ಬೆಂಗಳೂರು: ಸಂಕಷ್ಟದಲ್ಲಿರುವ ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ನಾಯಕರೆಲ್ಲರೂ ಒಂದೊಂದು ರೀತಿಯ ಸರ್ಕಸ್ ಮಾಡುತ್ತಿದ್ರೆ ಲೋಕೋಪಯೋಗಿ ಸಚಿವ ರೇವಣ್ಣ ಮಾತ್ರ ದೇವರ ಮೊರೆ ಹೋಗಿದ್ದಾರೆ. ದೇವರು, ಜ್ಯೋತಿಷ್ಯ, ಶಾಸ್ತ್ರಗಳನ್ನ ಬಲವಾಗಿ ನಂಬಿರುವ ರೇವಣ್ಣ, ಮೈತ್ರಿ ಸರ್ಕಾರ ಉಳಿಸಲು ದೇವರಿಂದ ಮಾತ್ರ ಸಾಧ್ಯ ಅಂತಾ ದೇವರ ಪಾದ ಹಿಡಿದಿದ್ದಾರೆ. ಇದಕ್ಕಾಗಿ ಹರಕೆ ಕಟ್ಟಕೊಂಡಿರುವ ಅವರು ಕಳೆದ ಐದು ದಿನಗಳಿಂದ ಕಾಲಿಗೆ ಚಪ್ಪಲಿ ಹಾಕದೇ ಬರಿಗಾಲಿನಲ್ಲಿಯೇ ಓಡಾಡುತ್ತಿದ್ದಾರೆ. ನಿನ್ನೆ ಆಷಾಢದ ಎರಡನೇ ಶನಿವಾರವಾದ ಮೈಸೂರಿನ ಚಾಮುಂಡೇಶ್ವರಿ ತಾಯಿದ ದರ್ಶನ ಪಡೆದಿದ್ದರು.ಇನ್ನು ಇಂದು ಬೆಂಗಳೂರಿನ ಜಯನಗರ 4ನೇ ಬ್ಲಾಕ್ನಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮ ಮಾಡಿಸಿದ್ದಾರೆ. ವಿಶ್ವಾಸ ಮತಯಾಚನೆಯಲ್ಲಿ ಕುಮಾರಸ್ವಾಮಿ ಗೆಲುವಿಗಾಗಿ ಹೋಮ ಮಾಡಿಸುತ್ತಿದ್ದಾರೆ. ಒಟ್ಟಾರೆ ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ನಾಯಕರು ಅತೃಪ್ತರ ಮನವೊಲಿಸಲು ಸರ್ಕಸ್ ಮಾಡ್ತಿದ್ರೆ, ರೇವಣ್ಣ ಮಾತ್ರ ಆ ದೇವರನ್ನೇ ವೊಲಿಸಿಕೊಳ್ಳುವ ಯತ್ನದಲ್ಲಿದ್ದಾರೆ.
ಇದನ್ನೂ ಓದಿ: ಒಂದೆಡೆ ರಾಜೀನಾಮೆ ಪರ್ವ, ಇನ್ನೊಂದೆಡೆ ವಿಧಾನಸೌಧಕ್ಕೆ ಬರಿಗಾಲಲ್ಲೇ ಬಂದ ರೇವಣ್ಣ, ಏನಿದರ ಮರ್ಮ..?!
ಇದನ್ನೂ ಓದಿ: ಸರ್ಕಾರ ಉಳಿಸಿಕೊಳ್ಳಲು ಚಾಮುಂಡೇಶ್ವರಿ ಮೊರೆ ಹೋದ ಹೆಚ್.ಡಿ ರೇವಣ್ಣ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post