ಬಳ್ಳಾರಿ: ಜಿಲ್ಲೆಯ ನೂತನ ಸಂಸದ ವೈ.ದೇವೇಂದ್ರಪ್ಪ ಕೂಡ್ಲಿಗಿ ತಾಲೂಕಿನ ರಾಮಸಗರ ಗ್ರಾಮದಲ್ಲಿ ತಮ್ಮ ಕಾರಿನಲ್ಲಿ ಪ್ರಯಾಣ ನಡೆಸುತ್ತಿದ್ದರು. ಈ ವೇಳೆ ಹೊಲದಲ್ಲಿ ರೈತರು ಉಳುಮೆ ಕೆಲಸ ಮಾಡುತ್ತಿದ್ದನ್ನ ನೋಡಿ, ಕಾರಿನಿಂದ ಕೆಳಗಿಳಿದು ಬಂದು ಬಿತ್ತನೆ ಮಾಡುವ ವೇಳೆ ಗಳೆ ಹೊಡೆದಿದ್ದಾರೆ. ಈ ವೇಳೆ ಅವರಿಗೆ ಬಿತ್ತನೆ ಕಾರ್ಯಕ್ಕೆ ರೈತರು, ಮಹಿಳೆಯರು ಸಾಥ್ ನೀಡಿದ್ರು. ಗಳೆ ಹೊಡೆಯುವ ಮೂಲಕ ದೇವೇಂದ್ರಪ್ಪ ವ್ಯವಸಾಯದ ಕುರಿತು ತಮ್ಮ ಆಸಕ್ತಿಯನ್ನ ತೋರ್ಪಡಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post