ಕೋಲ್ಕತ್ತ: ರಾಜಕೀಯ ತ್ರಂತ್ರಜ್ಞ, ಚುನಾವಣೆಯ ಗೆಲುವಿನ ಮಾಂತ್ರಿಕ ಪ್ರಶಾಂತ್ ಕಿಶೋರ್ ಮುಂದಿನ ಎಲೆಕ್ಷನ್ನಲ್ಲಿ ತೃಣಮೂಲ ಕಾಂಗ್ರೆಸ್ ಪರ ಕೆಲಸ ಮಾಡಲಿದ್ದಾರೆ. ಇಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಾಗೂ ಪ್ರಶಾಂತ್ ಕಿಶೋರ್ ಭೇಟಿಯಾಗಿ ಒಪ್ಪಂದ ಮಾಡಿಕೊಂಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಪಶ್ಚಿಮ ಬಂಗಾಳದಲ್ಲಿ 2021ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ತೃಣಮೂಲ ಕಾಂಗ್ರೆಸ್ ಪರ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ. ಇನ್ನು, ಪ್ರಶಾಂತ್ ಕಿಶೋರ್ ಹಾಗೂ ಮಮತಾ ಬ್ಯಾನರ್ಜಿ ಸತತ ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದರು. ಚರ್ಚೆ ಬಳಿಕ ಪ್ರಶಾಂತ್ ಕಿಶೋರ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೆ ಚುನಾವಣೆ ಸಂಬಂಧ ಮುಂದಿನ ತಿಂಗಳಿಂದಲೇ ಪ್ರಶಾಂತ್ ಕಿಶೋರ್ ಕೆಲಸ ಮಾಡಲಿದ್ದಾರೆ.
ಮಮತಾ ಬ್ಯಾನರ್ಜಿಗೆ ಮುಂದಿನ ವಿಧಾನಸಭಾ ಚುನಾವಣೆ ತುಂಬಾನೇ ಇಂಪಾರ್ಟೆಂಟ್. ಯಾಕಂದ್ರೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಿರೋಧವನ್ನ ಕಟ್ಟಿಕೊಂಡಿರುವ ಮಮತಾಗೆ ಮುಂದಿನ ಚುನಾವಣೆ ದೊಡ್ಡ ಸವಾಲಾಗಿದೆ. ಲೋಕಸಭೆ ಚುನಾವಣೆಯಲ್ಲಿ 18 ಕ್ಷೇತ್ರಗಳನ್ನ ಗೆಲ್ಲುವು ಮೂಲಕ ಮಮತಾ ಕೋಟೆಗೆ ಬಿಜೆಪಿ ನುಗ್ಗಿದೆ. ಜೊತೆಗೆ ಮೊನ್ನೆಯಷ್ಟೇ ಇಬ್ಬರು ಶಾಸಕರು ಹಾಗೂ 60ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಸೇರಿದ್ದಾರೆ. ಇನ್ನೂ ಆಪರೇಷನ್ ನಡೆಸುವ ವಿಶ್ವಾಸದಲ್ಲಿ ಬಿಜೆಪಿ ಇದೆ. ಹೀಗಾಗಿ ಮಮತಾಗೆ ತಮ್ಮ ಅಸ್ತಿತ್ವದ ಉಳಿವಿನ ಪ್ರಶ್ನೆಯಾಗಿರೋದ್ರಿಂದ ಪ್ರಶಾಂತ್ ಕಿಶೋರ್ಗೆ ಗಾಳ ಹಾಕಿದೆ ಎನ್ನಲಾಗಿದೆ.
ಚುನಾವಣೆಯಲ್ಲಿ ಮಾಸ್ಟರ್ ಪ್ಲಾನ್ ರೂಪಿಸುವಲ್ಲಿ ಪ್ರಶಾಂತ್ ಕಿಶೋರ್ ನಿಸ್ಸಿಮರು. 2014ರ ಲೋಕಸಭಾ ಚುನಾವಣೆ ವೇಳೆ ಪ್ರಶಾಂತ್ ಅವರ ತಂಡವೇ ಬಿಜೆಪಿ ಪರವಾಗಿ ತಂತ್ರಗಾರಿಕೆ ರೂಪಿಸಿತ್ತು. ನಂತರದ ದಿನಗಳಲ್ಲಿ ಅವರು ಬಿಜೆಪಿ ಪಾಳಯದಿಂದ ದೂರವಾಗಿ ಕಾಂಗ್ರೆಸ್, ಜೆಡಿಯು, ವೈಎಸ್‌ಆರ್ ಕಾಂಗ್ರೆಸ್ ಪರವಾಗಿ ಕಾರ್ಯನಿರ್ವಹಿಸಿದ್ದರು. 2019 ರ ಆಂಧ್ರಪ್ರದೇಶದ ಚುನಾವಣೆ ವೇಳೆ ವೈಎಸ್‌ಆರ್ ಕಾಂಗ್ರೆಸ್ ಪರ ಕೆಲಸ ನಿರ್ವಹಿಸಿದ್ರು. ಪರಿಣಾಮ ವೈಎಸ್‌ಆರ್ ಕಾಂಗ್ರೆಸ್ ಅಮೋಘ ಗೆಲುವು ದಾಖಲಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post