newsfirstkannada.com

ವಿಶ್ವಕಪ್ ಫೈನಲ್​ ಪಂದ್ಯಕ್ಕೆ BCCI ಭರ್ಜರಿ ತಯಾರಿ; ಪಂದ್ಯದ ವೇಳೆ ನಡೆಯಲಿವೆ ಪ್ರಮುಖ 4 ಈವೆಂಟ್​ಗಳು..!

Share :

18-11-2023

    ದಿಗ್ಗಜ ಸಂಗೀತಗಾರ ಪ್ರೀತ್ಂ ರಿಂದ ಲೈವ್ ಸಂಗೀತ ಕಾರ್ಯಕ್ರಮ

    ವಿಶ್ವಕಪ್ ಗೆದ್ದ ಎಲ್ಲಾ ತಂಡದ ನಾಯಕರಿಗೆ ಗೌರವ ಸಮರ್ಪಣೆ

    ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್ ಫೈನಲ್ ಫೈಟ್

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಪ್​​ಗಾಗಿ ಜಿದ್ದಾಜಿದ್ದಿ ನಡೆಸಲಿವೆ. ಈ ರೋಚಕ ಫೈನಲ್ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಾಳೆ ನಡೆಯಲಿದೆ.

ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಬಿಸಿಸಿಐನಿಂದ ಭರ್ಜರಿ ತಯಾರಿ ನಡೆಸಿದೆ. ಪಂದ್ಯ ಆರಂಭಕ್ಕೂ ಮುನ್ನ ಭಾರತೀಯ ವಾಯುಪಡೆಯು ವಿಶೇಷ ವೈಮಾನಿಕ ಪ್ರದರ್ಶನವನ್ನು ನೀಡಲಿದೆ. ವಾಯುಪಡೆಯ ಒಂಬತ್ತು ಸೂರ್ಯಕಿರಣ್ ತಂಡದ ನೇತೃತ್ವದಲ್ಲಿ ವೈಮಾನಿಕ ಸಾಹಸ ಪ್ರದರ್ಶನ ನಡೆಯಲಿದೆ. ಈ ನಿಟ್ಟಿನಲ್ಲಿ ಪೂರ್ವಭ್ಯಾಸ ಕಸರತ್ತು ಭರದಿಂದ ಸಾಗುತ್ತಿದೆ. ಪಂದ್ಯದ ವಿರಾಮದ ಸಂದರ್ಭದಲ್ಲಿ 5.30ಕ್ಕೆ 15 ನಿಮಿಷಗಳ ಕಾಲ ಆಕಾಶದಲ್ಲಿ ಏರ್ ಶೋ ಮಾಡಲಾಗುತ್ತದೆ.

ಬಿಸಿಸಿಐನಿಂದ ವಿಶ್ವಕಪ್ ಗೆದ್ದ ಎಲ್ಲಾ ತಂಡದ ನಾಯಕರಿಗೆ ಗೌರವ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಬಿಸಿಸಿಐ ನೀಡುವ ಬ್ಲೇಸರ್​ನಲ್ಲಿ ತಂಡದ ನಾಯಕರು ಮಿಂಚಲಿದ್ದಾರೆ. ಭಾರತದ ಸಂಗೀತ ದಿಗ್ಗಜ ಪ್ರೀತ್ಂ ಅವರಿಂದ ಲೈವ್ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಪ್ರೀತ್ಂ ತಂಡ ಒಟ್ಟು ಎಂಟು ಹಾಡುಗಳನ್ನು ಹಾಡಲಿದ್ದಾರೆ. 2023ರ ವಿಶ್ವಕಪ್​ಗಾಗಿ ಹೊಸ ಹಾಡು ಕಂಪೋಸ್ ಮಾಡಲಿದ್ದಾರೆ. ‘ದಿಲ್ ಜಷ್ನ್ ಬೋಲೆ’ ಎಂಬ ಸಾಲುಗಳಿಂದ ಈ ಹಾಡು ಆರಂಭವಾಗಲಿದೆ. ಅಂತಿಮವಾಗಿ ಗ್ಲೋಬಲ್ ಅವಾರ್ಡ್ ವಿನ್ನಿಂಗ್ ಫೈರ್ ವರ್ಕ್​ನಿಂದ ಪಟಾಕಿ ಸಿಡಿಸೋ ಮೂಲಕ ಮುಕ್ತಾಯಗೊಳ್ಳಲಿದೆ.

ಪ್ರಮುಖ 4 ಈವೆಂಟ್​ಗಳು

  • ಸೂರ್ಯಕಿರಣ್ ಆರ್ಕೋಬ್ಯಾಟಿಕ್​ ಟೀಂನಿಂದ ಏರ್​ ಶೋ
  • ಇಲ್ಲಿಯವರೆಗೆ ವಿಶ್ವಕಪ್ ಗೆದ್ದ ಕ್ಯಾಪ್ಟನ್​​ಗಳಿಗೆ ವಿಶೇಷ ಗೌರವ
  • ವಿಶ್ವಕಪ್ ವಿಜೇತ ನಾಯಕರಿಗೆ ಬಿಸಿಸಿಐನಿಂದ ಸ್ಪೆಷಲ್ ಬ್ಲೇಜರ್
  • ದಿಗ್ಗಜ ಪ್ರೀತ್ಂ ಅವರಿಂದ ಲೈವ್ ಸಂಗೀತ ಕಾರ್ಯಕ್ರಮ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶ್ವಕಪ್ ಫೈನಲ್​ ಪಂದ್ಯಕ್ಕೆ BCCI ಭರ್ಜರಿ ತಯಾರಿ; ಪಂದ್ಯದ ವೇಳೆ ನಡೆಯಲಿವೆ ಪ್ರಮುಖ 4 ಈವೆಂಟ್​ಗಳು..!

https://newsfirstlive.com/wp-content/uploads/2023/11/ind-1.jpg

Load More