ಬೆಂಗಳೂರು: ತನ್ನ ಸಂಬಂಧಿಕರೊಬ್ಬರು ಹೈ ಕೋರ್ಟ್ ಜಡ್ಜ್ ಅಂತ ಹೇಳಿ ಆರೋಪಿಯೊಬ್ಬ ಶಾಪ್ ಸಿಬ್ಬಂದಿ ಬಳಿ ಹಣ ತೆಗೆದುಕೊಂಡು ಮೋಸ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ವಿಜಯನಗರದ ಫುಡ್ ಶಾಪ್ ಒಂದಕ್ಕೆ ತೆರಳಿದ್ದ ಅನಾಮಧೇಯ ವ್ಯಕ್ತಿ ಫುಡ್ ಆರ್ಡರ್ ಮಾಡಿ ಯಾವುದೋ ನಕಲಿ ಅಪಾರ್ಟ್ಮೆಂಟ್ಗೆ ಕರೆದೊಯ್ದು ತನ್ನದೇ ಅಪಾರ್ಟ್ಮೆಂಟ್ ಎಂದು ಬಿಂಬಿಸಿದ್ದ. ಅಲ್ಲದೇ, ಶಾಪ್ನ ಸಿಬ್ಬಂದಿ ಕೌಶಾಲ್ ಎಂಬ ವ್ಯಕ್ತಿ ಬಳಿ ಸಲುಗೆಯಿಂದ ವರ್ತಿಸಿದ್ದಾನೆ. ನೀವು ಫುಡ್ನ ಇಲ್ಲಿಗೆ ಡೆಲಿವರಿ ಮಾಡಬೇಕು ಎಂದಿದ್ದಾನೆ. ಇದನ್ನ ನಂಬಿದ್ದ ಕೌಶಾಲ್ ಆರ್ಡರ್ ಪ್ಲೇಸ್ ಮಾಡಿದ್ದಾನೆ. ಈ ವೇಳೆ ಆರೋಪಿ ತನ್ನ ಬಳಿ ಕ್ಯಾಶ್ ಇಲ್ಲ. ಎಟಿಎಂ ಗೆ ಹೋಗಿ ಹಣ ತರಬೇಕು ಅಂತಾ ಹೇಳಿದ್ದಾನೆ. ಅಲ್ಲದೇ, ಇಲ್ಲೇ ಒಬ್ಬರಿಗೆ ಕ್ಯಾಶ್ ಕೊಡಬೇಕು ಎಂದು ಹೇಳಿ, ಕೌಶೌಲ್ ಬಳಿ 10 ಸಾವಿರ ಹಣ ತೆಗೆದುಕೊಂಡು ಹೋಗಿದ್ದವನು, ಮತ್ತೆ ವಾಪಾಸ್ ಬಂದಿಲ್ಲ ಅಂತಾ ಕೌಶಲ್ ಆರೋಪಿಸಿದ್ದಾರೆ. ಸದ್ಯ ಈ ಪ್ರಕರಣ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post