newsfirstkannada.com

ಅಬ್ಬಾ.. 2 ಡ್ಯಾಮ್ ಹೊಡೆದ ರಭಸಕ್ಕೆ ಕೊಚ್ಚಿ ಹೋದ ಇಡೀ ನಗರ; 2 ಸಾವಿರಕ್ಕೂ ಅಧಿಕ ಜನ ಸಾವು

Share :

12-09-2023

    ಮಳೆ, ನೀರಿನ ರಭಸಕ್ಕೆ ಇಡೀ ಡೆರ್ನಾ ನಗರವೆಲ್ಲ ಸರ್ವನಾಶ..!

    ಕಾರು, ಬೈಕ್ ಸೇರಿದಂತೆ ಜನ ಜಾನುವಾರೆಲ್ಲ ನೀರು ಪಾಲು

    ಕಾಣೆಯಾದ ಸುಮಾರು 5 ರಿಂದ 6 ಸಾವಿರ ನಗರ ವಾಸಿಗಳು

ಬೆಂಗಾಜಿ: ಡೇನಿಯಲ್ ಚಂಡಮಾರುತದ ಜೊತೆಗೆ ಭಾರೀ ಮಳೆಯ ರುದ್ರ ನರ್ತನದಿಂದ ಪೂರ್ವದ ಲಿಬಿಯಾದಲ್ಲಿ 2 ಜಲಾಶಯಗಳ ಅಣೆಕಟ್ಟು ಹೊಡೆದು ಸುಮಾರು 2 ಸಾವಿರ ಜನರು ಸಾವನ್ನಪ್ಪಿದ್ದು 5 ಸಾವಿರಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎನ್ನಲಾಗಿದೆ. ಡೆರ್ನಾ ಎನ್ನುವ ನಗರವು ಅಕ್ಷರಶಃ ಸರ್ವನಾಶವಾಗಿದೆ.

ಮಧ್ಯರಾತ್ರಿ ಭಾರೀ ಚಂಡಮಾರುತ ಮತ್ತು ಮಳೆಯಿಂದಾಗಿ ಡ್ಯಾಮ್​ ಹೊಡೆದಿದ್ದರಿಂದ ಜನರು ತಕ್ಷಣಕ್ಕೆ ಹೊರ ಬರಲು ಹಾಗಿಲ್ಲ. ಹೀಗಾಗಿ ಡ್ಯಾಮ್ ನೀರು ಒಮ್ಮಿಂದ ಒಮ್ಮಲೇ ನುಗ್ಗಿದ್ದರಿಂದ ನೀರಿನ ರಭಸಕ್ಕೆ ಡೆರ್ನಾ ನಗರದಲ್ಲಿ ಮಾರಣಹೋಮವೇ ನಡೆದು ಹೋಗಿದೆ. ಎಷ್ಟೋ ಜನ ಆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ನೀರಿನ ರಭಸಕ್ಕೆ ಕಟ್ಟಡಗಳು ನೆಲ ಸಮವಾಗಿದ್ದು ರಸ್ತೆಗಳಂತೂ ಯಾವುದೆಂದು ಗುರುತೇ ಸಿಗುತ್ತಿಲ್ಲ. ಮಣ್ಣು ಸಮೇತ ಕೊಚ್ಚಿಕೊಂಡು ಹೋಗಿ ದೊಡ್ಡ ಕಾಲುವೆ ನಿರ್ಮಾಣವಾದಂತೆ ಆಗಿದೆ ಎಂದು ಅಲ್ಲಿನ ಈ ದೃಶ್ಯಗಳೇ ಹೇಳುತ್ತಾವೆ.

ಲಿಬಿಯಾದ ಆರ್ಮಿ ವಕ್ತಾರ ಅಹ್ಮದ್ ಮಿಸ್ಮೈರ್​ ಪ್ರಕಾರ ಸುಮಾರು 2 ಸಾವಿರ ಜನರು ಸಾವನ್ನಪ್ಪಿದ್ದು 5 ರಿಂದ 6 ಸಾವಿರ ಮಂದಿ ಕಾಣೆಯಾಗಿದ್ದಾರೆ. ಅಣೆಕಟ್ಟು ಹೊಡೆದ ಪರಿಣಾಮ ನಗರದ ಹಲವು ಕಟ್ಟಡಗಳು, ಅಪಾರ್ಟ್​ಮೆಂಟ್, ಕಾರು, ಬೈಕ್ ಸೇರಿದಂತೆ ಜನ ಜಾನುವಾರು ಎಲ್ಲ ಸರ್ವನಾಶವಾಗಿ ಹೋಗಿವೆ ಎಂದು ಹೇಳಿದ್ದಾರೆ.

ಲಿಬಿಯಾವು ರಾಜಕೀಯವಾಗಿ ಪೂರ್ವ ಮತ್ತು ಪಶ್ಚಿಮಗಳ ನಡುವೆ ವಿಭಜಿಸಲ್ಪಟ್ಟಿದೆ. 2011 ರ ನ್ಯಾಟೋ ಬೆಂಬಲಿತ ದಂಗೆಯಿಂದಾಗಿ ಸಾರ್ವಜನಿಕ ಸೇವೆಗಳು ಅಷ್ಟಾಗಿ ಅಲ್ಲಿ ನಡೆಯುವುದಿಲ್ಲ. ಹೀಗಾಗಿ ಲಿಬಿಯಾ ಸರ್ಕಾರವು ಪೂರ್ವದಲ್ಲಿನ ಕೆಲ ಪ್ರದೇಶಗಳ ಅಭಿವೃದ್ಧಿ ಮಾಡಿಲ್ಲ. ಹೀಗಾಗಿ ಸದ್ಯ ಈ ಮಳೆಯಿಂದ ಪೂರ್ವ ಭಾಗಕ್ಕೆ ಹೊಡೆತ ಬಿದ್ದಿದ್ದರಿಂದ ಅದರ ಸುತ್ತಲಿನ ಮೂರು ರಾಷ್ಟ್ರಗಳ ಮುಖ್ಯಸ್ಥರು ಸೇರಿ ಇತರೆ ರಾಷ್ಟ್ರಗಳ ಸ್ನೇಹದಿಂದ ಸಹಾಯ ಹಸ್ತ ಕೇಳಿವೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. 2 ಡ್ಯಾಮ್ ಹೊಡೆದ ರಭಸಕ್ಕೆ ಕೊಚ್ಚಿ ಹೋದ ಇಡೀ ನಗರ; 2 ಸಾವಿರಕ್ಕೂ ಅಧಿಕ ಜನ ಸಾವು

https://newsfirstlive.com/wp-content/uploads/2023/09/DERNA_CITY.jpg

Load More