ನೀಟ್ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದೆ. ರಾಜಸ್ಥಾನ ಮೂಲದ ನಳಿನ್ ಖಂಡೇವಾಲ ಪ್ರಥಮ ಸ್ಥಾನ ಪಡೆದುಕೊಂಡ್ರೆ, ದೆಹಲಿಯ ಭವೀಕ್ ಬನ್ಸಾಲ್ ದ್ವಿತೀಯ ಹಾಗೂ ಉತ್ತರ ಪ್ರದೇಶದ ಅಕ್ಷತ್ ಕೌಶಿಕ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಕರ್ನಾಟಕದ ಫಣೀಂದ್ರ 36ನೇ ಱಂಕ್ ಪಡೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಫಲಿತಾಂಶದಲ್ಲಿ ರಾಜಸ್ಥಾನ ಪ್ರಥಮ ಸ್ಥಾನ ಪಡೆದುಕೊಂಡಿದೆ. ಇನ್ನುಳಿದಂತೆ ದೆಹಲಿ ದ್ವಿತೀಯ ಹಾಗೂ ಆಂಧ್ರಪ್ರದೇಶ ತೃತೀಯ ಸ್ಥಾನ ಗಳಿಸಿವೆ. 1,017 ವಿದ್ಯಾರ್ಥಿಗಳು ಕನ್ನಡದಲ್ಲಿ ನೀಟ್ ಪರೀಕ್ಷೆ ತೆಗೆದುಕೊಂಡಿದ್ರು. ಕರ್ನಾಟಕ ಶೇ. 63.51 ಫಲಿತಾಂಶ ಪಡೆದುಕೊಂಡಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post