ಶಿಮ್ಲಾ: ಪ್ರಧಾನಿ ಮೋದಿ ಬಗ್ಗೆ ಉಲ್ಲೇಖವಿದ್ದ ಲೇಖನದ ಬಗ್ಗೆ ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಪತ್ರಕರ್ತರಿಗೆ ಬೆದರಿಕೆ ಹಾಕಿದ ಘಟನೆ ನಡೆದಿದೆ.
2017ರಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ನೀಚ ಎಂದು ಕರೆದ ಬಗ್ಗೆ ಅಯ್ಯರ್ ಇತ್ತೀಚಿನ ತಮ್ಮ ಲೇಖನವೊಂದರಲ್ಲಿ ಸ್ಮರಿಸಿಕೊಂಡಿದ್ದರು. ಈ ಬಗ್ಗೆ ಇಂದು ಶಿಮ್ಲಾದ ಪಂಜಾಬ್ ಸರ್ಕಾರಿ ಗೆಸ್ಟ್ ಹೌಸ್ ಬಳಿ ಅಯ್ಯರ್ರನ್ನು ಪ್ರಶ್ನಿಸಲಾಯ್ತು. ಇದಕ್ಕೆ ಉತ್ತರಿಸಿದ ಅವರು, ಭಾರತದಲ್ಲಿ ನರೇಂದ್ರ ಮೋದಿ ಅನ್ನೋ ವ್ಯಕ್ತಿ ಇದ್ದಾರೆ ಅಂತ ಗೊತ್ತಿಲ್ವಾ? ಅವರ ಮೊನಚಾದ ದಾಳಿಗಳ ಬಗ್ಗೆ ನೀವು ಕೇಳಿಲ್ವಾ? ಹೋಗಿ ಅವರಿಗೆ ಪ್ರಶ್ನೆ ಕೇಳಿ ಎಂದು ಗುಡುಗಿದ್ರು.
ಇಲ್ಲ ಅವರು ನಿಮ್ಮೊಂದಿಗೆ ಮಾತನಾಡಲ್ಲ, ಅವನೊಬ್ಬ ಹೇಡಿ. ಮಾಧ್ಯಮಗಳೊಂದಿಗೆ ಮಾತನಾಡಲ್ಲ ಎಂದು ಅಯ್ಯರ್ ಕಿಡಿ ಕಾರಿದ್ರು. ಅಲ್ಲದೆ ಕೋಪದಿಂದ ವದರಿಗಾರನ ಮೈಕ್ ತಳ್ಳಿ, ಮುಷ್ಠಿ ಬಿಗಿ ಮಾಡಿ ಪ್ರಶ್ನೆ ಕೇಳದಂತೆ ಅವಾಚ್ಯ ಪದದಿಂದ ನಿಂದಿಸಿದ್ರು.
2017ರಲ್ಲಿ ಮಣಿಶಂಕರ್ ಅಯ್ಯರ್, ಪ್ರಧಾನಿ ಮೋದಿಯನ್ನು ನೀಚ ವ್ಯಕ್ತಿ ಎಂದು ಕರೆದಿದ್ದಕ್ಕೆ ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಂಡಿದ್ದರು. ಇತ್ತೀಚೆಗೆ ತಮ್ಮ ಲೇಖನದಲ್ಲಿ ಇದನ್ನ ಸ್ಮರಿಸಿ, 2017ರಲ್ಲಿ ನಾನು ಮೋದಿಯನ್ನು ಏನೆಂದು ಕರೆದಿದ್ದೆ ನೆನಪಿದೆಯೇ ಎಂದು ಹೇಳಿದ್ದರು. ಇನ್ನು ಈ ಲೇಖನವನ್ನು ಕೂಡ ಕಾಂಗ್ರೆಸ್ ಖಂಡಿಸಿದೆ.
Q: Neech Kaun Hai?
A: #ManiShankarAiyarWatch it till the end. pic.twitter.com/jOafpghM7J
— Vivek Ranjan Agnihotri (@vivekagnihotri) May 14, 2019
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post