ಇಂದೋರ್: ಇಡೀ ಪಂಜಾಬ್ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ರೆ, ಆರ್‌ಎಸ್‌ಎಸ್‌ನವರು ಮಾತ್ರ ಬ್ರಿಟೀಷರ ಬಳಿ ಚಮಚಾಗಿರಿ ಮಾಡ್ಕೊಂಡಿದ್ರು ಅಂತಾ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಕಿಡಿಕಾರಿದ್ದಾರೆ. ಪಂಜಾಬ್‌ನ ಭಟಿಂಡಾದ ಲೋಕಸಭೆ ಚುನಾವಣಾ ಪ್ರಚಾರದ ಱಲಿಯಲ್ಲಿ ಮಾತನಾಡಿದ ಪ್ರಿಯಾಂಕಾ, ಪಂಜಾಬ್‌ನಲ್ಲಿರುವ ಪ್ರತಿಯೊಬ್ಬರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಸಮಯದಲ್ಲಿ, ಆರ್‌ಎಸ್‌ಎಸ್ ಮಾತ್ರ ಬ್ರಿಟೀಷರ ಜೊತೆ ಸೇರಿ ಚಮಚಾಗಿರಿ ಮಾಡಿಕೊಂಡಿತ್ತು. ಯಾವುದೇ ಚಳವಳಿಯಲ್ಲಿ ಆರ್‌ಎಸ್‌ಎಸ್ ಭಾಗಿಯಾಗೇ ಇಲ್ಲ ಅಂತಾ ವಾಗ್ದಾಳಿ ನಡೆಸಿದ್ರು.
ಇನ್ನು ಱಲಿಗೂ ಮುನ್ನ ಇಂದೋರ್‌ನಲ್ಲಿ ಬೃಹತ್ ರೋಡ್ ಶೋ ನಡೆಸಿದ ಪ್ರಿಯಾಂಕಾ ಪ್ರಚಾರ ವಾಹನದಲ್ಲೇ ನಿಂತು ಪಂಜಾಬಿ ಸಾಂಗ್‌ಗೆ ಚಪ್ಪಾಳೆ ತಟ್ಟುತ್ತಾ ಹೆಜ್ಜೆ ಹಾಕಿದ್ರು. ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್, ಸಚಿವ ನವಜೋತ್ ಸಿಂಗ್ ಸಿಧು ಕೂಡಾ ಅದೇ ವಾಹನದಲ್ಲಿ ಪ್ರಿಯಾಂಕಾ ಜೊತೆ ಕುಣಿದು ಸಂಭ್ರಮಿಸಿದ್ರು.
Congress General Secretary Ms @priyankagandhi grooves on punjabi beats during Pathankot roadshow… pic.twitter.com/KcCJeFcY6n
— Supriya Bhardwaj (@Supriya23bh) May 14, 2019
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post