ಇಂದು ಮಧ್ಯರಾತ್ರಿ 1.30.. ಭಾರತೀಯರ ಪಾಲಿಗೆ ಮಹತ್ವದ ದಿನ.. ಹೆಮ್ಮೆಯ ಇಸ್ರೋ ತನ್ನ ಚಂದ್ರಯಾನ-2 ಯೋಜನೆಯ ಕನಸನ್ನ ನನಸು ಮಾಡಿಕೊಳ್ಳುವ ಸುದಿನ. ಹೀಗಾಗಿ ಇಡೀ ಭಾರತವೇ ಆ ಕ್ಷಣಕ್ಕಾಗಿ ಕಾಯ್ತಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ವಿಕ್ರಮ್ ಲ್ಯಾಂಡರ್ ಚಂದರಿನ ಅಂಗಳ ತಲುಪಲಿದೆ. ಈ ಮೂಲಕ ಭಾರತದ ಚಂದ್ರಯಾನ ದಂಡಯಾತ್ರೆ ಪರಿಪೂರ್ಣಗೊಳ್ಳಲಿದೆ.
ನಾವ್ಯಾಕೆ ಚಂದ್ರನಿದ್ದಲ್ಲಿಗೆ ಹೋಗ್ತಿದ್ದೇವೆ..?
ಚಂದ್ರ ಭೂಮಿಗೆ ಸಮೀಪ ಇರುವ ಉಪಗ್ರಹ. ಅದರ ಮೂಲಕ ಬ್ಯಾಹ್ಯಾಕಾಶಕ್ಕೆ ಸಂಬಂಧಿಸಿದ ವಿವಿಧ ಅಧ್ಯಯನ ನಡೆಸಬಹುದು. ಚಂದ್ರಯಾನ -2 ಯೋಜನೆ ಮೂಲಕ ನಮ್ಮ ಉದ್ದೇಶಕ್ಕೆ ಬೇಕಾಗಿರುವ ಅಗತ್ಯ ಮಾಹಿತಿಯನ್ನ ಸಂಗ್ರಹಿಸಬಹುದಾಗಿದೆ. ಬಾಹ್ಯಾಕಾಶ ಯಾತ್ರೆಗಳಿಗೆ ಅಗತ್ಯವಾದ ತಂತ್ರಜ್ಞಾನವನ್ನು ಪ್ರಯತ್ನಿಸಲು ಇದು ಪರೀಕ್ಷಾ ಕೇಂದ್ರ ಆಗಲಿದೆ. ಜೊತೆಗೆ ನಮ್ಮ ಆವಿಷ್ಕಾರ ಹೊಸ ಯುಗ ಬೆಳೆಸುವುದು, ಬಹ್ಯಾಕಾಶಕ್ಕೆ ಸಂಬಂಧಿಸಿದ ನಮ್ಮ ತಿಳುವಳಿಕೆಯನ್ನ ಮತ್ತಷ್ಟು ಹೆಚ್ಚಿಸಿಕೊಳ್ಳಬಹುದಾಗಿದೆ. ಭವಿಷ್ಯದ ವಿಜ್ಞಾನಿಗಳಿಗೆ ಹಾಗೂ ನಮ್ಮ ಮುಂದಿನ ಫೀಳಿಗೆಗೆ ಚಂದ್ರಯಾನ -2 ಯೋಜನೆ ಸಹಾಯ ಆಗಲಿದೆ.
ಚಂದ್ರಯಾನ-2 : ವಿಜ್ಞಾನಿಗಳ ಉದ್ದೇಶ ಏನು..?
ಭೂಮಿಯ ಮೇಲಿನ ವಿಕಾಸ, ಸೌರವ್ಯೂಹದ ಬಗ್ಗೆ ಚಂದ್ರನಿಂದ ನಮಗೆ ನಂಬಲಾರದ ಮಾಹಿತಿ ಸಿಗಬಹುದು ಅನ್ನೋದಾಗಿದೆ. ಜೊತೆಗೆ ಚಂದ್ರನಿಗೆ ಸಂಬಂಧಿಸಿದ ಆಳವಾದ ಅಧ್ಯಯನ ಮಾಡೋದಾಗಿದೆ. ಜೊತೆಗೆ ಚಂದ್ರನನ್ನ ಸ್ಪರ್ಶ ಮಾಡುವ ಮೂಲಕ ಅದರ ರಚನೆ ಹೇಗೆ ಆಗಿದೆ ಅನ್ನೋದರ ಬಗ್ಗೆ ಅಧ್ಯಯನ ಮಾಡುವುದಾಗಿದೆ. ಹಾಗೇ ಚಂದ್ರನ ಹುಟ್ಟು ಹಾಗೂ ಅದರ ವಿಕಾಸದ ಬಗ್ಗೆ ಒಂದಿಷ್ಟು ಮಾಹಿತಿಯನ್ನ ಸಂಗ್ರಹಿಸಬಹುದು ಎಂಬುದು ವಿಜ್ಞಾನಿಗಳ ಲೆಕ್ಕಾಚಾರ.

