ಚಂಡೀಘಡ: ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ತಮ್ಮ ಸಂಪುಟ ಸಚಿವ ನವ್ಜೋತ್ಸಿಂಗ್ ಸಿಧುರ ಖಾತೆಯನ್ನು ಕಿತ್ತುಕೊಂಡಿದ್ದಾರೆ. ಲೋಕಸಭಾ ಚುನಾವಣೆ ನಂತರದಲ್ಲಿ ಇದೇ ಮೊದಲ ಬಾರಿಗೆ, ಇಂದು ಅಮರಿಂದರ್ ಸಿಂಗ್ ತಮ್ಮ ಸಂಪುಟ ಸಚಿವರೊಂದಿಗೆ ಸಭೆ ನಡೆಸಿದ್ರು. ಆದ್ರೆ ಈ ಸಭೆಗೆ ಪ್ರವಾಸೋದ್ಯಮ, ಸಾಂಸ್ಕೃತಿಕ ವ್ಯವಹಾರಗಳ ಸಚಿವ ನವಜೋತ್ ಸಿಂಗ್ ಸಿಧುಗೆ ಆಹ್ವಾನ ನೀಡಿರಲಿಲ್ಲ. ಇದಲ್ಲದೇ, ಇವರಿಬ್ಬರ ನಡುವೆ ಹಿಂದಿನಿಂದಲೂ ಶೀತಲ ಸಮರ ನಡೆಯುತ್ತಿತ್ತು. ಇಂದು ಖಾತೆ ಹಿಂಪಡೆಯುವ ಮೂಲಕ ಸಿಧು ಆರ್ಭಟಕ್ಕೆ ಕಡಿವಾಣ ಹಾಕಿದ್ದಾರೆ.
ಮುಖ್ಯಮಂತ್ರಿಯವರ ಈ ನಡೆ ಕುರಿತಂತೆ ಪ್ರತಿಕ್ರಿಯಿಸಿರುವ ಸಿಧು, ‘ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿಗಳು ನನಗೆ ಎರಡು ಜಿಲ್ಲೆಗಳ ಉಸ್ತವಾರಿ ನೀಡಿದ್ರು. ಅಲ್ಲದೇ ಆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭೂತಪೂರ್ವ ಜಯ ಗಳಿಸಿತ್ತು. ಆದ್ರೂ ಮುಖ್ಯ ಮಂತ್ರಿಗಳು ‘taken for granted’ ರೀತಿ ವರ್ತಿಸುತ್ತಿದ್ದಾರೆ’ ಅಂತಾ ಸಿಧು ಆರೋಪಿಸಿದ್ದಾರೆ. ಈ ಮೊದಲು ಕೂಡ ಅಮರಿಂದರ್ ಸಿಂಗ್, ಸಿಧು ತಮ್ಮ ಖಾತೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಅವರ ಕಾರ್ಯವೈಖರಿ ಇನ್ನಷ್ಟು ಉತ್ತಮವಾಗಬೇಕು. ಅಲ್ಲದೇ ಅವರ ಕೆಲಸದ ಬಗ್ಗೆ ವಿಮರ್ಶೆ ಮಾಡಬೇಕು ಅಂತಾ ಹೇಳಿದ್ರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post