ಜಾತಿ-ಧರ್ಮಗಳ ನಡುವೆ ಕಲಹ, ತಿಕ್ಕಾಟ ಬರೀ ಇದೇ ಸುದ್ದಿಯಾಯ್ತು ಅನ್ನೋದ್ರ ನಡುವೆ ಸೌಹಾರ್ದತಯುತ ಸುದ್ದಿಯೊಂದು ಅಯೋಧ್ಯೆಯಿಂದ ಬಂದಿದೆ.
ಅಯೋಧ್ಯೆಯಲ್ಲಿನ ಮುಸಲ್ಮಾನರಿಗಾಗಿ ಖಬರಿಸ್ತಾನ್ ಸ್ಥಳವನ್ನು ಹಿಂದೂಗಳು ಬಿಟ್ಟುಕೊಟ್ಟಿದ್ದಾರೆ. ಉತ್ತರ ಪದ್ರದೇಶದ ಗೋಸೈಗಂಜ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೆಲಾರಿಖಾನ್ ಗ್ರಾಮದ ಹಿಂದೂಗಳು ಸಮಾಧಿ ಜಾಗ ಗಿಫ್ಟ್ಆಗಿ ನೀಡಿದ್ದಾರೆ.
ದಾಖಲೆ ಪ್ರಕಾರ ಈ ಜಮೀನು ಹಿಂದೂಗಳಿಗೆ ಸೇರಿದ್ದಂತೆ. ಆದ್ರೆ, ಈ ಸ್ಥಳಕ್ಕಾಗಿ ಅನೇಕ ವರ್ಷಗಳಿಂದ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಹಿಂದೂಗಳು ಸಮಾಧಿ ಮಾಡುತ್ತಿದ್ದ ಇದೇ ಜಾಗದಲ್ಲಿಯೇ ಮುಸಲ್ಮಾನರು ಕೂಡಾ ಸಮಾಧಿ ಮಾಡುತ್ತಿದ್ರಂತೆ. ಈ ಹಿನ್ನೆಲೆ ಅಲ್ಲಿನ ಸ್ಥಳೀಯರು ಇಡೀ ಜಮೀನನ್ನು ಮುಸಲ್ಮಾನರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಸದ್ಯ, ಗ್ರಾಮದ ಹಿರಿಯ ಸ್ವಾಮೀಜಿ ಸೂರ್ಯ ಕುಮಾರ್ ಝಿಂಕಾನ್ ಮಹರಾಜ್ ಸೇರಿದಂತೆ 8 ಜನರು ಆ ಸ್ಥಳವನ್ನು ಮುಸಲ್ಮಾನರಿಗೆ ರಿಜಿಸ್ಟರ್ ಮಾಡಿಸಿಕೊಟ್ಟಿದ್ದಾರೆ. ಈ ಸಂಬಂಧ ಅಲ್ಲಿನ ಸಬ್ ರಿಜಿಸ್ಟ್ರಾರ್ ದೃಢ ಪಡಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post