ಠಾಣೆ (ಮಹಾರಾಷ್ಟ್ರ): ಚಿರತೆಯ ಬಾಯಿಗೆ ಆಹಾರ ಆಗುತ್ತಿದ್ದ ತನ್ನ ಸಹೋದರನನ್ನ ಪ್ರಾಣಾಪಾಯವನ್ನೂ ಲೆಕ್ಕಿಸದೇ 14 ವರ್ಷದ ಬಾಲಕನೊಬ್ಬ ರಕ್ಷಣೆ ಮಾಡಿ ಸಾಹಸಗೈದಿದ್ದಾನೆ.
ಠಾಣೆ ಜಿಲ್ಲೆಯ ಕರ್ಪಟ್ವಡಿ ಗ್ರಾಮದ ಕಲುರಾಮ್ ಭಾಲಾ (14) ಚಿರತೆಯೊಂದಿಗೆ ಹೋರಾಡಿ ತನ್ನ ಕಸಿನ್ ಸಹೋದರ ಹರ್ಷದ್ (7) ಅವರನ್ನ ರಕ್ಷಿಸಿದ ಬಾಲಕ. ಈ ಇಬ್ಬರು ಬಾಲಕರು ಕಳೆದ ಶುಕ್ರವಾರ ಸಂಜೆ ವೇಳೆಗೆ ಅಜ್ಜಿಯ ಜೊತೆಗೆ ಮುರ್ದಾಬಾದ್ ಅರಣ್ಯದಲ್ಲಿರುವ ತಮ್ಮ ಜಮೀನಿಗೆ ಹೋಗಿದ್ದರು. ಅಜ್ಜಿ ಕೃಷಿಯಲ್ಲಿ ಬ್ಯುಸಿಯಾಗಿದ್ದರು.
ಈ ವೇಳೆ ಈ ಇಬ್ಬರು ಬಾಲಕರು ಕಾಡಿನಲ್ಲಿರುವ ಹಣ್ಣುಗಳನ್ನ ಹುಡುಕುತ್ತ ಹೋಗಿದ್ದರು. ಈ ವೇಳೆ ಚಿರತೆ 7 ವರ್ಷದ ಬಾಲಕ ಹರ್ಷದ್ ಮೇಲೆ ಚಿರತೆ ಅಟ್ಯಾಕ್ ಮಾಡಿದೆ. ಇದನ್ನ ನೋಡಿದ ಕಲುರಾಮ್ ಕೂಡಲೇ ಚಿರತೆಯತ್ತ ಕಲ್ಲನ್ನ ಎಸೆದಿದ್ದಾನೆ. ಆದ್ರೆ ಚಿರತೆ ಹರ್ಷದ್ನನ್ನ ಬಲಾಗಿ ಕಚ್ಚಿ ಹಿಡಿದಿದ್ದರಿಂದ ಬಿಟ್ಟಿರಲಿಲ್ಲ. ಅಷ್ಟಕ್ಕೂ ಗಾಬರಿಯಾಗದ ಬಾಲಕ ಕಲುರಾಮ್, ಕಾಡಿನಲ್ಲಿ ಬಿದ್ದಿದ್ದ ಕಟ್ಟಿಗೆಯನ್ನ ಎತ್ತಿಕೊಂಡು ಚಿರತೆಯನ್ನ ನುಗ್ಗಿ, ಥಳಿಸಿದ್ದಾನೆ.
ಜೋರಾಗಿ ಹೊಡೆದರೂ ಚಿರತೆ ಆ ಬಾಲಕನನ್ನ ಬಿಟ್ಟಿರಲಿಲ್ಲ. ತನ್ನ ಅಜ್ಜಿಯನ್ನ ಕರೆಯುತ್ತಾ ಮತ್ತೆ ಮತ್ತೆ ಜೋರಾಗಿ ಹೊಡೆದಾಗ ಅಲ್ಲಿಂದ ಚಿರತೆ ಎಸ್ಕೆಪ್ ಆಗಿದೆ. ನಂತರ ಬಾಲಕರ ಅಜ್ಜಿ ಬಂದು ಇಬ್ಬರೂ ಮೊಮ್ಮಕ್ಕಳನ್ನ ಮನೆಗೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಚಿರತೆ ದಾಳಿಗೆ ಒಳಗಾದ ಹರ್ಷದ್ ಬೆನ್ನು, ತಲೆ, ಕೈಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನು ಆತನ ರಕ್ಷಣೆ ಮಾಡಿದ ಬಾಲಕ ಕಲುರಾಮ್ ಕೈಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ನಡೆದ 300 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಚಿರತೆಯೊಂದು ಮೃತಪಟ್ಟಿದ್ದನ್ನ ಅಲ್ಲಿನ ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿದ್ದರು. ನಂತರ ಅದನ್ನ ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್ನಲ್ಲಿ ತೆಗೆದುಕೊಂಡು ಹೋಗಿ ಶವ ಪರೀಕ್ಷೆಯನ್ನ ನಡೆಸಲಾಗಿತ್ತು.
ಇನ್ನು, ಚಿರತೆಯೊಂದಿಗೆ ಹೋರಾಡಿ ತನ್ನ ತಮ್ಮನನ್ನ ರಕ್ಷಣೆ ಮಾಡಿದ ಕಾರಣಕ್ಕೆ ಟೊಕವಾಡೆ ಠಾಣೆ ಪೊಲೀಸರು 14 ವರ್ಷದ ಬಾಲಕನನ್ನ ಸನ್ಮಾನಿಸಿ ಪ್ರಶಂಸಿದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post