ಯಾಕೆ ಚಂದ್ರನ ದಕ್ಷಿಣ ಧ್ರುವದಲ್ಲಿಯೇ ಅಧ್ಯಯನ..?
ಚಂದ್ರನ ದಕ್ಷಿಣ ಧ್ರುವವು ವಿಶೇಷವಾಗಿ ಆಸಕ್ತಿದಾಯಕವಾಗಿದೆ. ಯಾಕಂದ್ರೆ ಇದುವರೆಗೂ ಮಾಡಿರುವ ಅಧ್ಯಯನಗಳ ಪ್ರಕಾರ, ಚಂದ್ರನ ಉತ್ತರ ಧ್ರುವಕ್ಕಿಂತ ದಕ್ಷಿಣ ಧ್ರುವ ಯಾವತ್ತೂ ನೆರಳಿನಲ್ಲಿರುತ್ತದೆ. ಇಲ್ಲಿ ಸದಾಕಾಲ ನೆರಳಿನಿಂದ ಗೋಚರಿಸುವುದರಿಂದ ನೀರಿನ ಸಾಧ್ಯತೆ ಇದೆ ಅನ್ನೋದು ವಿಜ್ಞಾನಿಗಳ ಬಲವಾದ ನಂಬಿಕೆ. ಹಿಂದಿನ ಅಧ್ಯಯನಗಳ ಪ್ರಕಾರ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಶೀತದ ಕುಳಿಗಳಲ್ಲಿ ಹೊಂಡಗಳಿವೆಯಂತೆ.
ಲಾಂಚರ್ ಮತ್ತು ಸ್ಪೇಸ್ ಕ್ರಾಫ್ಟ್
ಬಾಹುಬಲಿ ಜಿಎಸ್ಎಲ್ವಿ ಎಂಕೆ -3 (Geosynchronous Satellite Launch Vehicle Mark-III) ಚಂದ್ರಯಾನ 2 ಹೊತ್ತು ಆಕಾಶಕ್ಕೆ ಜಿಗಿದು ಕಕ್ಷೆಗೆ ಬಿಟ್ಟ ಭಾರತದ ಅತ್ಯಂತ ಬಲಿಷ್ಠ ರಾಕೆಟ್ ಆಗಿದೆ.
ಇದರ ಘಟಕಗಳು ಹೀಗಿವೆ:
- S200 ರಾಕೆಟ್ ಬೂಸ್ಟರ್ಸ್
- L110 ಲಿಕ್ವಿಡ್ ಸ್ಟೇಜ್
- C25 ಅಪ್ಪರ್ ಸ್ಟೇಜ್

ಆರ್ಬಿಟರ್
ಆರ್ಬಿಟರ್ ಮಷಿನ ಬರೋಬ್ಬರಿ 2,379 ಕೆಜಿ ಇದೆ. ಇದರ ಎಲೆಕ್ಟ್ರಾನಿಕ್ ಪವರ್ ಜನರೇಷನ್ ಕೇಪಬಿಲಿಟಿ 1000 ವ್ಯಾಟ್. ಇದು ಉಡಾವಣೆ ಸಂದರ್ಭದಲ್ಲಿ, ಚಂದ್ರಯಾನ 2 ಆರ್ಬಿಟರ್, ಇಂಡಿಯನ್ ಸ್ಪೇಸ್ ನೆಟ್ವರ್ಕ್ (IDSN) ಜೊತೆ ಸಂವಹನ ನಡೆಸಲು ಸಹಾಯ ಮಾಡುತ್ತದೆ. ಐಡಿಎಸ್ಎನ್ ಮತ್ತು ವಿಕ್ರಮ್ ಲ್ಯಾಂಡರ್ ಜೊತೆ ಸಂವನ ಮಾಡಲು ಸಹಕಾರ ನೀಡಲಿದೆ. ಈ ಆರ್ಬಿಟ್ ಮಷಿನ್ ಒಂದು ವರ್ಷ ಮತ್ತು ಚಂದ್ರನ ಉತ್ತರ ಧ್ರುವದಲ್ಲಿ 100X100 ಕಿಮೀ ಅಂತರದ ಕಕ್ಷೆಯಲ್ಲಿ ಇರಿಸಲಾಗುತ್ತದೆ.
