ಮೈಸೂರು: ಮಂಡ್ಯದಲ್ಲಿ ನೀರಿಗಾಗಿ ರೈತರು ಪ್ರತಿಭಟನೆ ಮಾಡುತ್ತಿರುವ ವಿಚಾರವಾಗಿ ಲೋಕಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಕೂತು ರಾಜಕೀಯ ಮಾಡಿದ್ರೆ ನಾವ್ಯಾಕೆ ಅಲ್ಲಿಗೆ ಹೋಗಬೇಕು, ಅಂತಾ ಪ್ರತಿಭಟನಾ ಸ್ಥಳಕ್ಕೆ ಮಂಡ್ಯ ಜೆಡಿಎಸ್ ಜನಪ್ರತಿನಿಧಿಗಳು ಹೋಗದೇ ಇರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ ಸಮಸ್ಯೆ ಬಗ್ಗೆ ಗೊತ್ತಿರುವವರ ಬಳಿಯೇ ಹೋಗಿ ಮಾತನಾಡಬಹುದು. ಆದ್ರೆ ಸಮಸ್ಯೆ ಗೊತ್ತಿಲ್ಲದವರ ಬಳಿ ಏನ್ ಮಾತನಾಡೋದು. ನೀರು ಬಿಡೋದು ನಮ್ಮ ಕೈಯಲ್ಲಿ ಇಲ್ಲ. ಮಂಡ್ಯವನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ನಮಗೆ ಹಾಸನವು ಒಂದೇ, ಮಂಡ್ಯವೂ ಒಂದೆ. ಕೆಲವರಿಗೆ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡದಿದ್ದರೆ ನಿದ್ರೆ ಬರಲ್ಲ. ಅದಕ್ಕೆ ಸುಮ್ಮನೆ ಎಲ್ಲದಕ್ಕೂ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುತ್ತಾರೆ. ದೇವೇಗೌಡರು ನೀರು ಬಿಡಿಸೋಕೆ ಆಗುತ್ತಾ? ಪಾಪ, ಅವರೇ ಸೋತು ಮನೆಯಲ್ಲಿ ಕುಳಿತಿದ್ದಾರೆ. ಅವರೇನು ಮಾಡೋಕಾಗುತ್ತೆ ಎಂದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post