newsfirstkannada.com

ಲಾರ್ಡ್ಸ್​​ನಲ್ಲಿ ಶರ್ಟ್​​ ಬಿಚ್ಚಿ ಸೆಲಬ್ರೇಟ್​ ಮಾಡಿದ್ದ ದಾದಾ.. ಆ ಬಗ್ಗೆ ಸೌರವ್​ ಗಂಗೂಲಿಗೆ ಬೇಸರವಂತೆ!

Share :

11-09-2023

  ಮೈದಾನದಲ್ಲಿ ಸೌರವ್​ ಗಂಗೂಲಿ ಶರ್ಟ್​​ ಬಿಚ್ಚಿ ಸೆಲಬ್ರೇಟ್​

  ಗಂಗೂಲಿಯ ಆ ಸೆಲಬ್ರೇಟ್ iconic moment ಆಗಿದೆ

  ಪಂದ್ಯದಲ್ಲಿ ಅದ್ಭುತ ಬ್ಯಾಟ್ ಬೀಸಿದ್ದ ಯುವರಾಜ್ ಸಿಂಗ್

ಇಡೀ ಕ್ರಿಕೆಟ್​ ಲೋಕವೇ ಲಾರ್ಡ್ಸ್​​ ಮೈದಾನದಲ್ಲಿ ಸೌರವ್​ ಗಂಗೂಲಿ ಶರ್ಟ್​​ ಬಿಚ್ಚಿ ಸೆಲಬ್ರೇಟ್​ ಮಾಡಿದ್ದನ್ನ iconic moment ಎಂದು ಕರೆಯುತ್ತೆ. ಆದ್ರೆ, ಗಂಗೂಲಿಗೆ ಮಾತ್ರ ಆ ಬಗ್ಗೆ ಬೇಸರ ಇದ್ಯಂತೆ. ಅದು ಯಾಕೆ ಅನ್ನೋದನ್ನ ನೋಡೋಣ ಇವತ್ತಿನ ಸಖತ್​ ಸ್ಟೋರಿಯಲ್ಲಿ.

2002ರ ಭಾರತ -ಇಂಗ್ಲೆಂಡ್​​ ನಡುವಿನ Natwest ಸರಣಿಯನ್ನ ಯಾರು ಗೆದ್ರು ಅನ್ನೋದು ಎಷ್ಟೋ ಕ್ರಿಕೆಟ್​ ಅಭಿಮಾನಿಗಳಿಗೆ ಗೊತ್ತಿಲ್ಲ. ಆದ್ರೆ, ಅಂದಿನ ಟೀಮ್​ ಇಂಡಿಯಾ ಕ್ಯಾಪ್ಟನ್​, ಸೌರವ್​ ಗಂಗೂಲಿ, ಲಾರ್ಡ್ಸ್​​ ಮೈದಾನದಲ್ಲಿ ಶರ್ಟ್​ ತೆಗೆದು ಸೆಲಬ್ರೇಟ್​ ಮಾಡಿರದಂತೂ ಮರೆಯೋಕೆ ಸಾಧ್ಯಾನೆ ಇಲ್ಲ.

