ನವದೆಹಲಿ: ಮೋದಿಯ ಪ್ರಚಂಡ ಜಯ ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿ ಬಿಟ್ಟಿದೆ. 2019ರ ಲೋಕಸಭೆಯ ಹೀನಾಯ ಸೋಲು ಕಾಂಗ್ರೆಸ್ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಕ್ಕಟ್ಟು ತಂದಿಟ್ಟಿದೆ. ಸೋಲಿನ ಬಳಿಕ ತಾನು ಅಧ್ಯಕ್ಷ ಸ್ಥಾನದಲ್ಲಿ ಮಂದುವರಿಯಲ್ಲ ಅಂತ ಪಟ್ಟು ಹಿಡಿದಿರುವ ರಾಹುಲ್ ಗಾಂಧಿ, ಕಾಂಗ್ರೆಸ್ಗೆ ನೂತನ ಅಧ್ಯಕ್ಷರ ನೇಮಕಕ್ಕಾಗಿ ಒಂದು ತಿಂಗಳ ಡೆಡ್ಲೈನ್ ಕೊಟ್ಟಿದ್ದಾರೆ. ಮತ್ತೊಂದು ಕಡೆ ರಾಹುಲ್ ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯುವಂತೆ ಕಾಂಗ್ರೆಸ್ನ ಹಿರಿಯ ಘಟಾನುಘಟಿ ನಾಯಕರು ಮನವಿ ಮಾಡುತ್ತಿದ್ದಾರೆ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಸೇರಿದಂತೆ ಕಾಂಗ್ರೆಸ್ನ ಹಲವು ಮುಖಂಡರು ನೀವೇ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ರಾಹುಲ್ಗೆ ಮನವಿ ಮಾಡಿದ್ದಾರೆ. ಇನ್ನು ಯುಪಿಎ ಕೂಟದ ಮೈತ್ರಿ ಪಕ್ಷಗಳು ಕೂಡ ರಾಹುಲ್ ಪರ ಬ್ಯಾಟ್ ಬೀಸಿವೆ. ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ರಿಂದ ಹಿಡಿದು, ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟ್ಯಾಲಿನ್ವರೆಗೂ ಎಲ್ಲರೂ ರಾಹುಲ್ಗೆ ಸೋಲಿನ ಬಗ್ಗೆ ಚಿಂತಿಸಬೇಡಿ, ನೀವೆ ಅಧ್ಯಕ್ಷರಾಗಿ ಮುಂದುವರಿಯಿರಿ ಅಂತ ಮನವಿ ಮಾಡುತ್ತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post