ಲಖನೌ: ಉತ್ತರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಪೊಲೀಸರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ನರೇಂದ್ರ ಮೋದಿಯ ಸ್ವಕ್ಷೇತ್ರದಲ್ಲೇ ನಿನ್ನೆ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆದಿದೆ.
ವಾರಾಣಸಿಯ ಪಾಂಡೆಪುರದ ಫ್ಲೈ ಓವರ್ ಬಳಿಯಲ್ಲಿರುವ ಸ್ಥಳೀಯ ಅಂಗಡಿಗಳಲ್ಲಿ ವಿದ್ಯುತ್ ಕಳ್ಳತನ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ದೀಪಕ್ ಶ್ರೀವಾಸ್ತವ್ ವಿದ್ಯುತ್ ನಿಗಮದ ಅಧಿಕಾರಿಗಳ ಜೊತೆ ಸ್ಥಳಕ್ಕೆ ಬಂದಿದ್ದರು. ಈ ವೇಳೆ ಅವರ ಮೇಲೆ ಮುಗಿಬಿದ್ದ ದುಷ್ಕರ್ಮಿಗಳು, ಇನ್ಸ್ಪೆಕ್ಟರ್ ದೀಪಕ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅವರೊಬ್ಬ ಪೊಲೀಸ್ ಅಧಿಕಾರಿ ಅಂತಾನೂ ನೋಡದ ಕಿಡಿಕೇಡಿಗಳು ಅವ್ಯಾಚ್ಯವಾಗಿ ನಿಂದಿಸಿದ್ದಲ್ಲದೇ, ರಕ್ತ ಬರೋ ಹಾಗೆ ಹೊಡೆದಿದ್ದಾರೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
Warning: Disturbing visuals, abusive language
Deepak Srivastava, a @uppolice inspector with power corporation was attacked by a mob in Varanasi during check of power theft by local shop owners near Pandeypur flyover. pic.twitter.com/13WHS3rIPJ
— Piyush Rai (@Benarasiyaa) June 9, 2019
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post