ಕ್ಲಾಸ್ ರೆಪ್ರೆಸೆಂಟೇಟೀವ್ ಚುನಾವಣೆಯಲ್ಲಿ ಸೋತ ನಂತರ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಭೋಂಗೀರ್ನಲ್ಲಿ ನಡೆದಿದೆ. ಚರಣ್(13) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಚರಣ್ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದು ಇತ್ತೀಚಿಗೆ ಅವರ ಶಾಲೆಯ ಆಡಳಿತ ಮಂಡಳಿ ಕ್ಲಾಸ್ ಲೀಡರ್ ಚುನಾವಣೆ ನಡೆಸಿತ್ತು. ಈ ಚುನಾವಣೆಯಲ್ಲಿ ಭಾಗವಹಿಸಿದ ಚರಣ್ ತನ್ನ ಸಹಪಾಠಿ ಎದುರು ಸೋಲು ಅನುಭವಿಸಿದ್ದ. ಇದಾದ ಬಳಿಕ ಗುರುವಾರದಿಂದ ಈತ ಕಾಣೆಯಾಗಿದ್ದ. ಹೀಗಾಗಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಚರಣ್ನ ಶೋಧ ಕಾರ್ಯ ಆರಂಭಿಸಿದ್ದರು. ನಂತರ ರಾಮಣ್ಣಪೇಟೆ ರೈಲ್ವೆ ಟ್ರಾಕ್ನಲ್ಲಿ ಚರಣ್ ಶವವಾಗಿ ಪತ್ತೆಯಾಗಿದ್ದಾನೆ. ಚುನಾವಣೆಯಲ್ಲಿ ಸೋತ ಕಾರಣ ಮನನೊಂದು ಚರಣ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಭೋಂಗಿರ್ನ ಡಿಸಿಪಿ ನಾರಾಯಣ ರೆಡ್ಡಿ ಹೇಳಿದ್ದಾರೆ.
ಚುನಾವಣೆಯಲ್ಲಿ ಸೋತ ಕಾರಣ ಚರಣ್ ಕಳೆದ ಮೂರು ದಿನಗಳಿಂದ ಡಿಸ್ಟರ್ಬ್ ಆಗಿದ್ದ. ವಿದ್ಯಾರ್ಥಿನಿ ವಿರುದ್ಧ ಆತ ಎಲೆಕ್ಷನ್ ಸೋತಿದ್ದ. ಇದಾದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರೆಡ್ಡಿ ತಿಳಿಸಿದ್ದಾರೆ.
ಬಾಲಕನ ಶವವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೋಷಕರು ಶಾಲಾ ಆಡಳಿತ ಮಂಡಳಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post