ಉದಯೋನ್ಮುಕ ನಟಿಯೊಬ್ಬಳು ಅಪಾರ್ಟ್ಮೆಂಟ್ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವತಿಯು ಸುಮಾರು 20 ವರ್ಷದವಳಾಗಿದ್ದು, ಪರ್ಲ್ ಪಂಜಾಬಿ ಅಂತಾ ಗುರುತಿಸಲಾಗಿದೆ. ಹಲವು ದಿನಗಳಿಂದ ಫಿಲ್ಮ್ಗಳಲ್ಲಿ ಅವಕಾಶ ಸಿಗದೇ ಇದ್ದರಿಂದ ಹತಾಶೆಗೆ ಒಳಗಾಗಿದ್ದಳು ಅಂತ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಅಪಾರ್ಟ್ಮೆಂಟ್ನ ಸೆಕ್ಯೂರಿಟಿ ಹೇಳುವ ಪ್ರಕಾರ, ಯುವತಿ 3ನೇ ಮಹಡಿಯಲ್ಲಿದ್ದಳು. ಸುಮಾರು ರಾತ್ರಿ 12.30 ರ ಸುಮಾರಿಗೆ ಜೋರಾಗಿ ಶಬ್ದ ಕೇಳಿಸಿತ್ತು. ನಾನು ರೋಡಲ್ಲಿ ಯಾರೋ ಕೂಗಿದ್ರು ಅಂತ ಹೊರ ಹೋಗಿ ನೋಡಿದೆ. ಅಲ್ಲಿ ಯಾರೂ ಇರಲಿಲ್ಲ. ನಂತರ ಆತ್ಮಹತ್ಯೆ ಮಾಡಿಕೊಂಡಿರೋದು ಗೊತ್ತಾಗಿದೆ ಅಂತಾ ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post