ದೇಶದಲ್ಲಿ ಆರ್ಥಿಕತೆಗೆ ಕುತ್ತಾಗಿರುವ ನಿರುದ್ಯೋಗದ ಸಮಸ್ಯೆಯನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಹೆಚ್ಚಿನ ಯೋಜನೆಗಳನ್ನ ತಂದರೂ ಸಹ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಆಂಧ್ರ ಪ್ರದೇಶದಲ್ಲಿ ಕಾನೂನುರೂಪಿಸಿದೆ.
ರಾಜ್ಯದ ಖಾಸಗೀ ಉದ್ಯಮಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಶೇ.75 ರಷ್ಟು ಉದ್ಯೋಗವನ್ನು ಕಾದಿರಿಸಿದ ಮೊದಲ ರಾಜ್ಯವೆಂಬ ಹೆಗ್ಗಳಿಕೆಯನ್ನ ಆಧ್ರಪ್ರದೇಶ ಪಡೆದುಕೊಂಡಿದೆ. ರಾಜ್ಯದಲ್ಲಿ ಹೊರಡಿಸಿರುವ ಹೊಸ ಕಾನೂನಿನ ಪ್ರಕಾರ ರಾಜ್ಯದಲ್ಲಿರುವ ಯಾವುದೇ ಖಾಸಗಿ ಕಂಪನಿ ಶೇ.75ರಷ್ಟು ಉದ್ಯೋಗದ ಮೀಸಲಾತಿಯನ್ನ ಸ್ಥಳೀಯ ಯುವಕರಿಗೆ ನೀಡಬೇಕು. ಹಾಗೂ ಅವರಿಗೆ ಅಗತ್ಯವಿರುವ ಕೌಶಲ್ಯಗಳನ್ನು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ತರಬೇತಿ ನೀಡಬೇಕಾಗುತ್ತದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಈ ಯೋಜನೆಯನ್ನು ರೂಪಿಸಿದ್ದು .ಇದು ಇವರು ಚುನಾವಣೆಗೂ ಮುನ್ನ ರಾಜ್ಯದ ಯುವಕರಿಗೆ ನೀಡಿದ ಭರವಸೆಯಾಗಿತ್ತು. ಈ ಮೀಸಲಾತಿ ಪ್ರಕಾರ ರಾಜ್ಯದಲ್ಲಿರುವ ನಿರುದ್ಯೋಗಿಗಳಿಗೆ 1.33 ಲಕ್ಷ ಗ್ರಾಮ ಸ್ವಯಂಸೇವಕ ಉದ್ಯೋಗಗಳನ್ನು ಸರ್ಕಾರ ಘೋಷಣೆ ಮಾಡಿದೆ. ಇನ್ನು ಮೂರು ವರ್ಷಗಳಲ್ಲಿ ಈ ಮೀಸಲಾತಿಯನ್ನು ವಿಸ್ತರಿಸುವಲ್ಲಿ ಉದ್ಯಮಿಗಳಿಗೆ ಮನವರಿಸುವ ಪ್ರಯತ್ನ ಮಾಡುತ್ತೇವೆ ಎಂದು ಸಿಎಂ ಜಗನ್ ಮೊಹನ್ ರೆಡ್ಡಿ ಆಶ್ವಾಸನೆ ನೀಡಿದ್ದಾರೆ.
ಇನ್ನು ಹಲವು ರಾಜ್ಯಗಳು ಸ್ಥಳೀಯರಿಗೆ ಉದ್ಯೋಗ ಕಾಯ್ದಿರಿಸುವ ಆಲೋಚನೆಗೆ ಹೆಜ್ಜೆಯಿಟ್ಟಿದೆ. ಸ್ಥಳೀಯ ಯುವಕರನ್ನ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳುವು ಉತ್ತಮ ಯೋಜನೆಯಾಗಿದ್ದು. ಯುವಕರಿಗೆ ಉದ್ಯೋಗಕ್ಕೆ ಪೂರಕವಾದ ಕೌಶಲ್ಯ ಹೆಚ್ಚಿಸಲು ತರಬೇತಿಗಳನ್ನು ನೀಡುವುದರ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post