ಇಂದಿನಿಂದ ₹2000 ರೂಪಾಯಿ ನೋಟು ಎಕ್ಸ್‌ಚೇಂಜ್
ಚಿನ್ನ, ಪೆಟ್ರೋಲ್ ಖರೀದಿಗೆ ಬರೀ ಪಿಂಕ್ ನೋಟು
ಸೆಪ್ಟೆಂಬರ್ 30ರವರೆಗೂ ನೋಟು ವಿನಿಮಯಕ್ಕೆ ಚಾನ್ಸ್
ಕಳೆದ ಶುಕ್ರವಾರ ಸಂಜೆ 2 ಸಾವಿರ ಮುಖಬೆಲೆಯ ನೋಟುಗಳನ್ನು ಆರ್‌ಬಿಐ ಬ್ಯಾನ್ ಮಾಡಿ ಆದೇಶ ಹೊರಡಿಸಿತ್ತು. ಸೆಪ್ಟೆಂಬರ್ 30ರವರೆಗೆ ನೋಟು ವಿನಿಮಯಕ್ಕೆ ಅವಕಾಶ ಇದ್ರೂ ಜನ ನೋಟು ಬದಲಾಯಿಸೋದಕ್ಕೆ ಮುಗಿ ಬೀಳ್ತಿದ್ದಾರೆ. ಮತ್ತೊಂದೆಡೆ ಪಿಂಕ್ ನೋಟು ನೀಡಿ ಚಿನ್ನ, ಪೆಟ್ರೋಲ್ ಖರೀದಿಗೆ ಮುಗಿಬೀಳ್ತಿದ್ದಾರೆ. 2016 ರೂಪಾಯಿ ಸೆಪ್ಟೆಂಬರ್ 8ರಂದು ದೇಶಾದ್ಯಂತ ಹಳೇ ನೋಟುಗಳನ್ನು ಬ್ಯಾನ್ ಮಾಡಿ ಪ್ರಧಾನಿ ಮೋದಿ ಸರ್ಕಾರ ಆದೇಶ ನೀಡಿತ್ತು. ಬಳಿಕ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆ ತಂದಿತ್ತು. ಕಳೆದ ಮೇ 19ರಂದು 2000 ರೂಪಾಯಿ ನೋಟುಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿತ್ತು.
ಸೆಪ್ಟೆಂಬರ್ 30ರವರೆಗೆ ನೋಟು ವಿನಿಮಯಕ್ಕೆ ಅವಕಾಶ
ಕಳೆದ ಶುಕ್ರವಾರ ಬ್ಯಾನ್ ಮಾಡಲಾಗಿದ್ದ ₹ 2,000 ನೋಟುಗಳ ವಿನಿಮಯ ಕಾರ್ಯ ನಿನ್ನೆಯಿಂದ ಎಲ್ಲಾ ಬ್ಯಾಂಕ್ಗಳಲ್ಲಿ ಆರಂಭ ಆಗಲಿದೆ. 2 ಸಾವಿರ ನೋಟು ವಾಪಸ್ ಕುರಿತು ವಿವರಣೆ ನೀಡಿರುವ ಆರ್‌ಬಿಐ ಗವರ್ನರ್ ಶಕ್ತಿದಾಸ್ ದಾಸ್ ಸಾರ್ವಜನಿಕರು ಆತುರಪಡುವ ಅಗತ್ಯವಿಲ್ಲ. ಸೆಪ್ಟೆಂಬರ್ 30ರವರೆಗೂ ನೋಟು ವಿನಿಮಯಕ್ಕೆ ಸಮಯ ಇದೆ. 2 ಸಾವಿರ ನೋಟುಗಳನ್ನು ಚಲಾವಣೆಯಿಂದ ಮಾತ್ರ ಹಿಂತೆಗೆದುಕೊಳ್ಳಲಾಗಿದ್ದು ಕಾನೂನು ಬದ್ಧವಾಗಿ ಮುಂದುವರೆಯಲಿದೆ ಅಂತ ಹೇಳಿದ್ದಾರೆ. ಮತ್ತೊಂದೆಡೆ 2 ಸಾವಿರ ನೋಟ್ ಬ್ಯಾನ್ ಬಳಿಕ ಜನರಲ್ಲಿ ಆತಂಕ ಸೃಷ್ಟಿಯಾಗಿದ್ದು ಮೊನ್ನೆಯಿಂದಲೇ ಬ್ಯಾಂಕ್ಗಳಲ್ಲಿ ಜನಸಂದಣಿ ಕಂಡುಬರ್ತಿದೆ. ಈ ಆತಂಕ ಕಡಿಮೆ ಮಾಡಲು ಆರ್‌ಬಿಐ ಸ್ಪಷ್ಟನೆ ನೀಡಿದೆ.
