ನಿನ್ನೆ ವಿಶ್ವ ಪರಿಸರ ದಿನದ ಅಂಗವಾಗಿ ಮೇಘಾಲಯದಲ್ಲಿ ಜನರು 15 ಲಕ್ಷ ಸಸಿಗಳನ್ನು ನೆಟ್ಟಿದ್ದಾರೆ. ಈ ಮೂಲಕ ತಮ್ಮದೇ ಆದ ರೀತಿಯಲ್ಲಿ ಮೇಘಾಲಯದ ಜನರು ವಿಶ್ವಕ್ಕೇ ಪರಿಸರದ ಪಾಠ ಮಾಡಿದ್ದಾರೆ..! ಗಿಡವಿದ್ದರೆ ನಾವು, ಗಿಡವಿದ್ದರೆ ಈ ಭೂಮಿ, ಗಿಡವಿದ್ದರೆ ನೀರು, ಗಿಡವಿದ್ದರೆ ವಾಯು ಅನ್ನೋದನ್ನ ಈ ಮೂಲಕ ಸೂಚ್ಯವಾಗಿ ಹೇಳಿದ್ದಾರೆ.
ರಾಜ್ಯದ ‘ಒನ್ ಸಿಟಿಜನ್, ಒನ್ ಟ್ರೀ’ ಅಭಿಯಾನದ ಭಾಗವಾಗಿ ಲಕ್ಷಾಂತರ ಸಸಿಗಳನ್ನು ನೆಡಲಾಗಿದೆ ಎಂದು ಸಿಎಂ ಕೊನ್ರಾಡ್ ಕೆ ಸಂಗ್ಮಾ ಹೇಳಿದ್ದಾರೆ. ಕಳೆದ ವರ್ಷ ಜೂನ್ನಲ್ಲಿ ಈ ಅಭಿಯಾನ ಆರಂಭಿಸಲಾಗಿತ್ತು. ಸಿಎಂ ಸಂಗ್ಮಾ ಖಾಸಿ ಬೆಟ್ಟದಲ್ಲಿ ಪ್ರವಾಸ ಮಾಡಿ ಲಾಂಗ್ಕೈರ್ಡೆಮ್ನಲ್ಲಿ ಮೊದಲ ಗಿಡವನ್ನು ನೆಟ್ಟಿದ್ದರು. ನಂತರ ಸ್ಮಿತ್ ಹಾಗೂ ನಾಂಗ್ಕ್ರೆಮ್ ಗ್ರಾಮಗಳಲ್ಲೂ ಸಸಿಗಳನ್ನ ನೆಟ್ಟು ಅಭಿಯಾನಕ್ಕೆ ಚಾಲನೆ ನೀಡಿದ್ದರು.
ನಿನ್ನೆ ಒಟ್ಟು 15 ಲಕ್ಷ ಗಿಡಗಳನ್ನ ನೆಡಲಾಗಿದ್ದು, ರಾಜ್ಯದ ಜನರಿಗೆ ಹಾಗೂ ಅಧಿಕಾರಿಗಳಿಗೆ ಸಂಗ್ಮಾ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ದಾರೆ. ಇನ್ನು ಮಾಜಿ ಕ್ರಿಕೆಟರ್ ಕಪಿಲ್ ದೇವ್, ನಟ ರಣದೀಪ್ ಹೂಡಾ ಹಾಗೂ ಜಾಕಿ ಶ್ರಾಫ್ ಕೂಡ ನಿನ್ನೆ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post