ಮಹಿಳಾ ಸಿವಿಲ್ ಪೊಲೀಸ್ ಅಧಿಕಾರಿಯನ್ನ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬ ಜೀವಂತವಾಗಿ ಸುಟ್ಟುಹಾಕಿರುವ ಘಟನೆ ಕೇರಳದ ಅಲಾಪ್ಪುಜ ಜಿಲ್ಲೆಯಲ್ಲಿ ನಡೆದಿದೆ. ಮವೆಲಿಕರ್ ಬಳಿ ವಲ್ಲಿಕುನ್ನಮ್ನ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸೌಮ್ಯ ಪುಷ್ಕರಣ್ ಎಂಬ ಅಧಿಕಾರಿಯನ್ನ ಅಲುವಾ ಟ್ರಾಫಿಕ್ ಪೊಲೀಸ್ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಅಜಾಜ್ ಅನ್ನೋ ಅಧಿಕಾರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. 34 ವರ್ಷದ ಸೌಮ್ಯ ಮೃತ ದುರ್ದೈವಿ. ಇನ್ನು ಸೌಮ್ಯ ಪತಿ ವಿದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇಬ್ಬರು ಮಕ್ಕಳಿದ್ದಾರೆ. ಸೌಮ್ಯ ನಿನ್ನೆ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದರು ಈ ವೇಳೆ ಕಾರಿನಲ್ಲಿ ಬಂದು ಅಡ್ಡಗಟ್ಟಿದ ಅಜಾಜ್ ಕತ್ತಿಹಿಡಿದು ಸೌಮ್ಯರತ್ತ ನುಗ್ಗಿದ್ದಾನೆ. ಈ ವೇಳೆ ಸೌಮ್ಯ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದ್ರೆ ಬಿಡದೇ ಬೆನ್ನತ್ತಿದ ಅಜಾಜ್ ಆಕೆಯನ್ನ ಮಚ್ಚಿನಿಂದ ಕೊಚ್ಚಿ ನಂತರ ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟಿದ್ದಾನೆ. ಕೃತ್ಯದಲ್ಲಿ ಅಜಾಜ್ಗೂ ಹಲವು ಕಡೆ ಸುಟ್ಟ ಗಾಯಗಳಾಗಿವೆ. ಸದ್ಯ ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದ್ರೆ ಅಜಾಜ್ ಕೊಲೆ ಮಾಡುವುದಕ್ಕೆ ಪ್ರಮುಖ ಕಾರಣ ಏನು ಅನ್ನೋದು ಇನ್ನೂ ತಿಳಿದು ಬಂದಿಲ್ಲ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post