ನವದೆಹಲಿ: ಆರ್ಟಿಕಲ್ 370 ರದ್ದು ಮಾಡಿರೋದು ಸಂವಿಧಾನ ಬಾಹಿರ ಮತ್ತು ಪ್ರಜಾಪ್ರಭುತ್ವ ವಿರೋಧಿ ಅಂತಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಆರೋಪಿಸಿದ್ದಾರೆ. ಈ ಬಗ್ಗೆ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದ್ದು, ‘ದೇಶದ ಎಲ್ಲಾ ರಾಜ್ಯಗಳ ಸಮಾನತೆಯ್ನ ಜಮ್ಮು-ಕಾಶ್ಮೀರಕ್ಕೂ ಮೋದಿ ಸರ್ಕಾರ ತರಲು ಹೊರಟಿರುವ ರೀತಿ ಪ್ರಜಾಪ್ರಭುತ್ವದ ವಿರುದ್ಧವಾಗಿದೆ. ಇದೊಂದು ಸಂಪೂರ್ಣ ಅಸಂವಿಧಾನಾತ್ಮಕ ಕ್ರಮವಾಗಿದೆ. ಅಲ್ಲದೇ ಪ್ರಜಾಪ್ರಭುತ್ವದ ನೀತಿಗಳ ವಿರೋದ್ಧವಾಗಿದೆ. ಒಂದು ವೇಳೆ ಮೋದಿ ಸರ್ಕಾರ 370 ಆರ್ಟಿಕಲ್ ರದ್ದು ಮಾಡಲೇಬೇಕು ಅಂತಿದ್ರೆ, ಕೆಲವು ನಿಯಮಗಳನ್ನ ಪಾಲಿಸಬೇಕಿತ್ತು. ಆದರೆ ಅದನ್ನ ಎನ್ಡಿಎ ಸರ್ಕಾರ ಮಾಡಿಲ್ಲ ಅಂತಾ ಆರೋಪಿಸಿದ್ದಾರೆ ಅಂತಾ ಎಎನ್ಐ ಸುದ್ದಿಸಂಸ್ಥೆ ತಿಳಿಸಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post