ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ನೆರೆ ಪರಿಹಾರ ಕೊಡುವುದಕ್ಕೆ ಆಗುವುದಿಲ್ಲ. ರಾಜ್ಯಕ್ಕೆ ಆಗಮಿಸಿ ನೆರೆ ಪ್ರದೇಶಗಳನ್ನ ವೀಕ್ಷಣೆ ಮಾಡಲು ಅಗುವುದಿಲ್ಲ. ಆದ್ರೆ ಕಾಡಿನಲ್ಲಿ ಯಾವುದಾದರೂ ಪ್ರಾಣಿಗಳನ್ನು ತೋರಿಸುತ್ತೇವೆ ಬನ್ನಿ ಅಂದ್ರೆ ಹೋಗ್ತ್ತಾರೆ. ಕಾಡಿನಲ್ಲಿ ಶೂಟಿಂಗ್ ಇದೆ ಬನ್ನಿ ಅಂದ್ರೆ ಹೋಗ್ತ್ತಾರೆ ಅಂತಾ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವ್ಯಂಗ್ಯವಾಡಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಪ್ರವಾಹದಿಂದ 48 ಜನರು ಹಾಗೂ ಸಾವಿರಾರು ಜಾನುವಾರುಗಳು ಮೃತಪಟ್ಟಿವೆ. ಇಷ್ಟೆಲ್ಲಾ ಆದ್ರು ಕೇಂದ್ರ ಸರ್ಕಾರ ಮಾತ್ರ ಕುಂಭಕರ್ಣ ನಿದ್ರೆಯಲ್ಲಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಪರಿಹಾರ ನೀಡುತ್ತಿಲ್ಲ. ನೆರೆಯಿಂದ 48 ಜನ ಸಾವನ್ನಪ್ಪಿದ್ದಾರೆ. 12 ಮಂದಿ ಕಣ್ಮರೆಯಾಗಿದ್ದಾರೆ. ಕನಿಷ್ಟ ₹5 ಸಾವಿರ ಕೋಟಿ ಅನುದಾನ ಘೋಷಿಸಬೇಕಿತ್ತು, ಆದ್ರೆ ಘೋಷಣೆಯಾಗಿಲ್ಲ.
ಬಿಜೆಪಿಯವರು ಸರ್ಕಾರವನ್ನ ವಾಮಮಾರ್ಗದಲ್ಲಿ ತರಲು ಏನೆಲ್ಲಾ ಪ್ರಯತ್ನ ನಡೆಸಿದ್ರು. ಶಾಸಕರನ್ನ ಖರೀದಿಸಲು ಎಷ್ಟೆಲ್ಲಾ ಖರ್ಚು ಮಾಡಿದ್ರು. ಈಗ ಯಾಕೆ ರಾಜ್ಯಕ್ಕೆ ಪರಿಹಾರ ನೀಡುತ್ತಿಲ್ಲ ಅಂತಾ ಕಿಡಿಕಾರಿದ್ರು. ಅಲ್ಲದೇ ಕೂಡಲೇ ಸರ್ಕಾರ ಅಮಾನತುಗೊಳಿಸಬೇಕೆಂದು ರಾಜ್ಯಪಾಲರಿಗೆ ಒತ್ತಾಯಿಸಿದ್ರು. ಸರ್ಕಾರ ರಚಿಸಿ 17 ದಿನಗಳಾಗಿವೆ. ಆದರೆ ಸಚಿವ ಸಂಪುಟ ರಚನೆ ಮಾಡಿಲ್ಲ. ಸಂಪುಟ ರಚಿಸದೆ ಬಿಎಸ್ವೈ ಒನ್ ಮ್ಯಾನ್ ಶೋ ಮಾಡ್ತಿದ್ದಾರೆ. ರಾಜ್ಯಪಾಲರು ಪದೇ ಪದೇ ಪತ್ರ ಬರೆಯುತ್ತಿದ್ದರು. ಆದರೆ ಈಗ ಯಾಕೆ ಮೌನವಾಗಿದ್ದಾರೆ? ಸಂಪುಟವಿಲ್ಲದೇ ಅದು ಸರ್ಕಾರ ಅನಿಸಿಕೊಳ್ಳುತ್ತದೆಯೇ? ದೇಶದ ಇತಿಹಾಸದಲ್ಲಿ ಈ ರೀತಿ ಎಂದೂ ನಡೆದಿರಲಿಲ್ಲ. 17 ದಿನದವರೆಗೆ ಸಂಪುಟ ರಚಿಸದಿರುವುದನ್ನ ನೋಡಿಲ್ಲ ಅಂತಾ ಕಿಡಿಕಾರಿದ್ರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post