ಟೀಮ್​ ಇಂಡಿಯಾ ಜೊತೆ ಜರ್ಸಿಯನ್ನು ಬಿಚ್ಚಿ ಸೆಲೆಬ್ರೆಟ್ ಮಾಡುತ್ತಿರುವ ಗಂಗೂಲಿ

ಸರಣಿಯ ಫೈನಲ್​​​ ಪಂದ್ಯದಲ್ಲಿ ಟೀಮ್​ ಇಂಡಿಯಾ ರಣ ರೋಚಕ ಜಯ ಸಾಧಿಸಿತು. ಈ ಗೆಲುವಿನ ಬೆನ್ನಲ್ಲೇ, ಲಾರ್ಡ್ಸ್​ ಮೈದಾನದ ಬಾಲ್ಕನಿಯಲ್ಲಿ ನಿಂತಿದ್ದ ಕ್ಯಾಪ್ಟನ್​ ಗಂಗೂಲಿ ಶರ್ಟ್​ ವೇವಿಂಗ್​ ಸೆಲಬ್ರೇಷನ್​ ಮಾಡಿದ್ರು. ಈ ಮೂಲಕ ಮುಂಬೈನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಗೆದ್ದ ಬಳಿಕ ಮೈದಾನದಲ್ಲೇ, ಶರ್ಟ್​ ತೆಗೆದು ಸೆಲಬ್ರೇಟ್​ ಮಾಡಿದ್ದ ಆ್ಯಂಡ್ರ್ಯೂ ಫ್ಲಿಂಟಾಫ್​ಗೆ ತಿರುಗೇಟು ಕೊಟ್ಟಿದ್ರು. ಗಂಗೂಲಿ ಕ್ರಿಕೆಟ್​ ಕಾಶಿಯಲ್ಲಿ ಮಾಡಿದ ಆ ಸೆಲಬ್ರೇಷನ್​ ಅನ್ನ ಎಲ್ಲರೂ iconic moment ಎಂದೇ ಕರೆಯುತ್ತಾರೆ. ಆದ್ರೆ, ಗಂಗೂಲಿಗೆ ಹಾಗೆ ಸೆಲಬ್ರೇಟ್​ ಮಾಡಿರುವುದರ ಬಗ್ಗೆ ಸಿಕ್ಕಾಪಟ್ಟೆ ಬೇಸರವಿದೆಯಂತೆ.

ಇದನ್ನು ಓದಿ: Asia Cup: ರೋಹಿತ್​​​-ಗಿಲ್ ​​​​ಮಿಂಚಿನ ಅರ್ಧ ಶತಕ.. ಇವತ್ತು ಮ್ಯಾಚ್​ ರದ್ದುಗೊಂಡರೆ ಭಾರತಕ್ಕೆ ಹೆಚ್ಚು ಲಾಸ್​; ಯಾಕೆ?

ಈ ಬಗ್ಗೆ ಗಂಗೂಲಿ ಮನಬಿಚ್ಚಿ ಮಾತನಾಡಿದ್ದು, ಎಲ್ಲರೂ ಅದನ್ನ iconic moment ಎಂದೇ ಕರೆಯುತ್ತಾರೆ. ನನಗೆ ಹಾಗೇ ಸೆಲಬ್ರೇಟ್​​ ಮಾಡಿದ್ರ ಬಗ್ಗೆ ಬೇಸರವಿದೆ ಎಂದಿದ್ದಾರೆ. ನಾನು ಸಂಪ್ರದಾಯಸ್ಥ ಬೆಂಗಾಲಿ ಕುಟುಂಬದಿಂದ ಬಂದವನು. ಆಫ್​ ದ ಫೀಲ್ಡ್​​ನಲ್ಲಿ ನಾನು ಸಂಪೂರ್ಣ ಬೇರೆಯದೆ ರೀತಿಯಲ್ಲಿ ಇರುತ್ತೇನೆ. ಆದ್ರೆ, ಅಂದು HEAT OF THE MOMENT ನಲ್ಲಿ ಹಾಗಾಗಿ ಬಿಟ್ಟಿದೇ ಎಂದು ಗಂಗೂಲಿ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಲಾರ್ಡ್ಸ್​​ನಲ್ಲಿ ಶರ್ಟ್​​ ಬಿಚ್ಚಿ ಸೆಲಬ್ರೇಟ್​ ಮಾಡಿದ್ದ ದಾದಾ.. ಆ ಬಗ್ಗೆ ಸೌರವ್​ ಗಂಗೂಲಿಗೆ ಬೇಸರವಂತೆ!

https://newsfirstlive.com/wp-content/uploads/2023/09/Sourav_Ganguly_2.jpg

Load More