ರಾಯ್ಪುರ: ಛತ್ತೀಸ್ಗಢದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಆರ್ಪಿಎಫ್ ಯೋಧರು, ಜಾಂಡೀಸ್ನಿಂದ ಬಳಲುತ್ತಿದ್ದ ಬಾಲಕನಿಗೆ ಸಹಾಯಹಸ್ತ ಚಾಚಿ ಮಾನವೀಯತೆ ಮರೆದಿದ್ದಾರೆ. ಗುಮೋದಿ ಎಂಬ ಊರಿನಲ್ಲಿ 231 ಬೆಟಾಲಿಯನ್ನ ಯೋಧರು ಗಸ್ತು ತಿರುಗುತ್ತಿದ್ದರು. ಸುಕ್ಮಾ ಜಿಲ್ಲೆಯ ಈ ಪ್ರದೇಶ ನಕ್ಸಲ್ ಬಾಧಿತವಾಗಿದ್ದು, ಇಲ್ಲಿ ಸೇನೆಯ ಕಟ್ಟೆಚ್ಚರವಹಿಸುತ್ತಿದೆ. ಇನ್ನೂ ಯೋಧರು ಗಸ್ತು ತಿರುಗುತ್ತಿದ್ದ ವೇಳೆ, ಮನೆಯೊಂದರಲ್ಲಿ 13 ವರ್ಷದ ಬಾಲಕನೊಬ್ಬ ಜಾಂಡೀಸ್ನಿಂದ ಹಾಸಿಗೆ ಹಿಡಿದಿದ್ದು ಪತ್ತೆಯಾಗಿದೆ. ತಕ್ಷಣ ಯೋಧರು ಆತನನ್ನು ಡೋಲಿಯಲ್ಲಿ ಕೂರಿಸಿಕೊಂಡು 8 ಕಿಲೋಮೀಟರ್ ದೂರದವರೆಗೂ ಹೊತ್ತುಕೊಂಡು ಸಾಗಿದ್ದಾರೆ. ಬಳಿಕ ಕೊಂಡಸವಲಿಯಲ್ಲಿರುವ ತಮ್ಮ ಸೇನಾ ಕ್ಯಾಂಪ್ನಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನೂ ಈ ಬೆಟಾಲಿಯನ್ನ ಕಮಾಂಡೆಂಟ್ ಜೀತೆಂದ್ರ ಯಾದವ್ ಮಾತನಾಡಿದ್ದು, ಮೊದಲು ಬಾಲಕ ಕುಟುಂಬ, ಬಾಲಕನನ್ನು ಯೋಧರ ಜೊತೆ ಕಳುಹಿಸಲು ನಿರಾಕರಿಸಿತ್ತು. ನಕ್ಸಲ್ ಪೀಡಿತ ಪ್ರದೇಶವಾದ್ದರಿಂದ ಭಯದಿಂದ ಯೋಧರ ಜೊತೆ ಬಾಲಕನನ್ನು ಕಳುಹಿಸಲು ಹಿಂದೆ ಮುಂದೆ ನೋಡಿದ್ರು. ಆದರೆ ಅವರ ಮನವೊಲಿಸಿ, ಬಾಲಕನಿಗೆ ಸೇನಾ ಕ್ಯಾಂಪ್ನಲ್ಲಿ ಚಿಕಿತ್ಸೆ ನೀಡಲಾಗಿದ್ದು, ಆತನ ಆರೋಗ್ಯ ಇದೀಗ ಸ್ಥಿರವಾಗಿದೆ ಎಂದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post