ನವದೆಹಲಿ: ಪ್ರಧಾನಿ ಮೋದಿ ಇಂದು ಭಾರತದ ಅತ್ಯಂತ ವಿಶ್ವಾಸಾರ್ಹ ರಾಷ್ಟ್ರ, ಹಿಮಾಲಯನ್ ದೇಶ ಭೂತಾನ್‌ಗೆ ಭೇಟಿ ಕೊಟ್ಟಿದ್ದಾರೆ. ಇನ್ನೆರಡು ದಿನಗಳ ಕಾಲ ಭೂತಾನ್‌ನಲ್ಲೇ ಮೋದಿ ಉಳಿಯಲಿರೋದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಭೂತಾನ್‌ಗೆ ಬಂದಿಳಿದ ಪ್ರಧಾನಿ ಮೋದಿಯನ್ನು ಖುದ್ದು ಅಲ್ಲಿನ ಪ್ರಧಾನಿ ಲೋಟೇ ತ್ಸೆರಿಂಗ್ ಆದರದಿಂದ ಬರಮಾಡಿಕೊಂಡಿದ್ದಾರೆ. ಈ ಬಗ್ಗೆ ಮೋದಿಯವ್ರು ತಮ್ಮ ಟ್ವಿಟರ್ ಖಾತೆಯಲ್ಲಿ ಭೂತಾನೀಸ್ ಭಾಷೆಯಲ್ಲಿ ಬರೆದುಕೊಂಡು ಧನ್ಯವಾದ ಅರ್ಪಿಸಿದ್ದಾರೆ. ಮೋದಿ ಟ್ವೀಟ್‌ಗೆ ರಿಪ್ಲೈ ಮಾಡಿದ ಭೂತಾನ್ ಪ್ರಧಾನಿ ಲೋಟೇ ತ್ಸೆರಿಂಗ್ ನಮ್ಮ ರಾಷ್ಟ್ರೀಯ ಭಾಷೆಯಲ್ಲಿ ಟ್ವೀಟ್ ಮಾಡಿದ್ದಕ್ಕೆ ಧನ್ಯವಾದ ಅಂತಾ ಹೇಳಿದ್ದಾರೆ.
Narendra Modiji’s first tweet after landing to Bhutan in our national language.
Thank you sir. https://t.co/3byA07Daag— PM Bhutan (@PMBhutan) August 17, 2019
‘ನೆರೆ-ಹೊರೆ ಮೊದಲು’ ನೀತಿಗೆ ಒತ್ತು..!
ಪ್ರಧಾನಿ ಮೋದಿ ಮತ್ತು ಭೂತಾನ್ ಪ್ರಧಾನಿ ಲೋಟೇ ತ್ಸೆರಿಂಗ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಅಲ್ಲದೇ ಹಲವಾರು ಮಹತ್ವದ ಒಪ್ಪಂದಗಳಿಗೆ ಉಭಯ ದೇಶದ ಪ್ರಧಾನಿಗಳು ಅಂಕಿತ ಹಾಕುವ ನಿರೀಕ್ಷೆಯಿದೆ. ಅದ್ರಲ್ಲೂ ‘ನೆರೆ-ಹೊರೆ ಮೊದಲು’ ನೀತಿ ಬಗ್ಗೆಯೂ ಇಬ್ಬರೂ ಮಾತುಕತೆ ನಡೆಸಲಿದ್ದಾರೆ. ಅದನ್ನು ಹೊರತುಪಡಿಸಿ ಎರಡು ದೇಶಗಳ ನಡುವೆ ಅಭಿವೃದ್ಧಿ, ಸಹಕಾರ, ಆರ್ಥಿಕತೆ ಬಗ್ಗೆಯೂ ಚರ್ಚೆ ಆಗಲಿದೆ. ಅಂದಹಾಗೆ ಪ್ರಧಾನಿ ಮೋದಿ ಭೂತಾನ್‌ಗೆ ಕೊಡುತ್ತಿರುವ ಎರಡನೇ ಭೇಟಿ ಇದಾಗಿದೆ.
ಸಾಮಾನ್ಯವಾಗಿ ಭಾರತದ ಪ್ರಧಾನಮಂತ್ರಿಗಳು ಭೂತಾನ್ನಂತಹ ಪುಟ್ಟ ದೇಶದಲ್ಲಿ ಎರಡು ದಿನ ಉಳಿದ ಉದಾಹರಣೆಗಳಿಲ್ಲ. ಹೀಗಾಗಿ, ಚೀನಾ ಮತ್ತು ಭಾರತದ ನಡುವೆ ಆಯಕಟ್ಟಿನ ಸ್ಥಳದಲ್ಲಿರೋ ಭೂತಾನ್‌ಗೆ ಪ್ರಧಾನಿ ಮೋದಿ ಭೇಟಿಯ ಬೆಳವಣಿಗೆ ಕುತೂಹಲ ಕೆರಳಿಸಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post