ಲ್ಯಾಂಡರ್-ವಿಕ್ರಮ್
ಗಗನನೌಕೆ ವಿಕ್ರಮ್ 1471 ಕೆ.ಜಿ. ಭಾರ ಇದೆ. ಜೊತೆಗೆ ಎಲೆಕ್ಟ್ರಿಕ್ ಪವರ್ ಜನರೇಷನ್ ಕೇಪಬಿಲಿಟಿ 650 ವೋಲ್ಟೇಜ್ ಹೊಂದಿದೆ. ವಿಜ್ಞಾನಿ ಹಾಗೂ ಭಾರತೀಯ ಬಾಹ್ಯಾಕಾಶ ಯೋಜನೆಯ ಪಿತಾಮಹ ವಿಕ್ರಮ್ ಸಾರಾಭಾಯಿ ಅವರ ಹೆಸರನ್ನ ಈ ನೌಕೆಗೆ ಇಡಲಾಗಿದೆ. ಇದು ಚಂದ್ರನ ದಿನ(ಲೂನಾರ್ ಡೇ)ದಲ್ಲಿ ಕಾರ್ಯನಿರ್ವಹಿಸುವಂತೆ ಇದನ್ನ ವಿನ್ಯಾಸ ಗೊಳಿಸಲಾಗಿದೆ. ಒಂದು ಲೂನಾರ್ ಡೇ ಭೂಮಿಯ 14 ದಿನಗಳಿಗೆ ಸಮನಾಗಿರಲಿದೆ. ಈ ವಿಕ್ರಮ್ ಬೆಂಗಳೂರಿನಲ್ಲಿರುವ ಐಡಿಎಸ್ಎನ್ ಜೊತೆಗೆ ಆರ್ಬಿಟರ್ ಮತ್ತು ರೋವರ್ ಜೊತೆ ಸಂವಹನ ನಡೆಸುವ ಸಾಮರ್ಥ್ಯ ಹೊಂದಿದೆ. ವಿಕ್ರಮ್ ಮೂಲಕ ಲ್ಯಾಂಡರ್ ಚಂದ್ರನ ಮೇಲೆ ಸ್ಪರ್ಶಿಸಲು ಅನುಕೂಲ ಆಗುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ.

ರೋವರ್ -ಪ್ರಜ್ಞಾನ್
ರೋವರ್ -ಪ್ರಜ್ಞಾನ್ 27 ಕೆಜಿ ಭಾರ ಇದೆ. ಜೊತೆಗೆ ಎಲೆಕ್ಟ್ರಿಕ್ ಪವರ್ ಜನರೇಷನ್ ಕೇಪಬಿಲಿಟಿ 50 ವ್ಯಾಟ್ ಹೊಂದಿದೆ. ಆರು ಚಕ್ರವುಳ್ಳ ರೊಬೆಟಿಕ್ ವೆಹಿಕಲ್ ಇದಾಗಿದೆ. ಈ ಯಂತ್ರಕ್ಕೆ ಪ್ರಜ್ಞಾನ್ ಅಂತಾ ಹೆಸರಿಡಲಾಗಿದೆ. ಸಂಸ್ಕೃತದಲ್ಲಿ ಪ್ರಜ್ಞಾನ್ ಅಂದರೆ ‘ಬುದ್ಧಿವಂತ’ ಎಂದರ್ಥ ಇದೆ. ಇದು ಸೋಲಾರ್ ಶಕ್ತಿಯನ್ನ ಬಳಸಿಕೊಂಡು 500 ಮೀಟರ್ ಸಂಚಾರ ಮಾಡುತ್ತದೆ. ಇದು ಲ್ಯಾಂಡರ್ ಜೊತೆ ಸಂವಹನ ನಡೆಸಲಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post