₹ 2,000 ನೋಟುಗಳ ವಿನಿಮಯಕ್ಕೆ ಯಾವುದೇ ದಾಖಲೆ ಬೇಕಿಲ್ಲ
₹2,000 ನೋಟುಗಳ ವಿನಿಮಯಕ್ಕೆ ಯಾವುದೇ ದಾಖಲೆ ಬೇಕಿಲ್ಲ. ಯಾವುದೇ ಗುರುತಿನ ಚೀಟಿಗಳು, ವಿನಂತಿ ಪತ್ರಗಳೂ ಕೂಡ ಅಗತ್ಯವಿಲ್ಲ. ಒಂದು ಬಾರಿ ಗರಿಷ್ಠ 10 ಕರೆನ್ಸಿ ನೋಟು ವಿನಿಮಯಕ್ಕೆ ಅವಕಾಶ ಇದೆ. 50 ಸಾವಿರಕ್ಕಿಂತ ಹೆಚ್ಚಿನ ವಿನಿಮಯಕ್ಕೆ ಪ್ಯಾನ್ ಕಾರ್ಡ್ ಬೇಕು. ನೋಟು ವಿನಿಮಯದ ದೈನಂದಿನ ಡೇಟಾ ನಿರ್ವಹಣೆಗೂ ಆರ್‌ಬಿಐ ಆದೇಶ ನೀಡಿದೆ. ವಿದೇಶದಲ್ಲಿರುವ ಭಾರತೀಯರಿಗಾಗಿ ಗಡುವು ವಿಸ್ತರಣೆ ಸಾಧ್ಯತೆ ಇದ್ದು ಗಡುವು ವಿಸ್ತರಣೆ ಬಗ್ಗೆ RBI ಗವರ್ನರ್ ಶಕ್ತಿಕಾಂತ್ ದಾಸ್ ಸುಳಿವು ನೀಡಿದ್ದಾರೆ.
₹ 2,000 ನೋಟು ಬಳಸಿ ಚಿನ್ನ ಖರೀದಿ ಭರಾಟೆ!
ಇನ್ನು ₹ 2,000 ನೋಟು ವಾಪಸ್ ಪಡೆದಿರೋದ್ರಿಂದ ಜನ ಪಿಂಕ್ ನೋಟುಗಳನ್ನು ಬಳಸಿ ಚಿನ್ನ ಖರೀದಿಗೆ ಮುಗಿಬಿದ್ದಿದ್ದಾರೆ. ಬ್ಯಾಂಕ್ಗಳಲ್ಲಿ ನೋಟ್ ಬದಲಾವಣೆ ವೇಳೆ ಪಾನ್ ಕಾರ್ಡ್ ಮಾಹಿತಿ ಪಡೆಯಬಹುದು ಅನ್ನೋ ಭಯದಲ್ಲಿ ಹಲವರು ಚಿನ್ನ ಹಾಗೂ ಐಷಾರಾಮಿ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಈ ವಸ್ತುಗಳ ಖರೀದಿ ವೇಳೆ ಆದಾಯ ತೆರಿಗೆ ಅಧಿಕಾರಿಗಳ ಗಮನಕ್ಕೆ ಬಾರದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಅದರಲ್ಲೂ ತಮ್ಮ ಪಾನ್ ಕಾರ್ಡ್ ಮಾಹಿತಿ ಮುತುವರ್ಜಿ ವಹಿಸಿದ್ದಾರೆ. ಮತ್ತೊಂದೆಡೆ ಪೆಟ್ರೋಲ್ ಬಂಕ್ಗಳಲ್ಲೂ 2000 ರೂ. ನೋಟು ಕೊಟ್ಟು 100-200 ರೂಪಾಯಿಗೆ ಪೆಟ್ರೋಲ್ ಹಾಕಿಸ್ತಿದ್ದಾರೆ. ಹೀಗಾಗಿ ಪೆಟ್ರೋಲ್ ಬಂಕ್ ಮುಂದೆ ಚಿಲ್ಲರೆ ಇಲ್ಲ ಅನ್ನೋ ಬೋರ್ಡ್ ರಾರಾಜಿಸ್ತಿವೆ.
ಸೆಪ್ಟೆಂಬರ್ 30ರವರೆಗೂ ಆರ್‌ಬಿಐ ನೋಟು ವಿನಿಮಯಕ್ಕೆ ಅವಕಾಶ ನೀಡಿದ್ದರೂ 2 ಸಾವಿರ ನೋಟು ಹೊಂದಿರುವ ಜನರಿಗೆ ಆತಂಕ ಮಾತ್ರ ದೂರ ಆಗಿಲ್ಲ. ಹೀಗಾಗಿ ಹೇಗಾದ್ರೂ ಮಾಡಿ ನೋಟು ಬದಲಾಯಿಸಿಕೊಳ್ಳಲು ಮುಗಿಬೀಳ್ತಿದ್ದಾರೆ. ಒಂದು ಬಾರಿಗೆ 20 ಸಾವಿರ ರೂಪಾಯಿವರೆಗೆ ಮಾತ್ರ ನೋಟು ಬದಲೀಕರಣ ಸಾಧ್ಯ. ಆದರೆ ಬ್ಯಾಂಕ್ ಖಾತೆಗೆ ಎಷ್ಟು ಬೇಕಾದರೂ ಹಣ ಹಾಕಬಹುದು. ಸೆಪ್ಟೆಂಬರ್ 30ರ ನಂತರವೂ 2 ಸಾವಿರ ರೂ. ಮುಖಬೆಲೆಯ ನೋಟು ಅಮಾನ್ಯ ಆಗಲ್ಲ ಅಂತ ಆರ್‌ಬಿಐ ಹೇಳಿದೆಯಾದ್ರೂ ಜನರು ಆದಷ್ಟೂ ಬೇಗ ನೋಟುಗಳ ಬದಲಾವಣೆಗೆ ಮುಗಿಬಿದ್ದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