ಮ್ಯೂಸಿಯಂನಲ್ಲಿ ಪುರಾತನ ವಸ್ತುಗಳು ಅಥವಾ ವಿಶಿಷ್ಟ ಕಲಾತ್ಮಕ ವಸ್ತುಗಳನ್ನ ಪ್ರವಾಸಿಗರು ಬೆರಗುಗಣ್ಣಿನಿಂದ ನೋಡ್ತಾರೆ. ಹಾಗೇ ತಾವು ನೋಡಿದ್ದನ್ನ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯೋದು ಮಾಮೂಲಿ. ಆದ್ರೆ ಇಲ್ಲಿ ಕೆಲವರು, ಮ್ಯೂಸಿಯಂನ ನೆಲದ ಮೇಲೆ ಬಿದ್ದಿದ್ದ ಕನ್ನಡಕವನ್ನೇ ಕಲೆ ಎಂದುಕೊಂಡು ಫೂಲ್ ಆಗಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋ ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್ನಲ್ಲಿ ಕಳೆದ ವಾರ ಈ ಘಟನೆ ನಡೆದಿದೆ. 17 ವರ್ಷದ ಖಯಾತನ್ ಅನ್ನೋ ಯುವಕನೊಬ್ಬ ಫೂಲ್ ಮಾಡಲೆಂದೇ ಕನ್ನಡಕವನ್ನ ನೆಲದ ಮೇಲೆ ಇಟ್ಟಿದ್ದ. ಮ್ಯೂಸಿಯಂಗೆ ಭೇಟಿ ನೀಡಿದ್ದ ಕೆಲವರು, ಈ ಕನ್ನಡಕವನ್ನ ಆಧುನಿಕ ಮಾಸ್ಟರ್ಪೀಸ್ ಎಂದುಕೊಂಡು ಸ್ವಲ್ಪ ದೂರದಲ್ಲೇ ನಿಂತುಕೊಂಡು ಸೂಕ್ಷ್ಮವಾಗಿ ಗಮನಿಸಲು ಶುರು ಮಾಡಿದ್ರು. ಜೊತೆಗೆ ಫೋಟೋ ಕ್ಲಿಕ್ಕಸಿಕೊಳ್ಳತೊಡಗಿದ್ದರು. ತಾನು ಅಂದುಕೊಂಡಂತೆ ಜನರು ಫೂಲ್ ಆಗಿದ್ದನ್ನು ಕಂಡ ಖಯಾತನ್, ಈ ಘಟನೆಯ ಫೋಟೋಗಳನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ.
ಮ್ಯೂಸಿಯಂನಲ್ಲಿ ಏನೇ ಇಟ್ಟರು, ಜನ ಅದನ್ನ ಕಲಾತ್ಮಕ ವಸ್ತು ಎಂದುಕೊಳ್ತಾರೆ. ಅದರ ಅರ್ಥ ಏನಿರಬಹುದು ಅಂತ ಯೋಚಿಸಲು ಶುರು ಮಾಡ್ತಾರೆ ಅನ್ನೋದನ್ನ ಪ್ರೂವ್ ಮಾಡಲು ಖಯಾತನ್ ಹೀಗೆ ಮಾಡಿದ್ರಂತೆ. ಈ ಹಿಂದೆ ಇದೇ ರೀತಿ ಡಸ್ಟ್ಬಿನ್ ಹಾಗೂ ಬೇಸ್ಬಾಲ್ ಕ್ಯಾಪ್ ಇಟ್ಟಾಗಲು ಜನ ಇದೇ ರೀತಿ ಫೂಲ್ ಆಗಿದ್ದಾರೆ.
ಆದ್ರೂ ಮಾರ್ಡನ್ ಆರ್ಟ್ ಅನ್ನ ಸಮರ್ಥಿಸಿಕೊಂಡಿರೋ ಖಯಾತನ್, ನಿಮ್ಮ ಕ್ರಿಯೇಟಿವಿಟಿಯನ್ನ ಅಭಿವ್ಯಕ್ತಪಡಿಸಲು ಇರುವ ಮಾರ್ಗವೇ ಕಲೆ. ಮಾರ್ಡನ್ ಆರ್ಟ್ ಕೆಲವೊಮ್ಮೆ ಜೋಕ್ ರೀತಿ ಕಾಣಬಹುದು. ಹಾಗೇ ಇನ್ನೂ ಕೆಲವರಿಗೆ ಅದರಲ್ಲಿ ಆಧ್ಯಾತ್ಮಿಕ ಅರ್ಥ ಕಾಣಬಹುದು ಎಂದಿದ್ದಾರೆ.
LMAO WE PUT GLASSES ON THE FLOOR AT AN ART GALLERY AND… pic.twitter.com/7TYoHPtjP8
— TJ FLY (@tjohntailor) May 24, 2016
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post