ನಮ್ಮದೇ ನೆಲ, ನಮ್ಮದೇ ಜನರ ಮುಂದೆ ಸೇಡಿನ ಸಮರ.!
ಬಿಕ್ಕಿ ಬಿಕ್ಕಿ ಅತ್ತಿದ್ದ ರೋಹಿತ್ಗಿದು ಪ್ರತಿಷ್ಟೆಯ ಪಂದ್ಯ
ಕಿಂಗ್ ಕೊಹ್ಲಿಗೂ ಕಾಡ್ತಿದೆ ಆ ಒಂದು ಕೊರಗು.!
ಕಳೆದ 4 ವರ್ಷದಿಂದ ಆ ನೋವು ಕಾಡದ ದಿನವೇ ಇಲ್ಲ. ಆಂಗ್ಲರ ನಾಡಲ್ಲಿ ಅಂದು ನಡೆದ ಘಟನೆ ಇಂದಿಗೂ ಅಭಿಮಾನಿಗಳ ಕಣ್ಣಿಗೆ ಕಟ್ಟಿದಂತಿದೆ. ಆ ಕಣ್ಣೀರು, ಆ ಹತಾಶೆ, ಆ ದುಖಃವನ್ನ ಮರೆಯೋಕೆ ಕೊನೆಗೂ ಕಾಲ ಕೂಡಿ ಬಂದಿದೆ. ತವರಿನಲ್ಲೇ ಆ ನೋವನ್ನ ಮರೆಸುವಂತಾ ಗಿಫ್ಟ್ ಕೊಡಲು ಟೀಮ್ ಇಂಡಿಯನ್ಸ್ ಪಣ ತೊಟ್ಟಿದ್ದಾರೆ.
4 ವರ್ಷ, 1589 ದಿನ, ಸಹಿಸಲಾಗದ ನೋವು, ಮರೆಯಲಾಗದ ಕಣ್ಣೀರು
ಹೌದು..! 4 ವರ್ಷದ ಆ ನೋವನ್ನ ಭಾರತೀಯ ಕ್ರಿಕೆಟ್ ಅಭಿಮಾನಿ ಯಾವ ಕಾರಣಕ್ಕೂ ಮರೆತಿರೋಕೆ ಸಾಧ್ಯವೇ ಇಲ್ಲ. ಅಂದು ಅನುಭವಿಸಿದ ಹತಾಶೆ, ಸಹಿಸಲಾಗದ ನೋವು, ಹಾಕಿದ ಕಣ್ಣೀರು ಇಂದಿಗೂ ಅಭಿಮಾನಿಗಳನ್ನ ಚುಚ್ಚುತ್ತಿದೆ. ಆ ಘಟನೆ ನೆನಪಾದಾಗಲೆಲ್ಲಾ ಮನಸ್ಸು ಭಾರವಾಗುತ್ತೆ.
ಹೌದು.. ನಾವು ಹೇಳ್ತಿರೋದು 2019ರ ವಿಶ್ವಕಪ್ ಸೆಮಿಫೈನಲ್ ಸೋಲಿನ ಕತೆಯನ್ನ. 2 ದಿನಗಳ ಕಾಲ ನಡೆದ ಪಂದ್ಯ ಟೀಮ್ ಇಂಡಿಯಾ ಸೋಲಿನೊಂದಿಗೆ ಅಂತ್ಯವಾಯ್ತು. ಇಂದಿಗೂ ಭಾರತೀಯ ಅಭಿಮಾನಿಗಳನ್ನ ಬಿಡದೇ ಕಾಡ್ತಿರೋ ಸೋಲದು.
ಒಂದು ರನೌಟ್, ನುಚ್ಚು ನೂರಾಯ್ತು ಕನಸು, ಮಾಹಿ ಕಣ್ಣೀರು.!
