ರಿಷಬ್ ಶೆಟ್ಟಿ ಸ್ಯಾಂಡಲ್ವುಡ್ನ ಯಶಸ್ವಿ ನಿರ್ದೇಶಕ, ನಟ ಅನ್ನೋದು ನಿಮಗೆಲ್ಲಾ ಗೊತ್ತಿರೋ ವಿಷಯಾನೇ. ಬೆಲ್ ಬಾಟಂ ಸಿನಿಮಾ ಸಕ್ಸಸ್ ಬಳಿಕ ರಿಷಬ್ ಹಲವು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಈಗಾಗಲೇ ರುದ್ರಪ್ರಯಾಗ, ಆ್ಯಂಟಿಗೋನಿ ಶೆಟ್ಟಿ, ‘ಕಥಾ ಸಂಗಮ’ ನಾಥೂರಾಮ್ ಸೇರಿದಂತೆ ಹಲವು ಸಿನಿಮಾಗಳು ರಿಷಬ್ ಬತ್ತಳಿಕೆಯಲ್ಲಿವೆ. ಬೆಲ್ ಬಾಟಂನಲ್ಲಿ ಮೊದಲ ಬಾರಿಗೆ ನಾಯಕನಾಗಿ ಕಮಾಲ್ ಮಾಡಿದ್ದ ರಿಷಬ್ ಇದೀಗ ‘ಮಹನೀಯರೇ ಮಹಿಳೆಯರೇ’ ಅನ್ನೋ ಮತ್ತೊಂದು ವಿಭಿನ್ನ ಟೈಟಲ್ ಸಿನಿಮಾದಲ್ಲಿ ಹೀರೋ ಆಗಿ ಮಿಂಚೋಕೆ ರೆಡಿಯಾಗ್ತಿದ್ದಾರೆ.
ರೋಹಿತ್ ಪದಕಿ ನಿರ್ದೇಶನದಲ್ಲಿ ರಿಷಬ್..!
ಬೆಲ್ ಬಾಟಂ ಸಿನಿಮಾದಲ್ಲಿ ರೆಟ್ರೋ ಲುಕ್ನಲ್ಲಿ ಕಾಣಿಸಿಕೊಂಡು ಮಿಂಚಿದ್ದ ರಿಷಬ್ ಇದೀಗ ದಯವಿಟ್ಟು ಗಮನಿಸಿ ಚಿತ್ರ ನಿರ್ದೇಶನ ಮಾಡಿದ್ದ ರೋಹಿತ್ ಪದಕಿ ಡೈರೆಕ್ಷನ್ನ ಮತ್ತೊಂದು ಸಿನಿಮಾದಲ್ಲಿ ನಾಯಕನಾಗಿ ನಟಿಸೋಕೆ ರೆಡಿಯಾಗ್ತಿದ್ದಾರೆ. ಇದೊಂದು ಕಾಮಿಡಿ ಜಾನರ್ ಕಥೆಯನ್ನು ಹೊಂದಿರೋ ಸಿನಿಮಾವಾಗಿದ್ದು ಚಿತ್ರಕ್ಕೆ ‘ಮಹನೀಯರೇ ಮಹಿಳೆಯರೇ‘ ಅಂತಾ ಡಿಫ್ರೆಂಟ್ ಆಗಿರೋ ಟೈಟಲ್ ಫೈನಲ್ ಮಾಡಲಾಗಿದೆ. ಸದ್ಯ ಚಿತ್ರಕಥೆಯ ಬಗ್ಗೆ ರಿಷಬ್ ಗ್ರೀನ್ ಸಿಗ್ನಲ್ ನೀಡಿದ್ದು ಮುಂದಿನ ವರ್ಷ ಶೂಟಿಂಗ್ ಆರಂಭವಾಗೋ ನಿರೀಕ್ಷೆ ಇದೆ. ಸದ್ಯ ರಿಷಬ್ ನಿರ್ದೇಶನ, ಹಾಗೂ ನಟನೆಯಲ್ಲಿ ಹಲವಾರು ಸಿನಿಮಾಗಳಿದ್ದು ಹೊಸ ಚಿತ್ರಕ್ಕೆ ಕೃಷ್ಣ ಸಾರ್ಥಕ್ ಬಂಡವಾಳ ಹೂಡಲಿದ್ದಾರೆ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post