ಕೇರಳ: ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ವೈನಾಡಿನಿಂದ ಸ್ಪರ್ಧಿಸಿದ್ದಕ್ಕಾಗಿ ಅತೀವ ಸಂತಸ ವ್ಯಕ್ತಪಡಿಸಿದ್ದ ತಾಯಿಯನ್ನ ಇಂದು ರಾಹುಲ್ ಭೇಟಿಯಾಗಿದ್ದಾರೆ. ಭಾರೀ ಅಂತರದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಇಂದು ವೈನಾಡಿಗೆ ಆಗಮಿಸಿದ ಅವರು ಮೊದಲಿಗೆ ತಮ್ಮನ್ನು ಎತ್ತಿ ಆಡಿಸಿದ ತಾಯಿ, ನಿವೃತ್ತ ನರ್ಸ್ ರಾಜಮ್ಮ ವವತಿಲ್ರನ್ನ ಭೇಟಿಯಾಗಿ ಧನ್ಯವಾದ ತಿಳಿಸಿದ್ರು. ಬಳಿಕ ರೋಡ್ ಶೊ ನಡೆಸಿ ತಮ್ಮನ್ನು ಗೆಲ್ಲಿಸಿದ ಜನರಿಗೆ ಧನ್ಯವಾದ ತಿಳಿಸಿದ್ರು.
ತಾಯಿ ರಾಜಮ್ಮ ಯಾರು ಗೊತ್ತಾ..!?
ರಾಜಮ್ಮ ಒಬ್ಬ ನಿವೃತ್ತ ನರ್ಸ್. ಜೂನ್ 19, 1970. ದೆಹಲಿಯ ಹೋಲಿ ಫ್ಯಾಮಿಲಿ ಹಾಸ್ಪಿಟಲ್‌ನಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಮೊಮ್ಮಗ, ರಾಜೀವ್ ಗಾಂಧಿ-ಸೋನಿಯಾ ಗಾಂಧಿ ಪುತ್ರರಾಗಿ ರಾಹುಲ್ ಹುಟ್ಟಿದ್ರು. ಈ ವೇಳೆ ಆಸ್ಪತ್ರೆಯಲ್ಲಿ ನರ್ಸ್ ಆಗಿ ಟ್ರೈನಿಂಗ್ ಪಡೀತಿದ್ದ ರಾಜಮ್ಮ ವವತಿಲ್ ರಾಹುಲ್ ಗಾಂಧಿ ಹುಟ್ಟುತ್ತಿದ್ದಂತೆ ತಮ್ಮ ಕೈಗಳಲ್ಲಿ ಎತ್ತಿಕೊಂಡಿದ್ದರು. ರಾಹುಲ್ ಹುಟ್ಟಿದಾಕ್ಷಣ ಮೊದಲ ಬಾರಿಗೆ ಅವರನ್ನ ಎತ್ತಿ ಆಡಿಸಿದ ಆ ಕೈಗಳು, ಆ ಕ್ಷಣಗಳು ಇವರದ್ದಾಗಿತ್ತು. ಇದ್ರಿಂದ ಇವರೂ ಕೂಡಾ ನನ್ನ ತಾಯಿಯೇ ಅಂತಾರೆ ರಾಹುಲ್. ಇನ್ನು ರಾಹುಲ್ ವೈನಾಡಿನಿಂದ ಸ್ಪರ್ಧಿಸುತ್ತಾರೆ ಎಂಬುದನ್ನ ತಿಳಿದ ರಾಜಮ್ಮ ಅಂದು ತಂಬಾನೇ ಖುಷಿಪಟ್ಟಿದ್ದರಂತೆ. ರಾಹುಲ್ ಹುಟ್ಟಿದ ಸಂದರ್ಭದಲ್ಲಿ ಸಾಮಾನ್ಯ ಕಾರ್ಮಿಕ ಕೈಗಳಿಂದ ಎತ್ತಿದ ಮಗುವೊಂದು, ರಾಷ್ಟ್ರೀಯ ಪಕ್ಷ ಒಂದರ ಅಧ್ಯಕ್ಷರಾಗಿ ತಾನು ಬೆಳೆದ ನಾಡಿನಿಂದ ಸ್ಪರ್ಧೆ ಮಾಡುತ್ತಿರೋದ್ರಿಂದ ಸಹಜವಾಗಿಯೇ ಖುಷಿ ಉಮ್ಮಳಿಸಿ ಬಂದಿತ್ತಂತೆ. ಇಂದು ಆ ತಾಯಿಯನ್ನ ಭೇಟಿಯಾಗದ ರಾಹುಲ್ ಧನ್ಯವಾದ ತಿಳಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post