ನ್ಯೂಜಿಲೆಂಡ್ ವಿರುದ್ಧದ ಸೆಮಿ ಫೈನಲ್ ಕದನ ಹೇಗೆ ಆರಂಭವಾಯ್ತು ಅನ್ನೋದು ಬಹುತೇಕರಿಗೆ ನೆನಪಿಲ್ಲ. ಆದರೆ, ಅಂತ್ಯ ಕಣ್ಣಿಗೆ ಕಟ್ಟಿದಂತಿದೆ. ಅದ್ರಲ್ಲೂ ಪಂದ್ಯದ ಟರ್ನಿಂಗ್ ಪಾಯಿಂಟ್ ಧೋನಿಯ ರನೌಟ್ ಮರೆಯೋಕೆ ಸಾಧ್ಯಾನೆ ಇಲ್ಲ.. ಯಾಕಂದ್ರೆ ಅಂದು ವಿಶ್ವದ ಮೋಸ್ಟ್ ಸಕ್ಸಸ್ಫುಲ್ ಕ್ಯಾಪ್ಟನ್ ಕಣ್ಣೀರು ಸುರಿಸುತ್ತಾ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದ್ರು.
ನೋವು, ಕಣ್ಣೀರು ಮರೆಯಲು ಬಂತು ಟೈಮ್.!
ಅಂದು ಕೊಟ್ಯಂತರ ಅಭಿಮಾನಿಗಳ ಕನಸನ್ನ ನುಚ್ಚು ನೂರು ಮಾಡಿದ ಘಟನೆಯನ್ನ ಮರೆಯಲು ಟೈಮ್ ಬಂದೇ ಬಿಡ್ತು. ನಮ್ಮದೇ ನೆಲ, ನಮ್ಮದ ಜನರ ಮುಂದೆ ಸೇಡಿನ ಸಮರಕ್ಕೆ ವೇದಿಕೆ ಸಜ್ಜಾಗಿದೆ. ಐಕಾನಿಕ್ ವಾಂಖೆಡೆ ಅಂಗಳದಲ್ಲಿ ಈ ಬಾರಿಯ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನ ಬಗ್ಗು ಬಡಿಯಲು ಟೀಮ್ ಇಂಡಿಯಾ ಕಾದು ಕುಳಿತಿದೆ.
ಬಿಕ್ಕಿ ಬಿಕ್ಕಿ ಅತ್ತಿದ್ದ ರೋಹಿತ್ಗಿದು ಪ್ರತಿಷ್ಠೆಯ ಪಂದ್ಯ.!
ಅಂದು ಎಮ್.ಎಸ್ ಧೋನಿ ಮಾತ್ರವಲ್ಲ.. ರೋಹಿತ್ ಶರ್ಮಾ ಕೂಡ ಬಿಕ್ಕಿ ಬಿಕ್ಕಿ ಅತ್ತಿದ್ರು. 2019ರ ವಿಶ್ವಕಪ್ನಲ್ಲಿ ಅತ್ಯಮೋಘ ಪರ್ಫಾಮೆನ್ಸ್ ನೀಡಿದ್ದ ರೋಹಿತ್ ಶರ್ಮಾಗೆ ಆ ಒಂದು ಪಂದ್ಯದಲ್ಲಿ ಪ್ಲಾಫ್ ಆದ ಕೊರಗು ಬಿಡದೇ ಕಾಡಿತ್ತು. ಇದೀಗ ತಂಡದ ಕ್ಯಾಪ್ಟನ್ ಆಗಿರುವ ರೋಹಿತ್ಗಿದು ಪ್ರತಿಷ್ಟೆಯ ಕದನ. ಕಾಡ್ತಿರೋ ಕೊರಗಿಗೆ ಬ್ರೇಕ್ ಹಾಕಲು ಸಾಲಿಡ್ ಫಾರ್ಮ್ನಲ್ಲಿರೋ ಮುಂಬೈಕರ್ಗೆ ತವರಿನಲ್ಲೇ ವೇದಿಕೆ ಸಜ್ಜಾಗಿದೆ.
ಇದನ್ನು ಓದಿ: ಶ್ರೀಲಂಕಾ ತಂಡಕ್ಕೆ ಅಘಾತ.. ಒಂದೇ ಒಂದು ಅಂತರರಾಷ್ಟ್ರೀಯ ಪಂದ್ಯ ಆಡದಂತೆ ನಿರ್ಣಯ ತೆಗೆದುಕೊಂಡ ಐಸಿಸಿ!
ಕಿಂಗ್ ಕೊಹ್ಲಿಗೂ ಕಾಡ್ತಿದೆ ಆ ಒಂದು ಕೊರಗು.!
