ನವದೆಹಲಿ: ನಿನ್ನೆ ಕೊಲ್ಕತ್ತಾದಲ್ಲಿ ರೋಡ್ ಶೋ ವೇಳೆ ಗುಂಪುಘರ್ಷಣೆ ನಡೆದ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಕೃತ್ಯವನ್ನ ಬಿಜೆಪಿ ನಡೆಸಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅವರಿಗೆ ನಾನು ಹೇಳಲು ಬಯಸ್ತೀನಿ, ನಾವು ದೇಶದ ಪ್ರತಿ ರಾಜ್ಯದಲ್ಲೂ ಚುನಾವಣೆ ಎದುರಿಸುತ್ತಿದ್ದೇವೆ. ನೀವು ಪಶ್ಚಿಮ ಬಂಗಾಳದ 42 ಸೀಟ್ಗಳಲ್ಲಿ ಮಾತ್ರ ಸ್ಪರ್ಧಿಸಿರೋದು. 6 ಹಂತಗಳ ಚುನಾವಣೆಯಲ್ಲಿ ಬೇರೆ ಎಲ್ಲೂ ಹಿಂಸಾಚಾರ ನಡೆದಿಲ್ಲ., ಪಶ್ಚಿಮ ಬಂಗಾಳದಲ್ಲಿ ಮಾತ್ರ ನಡೆದಿದೆ. ಇದಕ್ಕೆ ಟಿಎಂಸಿ ಕಾರಣ ಅನ್ನೋದು ಇದರಿಂದ ಸಾಬೀತಾಗಿದೆ ಎಂದು ಹರಿಹಾಯ್ದರು.
ನಿನ್ನೆ ಮೂರು ಕಡೆ ಘರ್ಷಣೆ ನಡೆದಿದೆ. ಮಮತಾ ಬ್ಯಾನರ್ಜಿ ಬೆಂಬಲಿಗರು ನನ್ನ ಪೋಸ್ಟರ್ಗಳನ್ನ ಹರಿದುಹಾಕಿದ್ದಾರೆ. ಹಲವೆಡೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಪೊಲೀಸರು ಮೂಕಪ್ರೇಕ್ಷಕರಾಗಿದ್ರು ಎಂದು ಹೇಳಿದ್ರು
ಇನ್ನು ಗಲಾಟೆ ನಡೆದು ವಸ್ತುಗಳು ಧ್ವಂಸವಾಗಿರೋ ಫೋಟೋಗಳನ್ನ ತೋರಿಸಿದ ಅಮಿತ್ ಶಾ ವಿಶ್ವವಿದ್ಯಾಲಯದ ಗೇಟ್ ಬಂದ್ ಆಗಿದ್ದರೂ ಈಶ್ವರ್ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆ ಧ್ವಂಸ ಮಾಡಿದ್ದು ಯಾರು? ಬಿಜೆಪಿಯವರು ಆಗ ಒಳಗೆ ಇರಲಿಲ್ಲ. ಟಿಎಂಸಿ ಕಾರ್ಯಕರ್ತರು ಒಳಗಿದ್ದರು. ಅಲ್ಲದೆ ಗೇಟ್ ಕೂಡ ಮುರಿದಿಲ್ಲ. ಹಾಗಾದ್ರೆ ಪ್ರತಿಮೆ ಮುರಿದಿದ್ದು ಯಾರು? ಎಂದು ಪ್ರಶ್ನಿಸಿದ್ರು.
7 ಗಂಟೆ ನಂತರ ಕಾಲೇಜು ಬಂದ್ ಆಗಿತ್ತು. ರೂಮ್ಗಳು ಕೂಡ ಲಾಕ್ ಆಗಿದ್ದವು. ಆದ್ರೂ ಒಳಗಡೆ ಇದ್ದ ವಸ್ತುಗಳು ಹೇಗೆ ಧ್ವಂಸವಾದವು? ಬಿಜೆಪಿ ಕಾರ್ಯಕರ್ತರ ಕೈಗೆ ರೂಮ್ಗಳ ಕೀ ಬರಲು ಹೇಗೆ ಸಾಧ್ಯ. ಇದೆಲ್ಲಾ ಟಿಎಂಸಿ ಕಾರ್ಯಕರ್ತರ ಕೃತ್ಯ ಎಂದು ಹೇಳಿದ್ರು. ಮಮತಾ ದೀದಿ ಇದಕ್ಕೆಲ್ಲಾ ಬಿಜೆಪಿ ಹೆದರುವುದಿಲ್ಲ. ಚುನಾವಣಾ ಫಲಿತಾಂಶದವರೆಗೆ ಕಾದು ನೋಡಿ ಎಂದು ಹೇಳಿದ್ರು.
LIVE: Shri @AmitShah addresses a press conference at BJP HQ. https://t.co/nQ66P7zDQN
— BJP (@BJP4India) May 15, 2019
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post