ಡಿಸ್ಪುರ್: #WorldEnvironmentDay ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ನಿಯಂತ್ರಿಸಲು ಅಸ್ಸಾಂನ ಅಕ್ಷರ ಫೋರಮ್ ಶಾಲೆ ವಿಶಿಷ್ಟ ಮಾರ್ಗ ಕಂಡುಕೊಂಡಿದೆ. ಈ ಶಾಲೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ತಂದರೆ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಪ್ರತಿ ವಾರ 110 ವಿದ್ಯಾರ್ಥಿಗಳು, ತಮ್ಮ ಮನೆ ಅಥವಾ ಸ್ಥಳೀಯ ಪ್ರದೇಶದಿಂದ ಕನಿಷ್ಟ 20 ಪ್ಲಾಸ್ಟಿಕ್ ತ್ಯಾಜ್ಯವನ್ನ ಸಂಗ್ರಹಿಸಿ ತರಬೇಕು. ಅಲ್ಲದೆ ವಿದ್ಯಾರ್ಥಿಗಳ ಪೋಷಕರು ಪ್ಲಾಸ್ಟಿಕ್ ತ್ಯಾಜ್ಯಗಳನ್ನ ಸುಟ್ಟುಹಾಕುವುದಿಲ್ಲ ಎಂದು ಪ್ರಮಾಣ ಮಾಡಬೇಕು.
ಮಾಝಿನ್ ಮುಖ್ತರ್ ಹಾಗೂ ಪರ್ಮಿತಾ ಶರ್ಮಾ ಎಂಬವರು 2016ರಿಂದ ಈ ಶಾಲೆ ನಡೆಸುತ್ತಿದ್ದಾರೆ. ಕಳೆದ ವರ್ಷದವರೆಗೆ ಇಲ್ಲಿ ಶಿಕ್ಷಣವನ್ನ ಉಚಿತವಾಗೇ ನೀಡಿದ್ದೇವೆ.ಆದ್ರೆ ಪ್ಲಾಸ್ಟಿಕ್ ರೀಸೈಕ್ಲಿಂಗ್ ಬಗ್ಗೆ ಪೋಷಕರಿಗೆ ಮನವಿ ಮಾಡಿದಾಗ ಅದರ ಬಗ್ಗೆ ಅವರು ಕಿವಿಗೊಡಲಿಲ್ಲ. ಹೀಗಾಗಿ ಈಗ ಪ್ಲಾಸ್ಟಿಕ್ ತ್ಯಾಜ್ಯವನ್ನ ಫೀಸ್ ಆಗಿ ಸ್ವೀಕರಿಸಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ಪರ್ಮಿತಾ.
ಈಗ ಮಕ್ಕಳು ಮನೆಮನೆಗೆ ಹೋಗಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನ ಕೇಳುತ್ತಿರೋದ್ರಿಂದ ಸ್ಥಳೀಯರಲ್ಲೂ ಅರಿವು ಮೂಡಿಸುತ್ತಿದೆ. ಮಕ್ಕಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನ ಈಕೋ ಬ್ರಿಕ್ಸ್ ಆಗಿ ಪರಿವರ್ತಿಸಿ ಶಾಲೆಯಲ್ಲಿ ನಿರ್ಮಾಣ ಕಾರ್ಯಗಳಿಗೆ ಬಳಸಲಾಗುತ್ತದೆ. ಹಿರಿಯ ವಿದ್ಯಾರ್ಥಿಗಳು ಈ ರೀಸೈಕ್ಲಿಂಗ್ ಸೆಂಟರ್ನಲ್ಲಿ ಕೆಲಸ ಮಾಡಿ ಹಣ ಸಂಪಾದಿಸುವ ಅವಕಾಶ ಕೂಡ ಇದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post