದ್ದಳು.

ಕಾಲೇಜಿಗೆ ಹೋಗುವ ಮಧ್ಯೆ ಎದುರಾದ ತೇಜಸ್ ನಿನ್ನೊಂದಿಗೆ ಏನೋ ಮಾತನಾಡಬೇಕು ಬಾ ಎಂದು ಬೈಕ್‌ನಲ್ಲಿ ಕೂರಿಸಿಕೊಂಡು ಅಗಿಲೆ ಗ್ರಾಮದ ಬಳಿಯಿರುವ ನಿರ್ಜನ ಪ್ರದೇಶವಾದ ಕುಂತಿಗುಡ್ಡಕ್ಕೆ ಕರೆದೊಯ್ದಿದ್ದಾನಂತೆ. ನನ್ನನ್ನ ಪ್ರೀತಿಸು ಕೈ ಬಿಡಬೇಡ. ಇನ್ಮುಂದೆ ಈ ರೀತಿ ಮಾಡಲ್ಲ ಅಂತ ಸುಚಿತ್ರಾಳಿಗೆ ಪರಿ, ಪರಿಯಾಗಿ ಕೇಳಿ ಕೊಂಡಿದ್ದಾನಂತೆ. ಇಷ್ಟಕ್ಕೆ ಸುಮ್ಮನಾಗದ ಪ್ರೇಮಿ ತೇಜಸ್ ಚಾಕುವಿನಿಂದ ತನ್ನ ಕೈ ಕುಯ್ದುಕೊಂಡು ನನ್ನ ಜೊತೆ ಬ್ರೇಕಪ್ ಮಾಡ್ಕೋಬೇಡ ಅಂತ ಬೇಡಿಕೊಂಡಿದ್ದಾನಂತೆ. ಇಷ್ಟೆಲ್ಲಾ ಮಾಡಿದ್ರೂ ಸುಚಿತ್ರಾ ಒಪ್ಪಿಕೊಳ್ಳದೇ ಇದ್ದಾಗ ಕೋಪದ ಕೈಗೆ ಬುದ್ದಿ ಕೊಟ್ಟಿದ್ದ ತೇಜಸ್​ ಚಾಕುವಿನಿಂದ ಸುಚಿತ್ರಾ ಕತ್ತು ಕೊಯ್ದು ಬಿಟ್ಟಿದ್ದಾನೆ. ಬಳಿಕ ಅಲ್ಲಿಂದ ತೇಜಸ್​ ಎಸ್ಕೇಪ್ ಆಗಿದ್ದಾನೆ. ಹುಚ್ಚು ಪ್ರೇಮಿಯ ಅಟ್ಟಹಾಸಕ್ಕೆ ಸುಚಿತ್ರಾ ರಕ್ತಸ್ರಾವದಿಂದ ನರಳಾಡಿ, ನರಳಾಡಿ ಪ್ರಾಣ ಬಿಟ್ಟಿದ್ದಾಳೆ.

ಸುಚಿತ್ರಾ ಕುಟುಂಬ ಕಳೆದ ವರ್ಷ ಬೆಂಗಳೂರಿನಿಂದ ಬಂದು ಹಾಸನದಲ್ಲೆ ಸೆಟ್ಲ್ ಆಗಿದ್ರು. ಸುಚಿತ್ರಾ ತಂದೆ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಅಮ್ಮ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡ್ತಿದ್ರು. ಓದಿನಲ್ಲಿ ಪ್ರತಿಭಾವಂತೆ ಆಗಿದ್ದ ಸುಚಿತ್ರಾ ತಪ್ಪು ಹೆಜ್ಜೆ ಇಟ್ಟು ಪ್ರೀತಿಯ ಬಲೆಗೆ ಬಿದ್ದಿದ್ಳು. ಕೊನೆಗೆ ಅದರಿಂದ ದೂರ ಸರಿದು ವಿದ್ಯಾಭ್ಯಾಸದ ಕಡೆ ಗಮನ ಕೊಟ್ಟಿದ್ದಳು. ಆದ್ರೆ ಪಾಗಲ್ ಪ್ರೇಮಿಯ ಕೃತ್ಯಕ್ಕೆ ಮನೆ ಮಗಳನ್ನ ಕಳೆದುಕೊಂಡಿರುವ ಸುಚಿತ್ರಾ ಕುಟುಂಬ ಕಂಗಲಾಗಿ, ಮಗಳ ಜೀವ ತೆಗೆದವನಿಗೆ ತಕ್ಕ ಶಿಕ್ಷೆ ಆಗಬೇಕು ಅಂತ ಕಣ್ಣೀರಿಟ್ಟಿದೆ. ದನ ಮೇಯಿಸಲು ತೆರಳಿದ್ದ ಸ್ಥಳೀಯರು ಸುಚಿತ್ರಾ ಕೊಲೆ ಆಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಹಾಸನ ಗ್ರಾಮಾಂತರ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿ ತೇಜಸ್‌ನನ್ನು ವಶಕ್ಕೆ ಪಡೆದಿದ್ದಾರೆ. ಹೊಟ್ಟೆ ಬಟ್ಟೆ ಕಟ್ಟಿ ಮಗಳನ್ನು ಇಂಜಿನಿಯರ್ ಮಾಡಬೇಕೆಂದು ಪೋಷಕರು ಮಹದಾಸೆ ಹೊಂದಿದ್ದರು. ಆದರೆ ಮಗಳು ಭೀಕರವಾಗಿ ಕೊಲೆಯಾಗಿದ್ದು ಬಡ ಪೋಷಕರಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿದೆ. ಒಟ್ಟಿನಲ್ಲಿ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಸುಚಿತ್ರಾ ಆ ಬಲೆಯಿಂದ ಹೊರಬರಲು ಹೋಗಿ ತನ್ನ ಪ್ರಿಯಕರನಿಂದಲೇ ಹತ್ಯೆಯಾಗಿರುವುದು ನಿಜಕ್ಕೂ ದುರಂತವೇ ಸರಿ. ಪ್ರೇಮಿ ಜೈಲುಪಾಲಾದ್ರೆ. ಮಗಳ ಬಗ್ಗೆ ನೂರಾರು ಕನಸು ಕಟ್ಟಿಕೊಂಡಿದ್ದ ಸುಚಿತ್ರಾ ಪೋಷಕರು ದುರಂತ ಅಂತ್ಯ ಕಂಡ ಮಗಳ ನೆನಪಲ್ಲೇ ಬದುಕು ದೂಡುವಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದವಳನ್ನೇ ಕತ್ತು ಕೊಯ್ದು ಬರ್ಬರ ಹತ್ಯೆ.. ಅಸಲಿಗೆ ಪ್ರೇಮಿಗಳ ಮಧ್ಯೆ ಆಗಿದ್ದೇನು?

https://newsfirstlive.com/wp-content/uploads/2023/11/death-2023-11-17T185112.194.jpg

Load More