ಚಂಡಿಗಢ: ಪಂಜಾಬ್ ಸಿಎಂ, ಕ್ಯಾಪ್ಟನ್ ಅಮರಿಂದರ್ ಸಿಂಗ್ ತಮ್ಮ ಸಚಿವ ನವಜೋತ್ ಸಿಂಗ್ ಸಿಧು ವಿರುದ್ಧ ಗರಂ ಆಗಿದ್ದಾರೆ. ರಾಜ್ಯದಲ್ಲಿ ಮೋದಿ ಅಲೆಯನ್ನ ತಡೆದು ನಿಲ್ಲಿಸಲು ಕ್ಯಾಪ್ಟನ್, ಯಶಸ್ವಿಯಾಗಿದ್ದರೂ ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟು 13 ಕ್ಷೇತ್ರಗಳನ್ನೂ ‘ಗೆಲ್ಲುವ ಮಿಷನ್-13’ ಗುರಿ ಹೊಂದಿದ್ದ ಸಿಎಂ ಅಮರಿಂದರ್ ಸಿಂಗ್, 8 ಸ್ಥಾನ ಗೆದ್ದೂ ಬೇಸರದಲ್ಲಿ ಮಾತನಾಡಿದ್ದಾರೆ.
‘ನಮ್ಮ ಪಕ್ಷದ ಕಳಪೆ ಪ್ರದರ್ಶನ ಮುಖವಾಡ ಬಯಲಾಗಿದೆ. ಮಿಷನ್ -13 ಗುರಿ ಹೊಂದಿದ್ದ ನಮಗೆ ಗೆಲ್ಲಲು ಆಗಿರೋದು ಕೇವಲ 8 ಕ್ಷೇತ್ರದಲ್ಲಿ ಮಾತ್ರ. ಸ್ಥಳೀಯ ಸಂಸ್ಥೆಗಳನ್ನ ನಿಭಾಯಿಸುವಲ್ಲಿ ಮಿನಿಸ್ಟರ್ ನವಜೋತ್ ಸಿಂಗ್ ಸಿಧು ಮತ್ತೊಮ್ಮೆ ವಿಫಲರಾಗಿದ್ದಾರೆ. ಅಲ್ಲದೇ ಪಾಕಿಸ್ತಾನದ ಜನರಲ್ಅನ್ನು ತಬ್ಬಿಕೊಳ್ಳುವುದನ್ನು ಯಾವುದೇ ಭಾರತೀಯನೂ ಇಷ್ಟಪಡಲ್ಲ. ಅದ್ರಲ್ಲೂ, ಯೋಧರಂತೂ ಇದನ್ನು ಮೆಚ್ಚಲು ಸಾಧ್ಯವಿಲ್ಲ ಅಂತಾ ಕೂಡ ಕಿಡಿಕಾರಿದ್ದಾರೆ.
ನಾವು ಭಟಿಂಡಾ ಕ್ಷೇತ್ರವನ್ನ ಕಳೆದುಕೊಂಡಿದ್ದೇವೆ. ಅದಕ್ಕೆ ಕಾರಣ ನವಜೋತ್ ಸಿಂಗ್ ಸಿಧು ಅವರ ಕೆಟ್ಟ ಹೇಳಿಕೆಗಳು. ಸಿಧು ಅವರು ತಮಗೆ ನೀಡಿರುವ ಸ್ಥಾನವನ್ನ ಜವಾಬ್ದಾರಿಯಿಂದ ನಿಭಾಯಿಸಲು ವಿಫಲರಾಗಿದ್ದಾರೆ. ನಾವು ನಗರ ಪ್ರದೇಶಗಳಲ್ಲಿ ಕೆಲಸವನ್ನ ಸರಿಯಾಗಿ ಮಾಡಿಲ್ಲ. ಅದರಲ್ಲೂ ಶಂಗ್ರುರ್, ಭಟಿಂಡ ಮತ್ತು ಹೊಶಿಯಾರ್ಪುರ್ ನಮ್ಮ ಅಭಿವೃದ್ಧಿ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ಅಲ್ಲಿ ಯಾವುದೇ ಕೆಲಸಗಳು ಆಗಿಲ್ಲ. ಇದರ ಪರಿಣಾಮ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದೆ. ಇದಕ್ಕೆ ಕಾರಣ ಸಿಧು ಅವರ non-performance. ಪಕ್ಷದಲ್ಲಿನ ಸಮಸ್ಯೆಗಳನ್ನ ಹೈಕಮಾಂಡ್ಗಳ ಮುಂದೆ ತರುವಲ್ಲಿ ವಿಫಲರಾಗಿದ್ದಾರೆ ಎಂದರು ಆರೋಪಿಸಿದರು.
ಆದರೆ ಅಮರಿಂದ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಸಿಧು ನಿರಾಕರಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ನ ಸ್ಟಾರ್ ಕ್ಯಾಂಪೇನರ್ ಆಗಿದ್ದ ಸಿಧು 90ಕ್ಕೂ ಹೆಚ್ಚು ಱಲಿಯಲ್ಲಿ ಭಾಗಿಯಾಗಿದ್ದರು. 13 ಲೋಕಸಭಾ ಕ್ಷೇತ್ರವನ್ನು ಹೊಂದಿದ್ದ ಪಂಜಾಬ್ನಲ್ಲಿ 8 ಸ್ಥಾನವನ್ನ ಕಾಂಗ್ರೆಸ್ ಪಡೆದುಕೊಂಡಿದೆ. ಶಿರೋಮಣಿ ಅಕಾಲಿ ದಳ (ಎಸ್ಎಡಿ) ಮತ್ತು ಬಿಜೆಪಿ ತಲಾ ಎರಡು ಹಾಗೂ ಆಮ್ ಆದ್ಮೀ ಪಕ್ಷ ಒಂದು ಕ್ಷೇತ್ರಗಳಲ್ಲಿ ಜಯಗಳಿಸಿವೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post