ಬಿಗ್ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಅಭಿನಯದ ರಾಂಧವ ಸಿನಿಮಾ ಇದೇ ತಿಂಗಳು 23 ನೇ ತಾರೀಖು ರಿಲೀಸ್ಗೆ ರೆಡಿ ಆಗಿದೆ. ಮೇಕಿಂಗ್‌ನಿಂದ ಸದ್ದು ಮಾಡ್ತಿರೋ ಈ ಚಿತ್ರದ ಬಗ್ಗೆ ಭುವನ್ ಪೊನ್ನಣ್ಣ ನ್ಯೂಸ್ ಫಸ್ಟ್ ಜೊತೆ ವಿಸ್ತೃತವಾಗಿ ಮಾತನಾಡಿದರು. ಈ ವೇಳೆ ಕನ್ನಡ ಇಂಡಸ್ಟ್ರಿಯ ಬಹುತೇಕ ಟೆಕ್ನಿಶಿಯನ್ಸ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಭುವನ್, ಖಾರವಾಗಿಯೇ ಆರೋಪಗಳ ಸುರಿಮಳೆ ಸುರಿಸಿದ್ದಾರೆ. ವಿಶೇಷ ಸಂದರ್ಶನದಲ್ಲಿ ಭುವನ್, ತಾನು ಕಂಡಂತಹ ಕನ್ನಡ ಇಂಡಸ್ಟ್ರಿಯನ್ನ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.
ಕನ್ನಡದ ತಂತ್ರಜ್ಞರಿಗೆ ಟೈಮ್ ಸೆನ್ಸ್ ಇಲ್ಲ.!
‘ಎಷ್ಟೋ ಜನ ನ್ಯೂಯಾರ್ಕ್ ಫಿಲ್ಮ್ ಇನ್ಸ್ಟಿಟ್ಯೂಶನ್ನಲ್ಲಿ 15 ವರ್ಷ ಕಲಿತು ಡಬ್ಬ ಡಬ್ಬ ಸಿನಿಮಾ ಮಾಡ್ತಾರೆ. ವರ್ಷಕ್ಕೆ 230 ಸಿನಿಮಾಗಳು ರಿಲೀಸ್ ಆಗುತ್ವೆ. ಅದರಲ್ಲಿ 200 ಹೊಸಬರ ಸಿನಿಮಾಗಳು ಬರುತ್ತವೆ. ಬರೋ ಸಿನಿಮಾಗಳೋ, ಶಾರ್ಟ್ ಫಿಲ್ಮ್ ಗಿಂತ ಕೆಟ್ಟದಾಗಿ ಇರುತ್ತೆ. ಆಮೇಲೆ ಪ್ರಮೋಶನ್‌ಗೆ ಅಂತಾ 70-80 ಲಕ್ಷ ಖರ್ಚು ಮಾಡಿ ಕೆಟ್ಟ ಸಿನಿಮಾ ತೋರ್ಸಿ ಜನರನ್ನು ಯಾಮಾರಿಸ್ತಾರೆ. ಈಗ ಬರೋರು ಇವತ್ತು ಡಿಸ್ಕಶನ್, ನಾಳೆ ಫೈನಲೈಸ್, ನಾಡಿದ್ದು ಶೂಟ್ ಮಾಡ್ತಾರೆ. ನನಗೆ ಸಿನಿಮಾ ಮೇಲೆ ಪೂಜ್ಯ ಭಾವನೆ ಇದೆ. ಇಂತಹವರ ಮೇಲೆ ಚೂರು ರೆಸ್ಪೆಕ್ಟ್ ಇಲ್ಲ. ಹೊಸಬರ 80 ಪರ್ಸೆಂಟ್ ಚಿತ್ರಗಳು ‘ಡಬ್ಬ’ ಅಂತಾ ಭುವನ್ ಕಿಡಿಕಾರಿದರು.
‘ಹೊಸ ನಟ-ನಿರ್ದೇಶಕರು ಸಿಗರೇಟ್ ಎಳೆದುಕೊಂಡು ಪೋಸ್ ಕೊಡ್ತಾರೆ. ಪ್ರಿಪರೇಶನ್ ಇರಲ್ಲ. ಸ್ಪಾಟ್ ಅಲ್ಲಿ ಡೈಲಾಗ್ ಬರೀತಾರೆ. ನೀವೇನು ನಿಜ ಜೀವನದಲ್ಲಿ ಮಾಡಿಲ್ವಾ? ಹುಡುಗಿಯರಿಗೆ ಪ್ರೊಪೋಸ್ ಮಾಡೋದು ಅಷ್ಟೇ ಮಾಡಿ ಅಂತಾರೆ. ಕನ್ನಡ ಇಂಡಸ್ಟ್ರಿಯಲ್ಲಿ 90 ಪರ್ಸೆಂಟ್ ಅನ್ ಪ್ರೊಫೆಷನಲ್. 95 ಪರ್ಸೆಂಟ್ ಟೆಕ್ನಿಶಿಯನ್ಸ್‌ಗೆ ಟೈಮ್ ಸೆನ್ಸ್ ಇಲ್ಲ. ಟೈಮ್‌ಗೆ ಸರಿಯಾಗಿ ಕೆಲ್ಸ ಮಾಡಿ ಕೊಡಲ್ಲ. ಕರ್ನಾಟಕ ಟೆಕ್ನಿಶಿಯನ್ಸ್ ಸರಿ ಇಲ್ಲ. ಇಂತಹ ಟೆಕ್ನಿಶಿಯನ್ಸ್‌ಯಿಂದ ನನ್ನ ಚಿತ್ರ 4 ತಿಂಗಳು ಲೇಟಾಯ್ತು. ಕೇಳಿದ್ರೆ ನಾವು 40 ವರ್ಷ ಎಕ್ಸ್ಪೀರಿಯನ್ಸ್ ಅಂತ ಹೇಳಿ ಡಬ್ಬ ಥರ ಮಾಡ್ತಾರೆ. ಹಾಗಾಗಿ ನಾವು ಕರ್ನಾಟಕ ಬಿಟ್ಟು ಚೆನೈ ಗೆ ಹೋಗಿ ಪೋಸ್ಟ್ ಪ್ರೊಡಕ್ಷನ್ ಮಾಡಿಸಿದ್ವಿ’ ಅಂತಾ ತಮಗಾದ ಅನುಭವವನ್ನ ಭುವನ್ ಪೊನ್ನಣ್ಣ ನ್ಯೂಸ್ ಫಸ್ಟ್ ಇಂಟರ್‌ವ್ಯೂನಲ್ಲಿ ನೇರ ನೇರವಾಗಿಯೇ ಹೇಳಿದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post