ರೋಹಿತ್ ಮಾತ್ರವಲ್ಲ.. ಅಂದು ಟೀಮ್ ಇಂಡಿಯಾ ಕ್ಯಾಪ್ಟನ್ ಆಗಿದ್ದ ವಿರಾಟ್ ಕೊಹ್ಲಿ ಕೂಡ ತೀವ್ರ ಹತಾಶೆ ಅನುಭವಿಸಿದ್ರು. ಚಿಕ್ಕ ಕ್ಲ್ಯೂ ಕೂಡ ಸಿಗದೇ ಕೇವಲ 1 ರನ್ಗೆ ವಿಕೆಟ್ ಒಪ್ಪಿಸಿದ್ರು. ನಾಯಕನಾಗಿ ತಂಡವನ್ನ ಮುಂದೆ ನಿಂತು ಲೀಡ್ ಮಾಡಬೇಕಿದ್ದ ಕೊಹ್ಲಿ ಔಟಾಗಿ ಪೆವಿಲಿಯನ್ ಸೇರಿದ್ರು. ಆ ನೋವನ್ನ ಮರೆಯಲು ಈಗ ಕಾಲ ಕೂಡಿಬಂದಿದೆ.
ಜಡ್ಡು ವಿರೋಚಿತ ಹೋರಾಟಕ್ಕೂ ಸಿಕ್ಕಿರಲಿಲ್ಲ ಬೆಲೆ.!
ಅಂದು ಟೀಮ್ ಇಂಡಿಯಾದ ಘಟಾನುಘಟಿಗಳೆಲ್ಲಾ ಪೆವಿಲಿಯನ್ ಸೇರಿದ್ರೆ, ಟೊಂಕ ಕಟ್ಟಿ ಹೋರಾಡಿದ್ರು ರವಿಂದ್ರ ಜಡೇಜಾ. ಜಡ್ಡು ಅತ್ಯದ್ಭುತ ಇನ್ನಿಂಗ್ಸ್ ನೋಡಿದವರು ತಂಡವನ್ನ ಗೆಲ್ಲಿಸೇ ಬಿಡ್ತಾರೆ ಎಂದು ಕೊಂಡಿದ್ರು. ಆದ್ರೆ, ಅದಾಗಲಿಲ್ಲ.. ತಂಡವನ್ನ ಗೆಲುವಿನ ದಡ ಸೇರಿಸಲಾಗದ ನೋವು ಜಡೇಜಾರನ್ನ ಇಂದೂ ಕಾಡ್ತಿದೆ.
ಇದನ್ನು ಓದಿ: ವಿಶ್ವಕಪ್ ಟೂರ್ನಿಯಲ್ಲಿ ಡೂಪ್ಲಿಕೇಟ್ ಹವಾ.. ಪಂದ್ಯ ವೀಕ್ಷಿಸಿದ ಧೋನಿ, ಕೊಹ್ಲಿ, ನರೈನ್ ನೋಡಿ ಫ್ಯಾನ್ಸ್ ಶಾಕ್
2011ರಲ್ಲಿ ಚಾಂಪಿಯನ್ಸ್, ಈ ಬಾರಿ ಫೈನಲ್ ಟಿಕೆಟ್?
ಮುಂಬೈನ ಐಕಾನಿಕ್ ವಾಂಖೆಡೆ ಮೈದಾನ ಟೀಮ್ ಇಂಡಿಯಾ ಪಾಲಿಗೆ ಸಿಕ್ಕಾಪಟ್ಟೆ ಸ್ಪೆಷಲ್. 12 ವರ್ಷಗಳ ಹಿಂದೆ ಇದೇ ಮೈದಾನದಲ್ಲಿ ಧೋನಿಯ ಸಿಕ್ಸರ್ನೊಂದಿಗೆ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರಿತ್ತು. ಇದೀಗ ಅದೇ ಮೈದಾನದಲ್ಲಿ ಧೋನಿ ಕಣ್ಣೀರಿಗೆ ಬೆಲೆ ತಂದು ಕೊಡೋ ಸಮಯ ಬಂದಿದೆ. ನ್ಯೂಜಿಲೆಂಡ್ ಬಗ್ಗು ಬಡಿದು ಮಾಜಿ ನಾಯಕನಿಗೆ ಟೀಮ್ ಇಂಡಿಯಾ ಗೆಲುವಿನ ಗಿಫ್ಟ್ ನೀಡಲಿ ಅನ್ನೋದು ಎಲ್ಲರ ಆಶಯವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