ಬೆಂಗಳೂರು: ರಾಜ್ಯ ಸರ್ಕಾರ ರಾತ್ರೋ ರಾತ್ರಿ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ. ಬೆಂಗಳೂರು ಪೊಲೀಸ್ ಕಮೀಷನರ್ ಆಗಿದ್ದ ಟಿ. ಸುನೀಲ್ ಕುಮಾರ್ ಜಾಗಕ್ಕೆ ನಗರ ಸಿಸಿಬಿ ಹೆಚ್ಚುವರಿ ಆಯುಕ್ತರಾಗಿದ್ದ ಅಲೋಕ್ ಕುಮಾರ್ರನ್ನು ನೇಮಿಸಲಾಗಿದೆ. ಪೊಲೀಸ್ ಕಮಿಷನರ್ ರೇಸ್ನಲ್ಲಿ ಸುನಿಲ್ ಅಗರ್ವಾಲ್, ಭಾಸ್ಕರ್ ರಾವ್, ಅಲೋಕ್ ಮೋಹನ್, ಕಮಲ್ ಪಂತ್ ಹಾಗೂ ಪ್ರತಾಪ್ ರೆಡ್ಡಿ ಇದ್ದರು. ಆದ್ರೆ ಎಲ್ಲರನ್ನ ಬದಿಗಿಟ್ಟು ರೌಡಿಗಳಿಗೆ ಸಿಂಹಸ್ವಪ್ನ ಆಗಿದ್ದ ಅಲೋಕ್ ಕುಮಾರ್ರನ್ನು, ಬೆಂಗಳೂರು ನೂತನ ಪೊಲೀಸ್ ಕಮೀಷನರ್ ಆಗಿ ನೇಮಕ ಮಾಡಲಾಗಿದೆ. ಒಟ್ಟು 19 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಇನ್ನು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ ಚೆನ್ನಣ್ಣನವರ್ ಅವರನ್ನು ಕೂಡ ಸಿಐಡಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಗೌರಿ ಲಂಕೇಶ್ ಹತ್ಯೆ ಕೇಸ್ನಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದ ಎಂ.ಎನ್ ಅನುಚೇತ್ರನ್ನು ಬೆಂಗಳೂರು ರೈಲ್ವೇ ಎಸ್ಪಿ ಆಗಿ ವರ್ಗಾವಣೆ ಮಾಡಲಾಗಿದೆ.
ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಬಿಕೆ ಸಿಂಗ್ರನ್ನು ಸೆಕ್ರೇಟರ್ ಆಫ್ ಗೌರ್ನಮೆಂಟ್ ಮತ್ತು ಹೋಂ ಡಿಪಾರ್ಟ್ ಮೆಂಟ್ ಐಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ಆಡಳಿತ ವಿಭಾಗದ ಐಜಿಪಿ ಆಗಿದ್ದ ಅಮ್ರಿತ್ ಪೌಲ್ರನ್ನು ದಾವಣಗೆರೆ ಈಸ್ಟ್ರನ್ ರೇಂಜ್ಗೆ ವರ್ಗಾಯಿಸಲಾಗಿದೆ. ಸಧರನ್ ರೇಂಜ್ನ ಮೈಸೂರು ಐಜಿಪಿ ಆಗಿದ್ದ ಉಮೇಶ್ ಕುಮಾರ್ರನ್ನು ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಸೋಮೇಂದ್ ಮುಖರ್ಜಿಯನ್ನು ಐಜಿಪಿ ಈಸ್ಟ್ರನ್ ರೇಂಜ್ನಿಂದ ಐಎಸ್ಡಿಗೆ ವರ್ಗಾವಣೆ ಮಾಡಲಾಗಿದೆ. ಇನ್ನು ಬಿ.ರಮೇಶ್ರನ್ನು ಪಶ್ಚಿಮ ವಿಭಾಗದ ಡಿಸಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ಅಗ್ನಿಶಾಮಕ ದಳದ ಡಿಐಜಿಪಿ ಆಗಿದ್ದ ಬಿಆರ್.ರವೀಕಾಂತೆಗೌಡರನ್ನು ಸಿಸಿಬಿ ಡಿಐಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ಐಎಂಎ ವಂಚನೆ ಪ್ರಕರಣದಲ್ಲಿ ರವೀಕಾಂತೆ ಗೌಡ ಎಸ್ಐಟಿ ತಂಡದ ನೇತೃತ್ವ ವಹಿಸಿದ್ದರು.
ಇನ್ನು ಬೆಂಗಳೂರು ಗ್ರಾಮಾಂತರ ಎಸ್ಪಿ ಆಗಿದ್ದ ರಾಮ್ ನಿವಾಸ್ ಸೆಪಟ್ರನ್ನು ಎಸಿಬಿಗೆ ವರ್ಗಾವಣೆ ಮಾಡಲಾಗಿದೆ. ರಾಘವೇಂದ್ರ ಸುಹಾಸ್ರನ್ನು ಐಜಿಪಿ ನಾರ್ಥರನ್ ರೇಂಜ್ನಿಂದ ಸಧರನ್ ರೇಂಜ್ಗೆ ವರ್ಗಾವಣೆ ಮಾಡಲಾಗಿದೆ. ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣ ಮೂರ್ತಿಯವರನ್ನು ಎಫ್ಎಸ್ಎಲ್ ಡೈರೆಕ್ಟರ್ ಆಗಿ ವರ್ಗಾವಣೆ ಮಾಡಲಾಗಿದೆ. ರೈಲ್ವೇ ಎಸ್ಪಿ ಆಗಿದ್ದ ಭೀಮಶಂಕರ್ ಗುಳೇದ್ ಈಶಾನ್ಯ ವಿಭಾಗದ ಡಿಸಿಪಿ ಆಗಿ ವರ್ಗಾವಣೆಯಾಗಿದ್ದಾರೆ. ಇನ್ನು ಎನ್. ವಿಷ್ಣುವರ್ಧನ್, ಆಡಳಿತ ವಿಭಾಗದ ಡಿಸಿಪಿ ಆಗಿ ವರ್ಗಾವಣೆಯಾಗಿದ್ದಾರೆ.
ಕೆಎಸ್ಆರ್ಪಿ ನಾಲ್ಕನೇ ಬೆಟಾಲಿಯನ್ ಕಮಾಂಡೆಂಟ್ ಆಗಿದ್ದ ಮೊಹಮ್ಮದ್ ಸುಜೀತಾರನ್ನು ಕೋಲಾರದ ಎಸ್ಪಿ ಆಗಿ ವರ್ಗಾವಣೆ ಮಾಡಲಾಗಿದೆ. ಹೋಂ ಗಾರ್ಡ್ ಮತ್ತು ಸಿವಿಲ್ ಡಿಫೆನ್ಸ್ ಕಮಾಂಡೆಂಟ್ ಆಗಿದ್ದ ಟಿ.ಪಿ.ಶಿವಕುಮಾರ್ರನ್ನು ಬೆಂಗಳೂರು ಗ್ರಾಮಾಂತರ ಎಸ್ಪಿ ಆಗಿ ವರ್ಗಾವಣೆ ಮಾಡಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post