ಮೊಹಾಲಿ: ನಿನ್ನೆಯ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ಎರಡೂ ತಂಡಗಳು ಆಲ್ರೌಂಡ್ ಪ್ರದರ್ಶನ ನೀಡಿದ್ವು. ಭಾರತದ ಪರ ಕೊಹ್ಲಿ, ಧವನ್, ದಕ್ಷಿಣ ಆಫ್ರಿಕಾ ಪರ ಡಿ ಕಾಕ್ ಹಾಗೂ ಬವುಮರ ಸೂಪರ್ ಇನ್ನಿಂಗ್ಸ್ಗಳ ನಡುವೆ ಮೂರು ಕ್ಯಾಚ್ಗಳು ಕ್ರಿಕೆಟ್ ಫ್ಯಾನ್ಸ್ಗಳನ್ನು ಆಶ್ಚರ್ಯಚಕಿತರನ್ನಾಗಿಸಿದ್ವು.
ಒಂದೇ ಕೈಯಲ್ಲಿ ಕೊಹ್ಲಿ ಕರಾಮತ್ತು
ಸ್ಫೋಟಕ ಆಟವಾಡ್ತಿದ್ದ ಕ್ವಿಂಟನ್ ಡಿ ಕಾಕ್ರ ಕ್ಯಾಚ್ನ್ನು ಕೊಹ್ಲಿ ಹಿಡಿದ ರೀತಿಗೆ ಪಂದ್ಯ ವೀಕ್ಷಿಸುತ್ತಿದ್ದವರು ಒಂದು ಕ್ಷಣ ಬೆರಗಾಗಿದ್ದಂತೂ ಸುಳ್ಳಲ್ಲ. ನವ್ದೀಪ್ ಸೈನಿ ಬೌಲಿಂಗ್ನಲ್ಲಿ ಡಿ ಕಾಕ್ ಬ್ಯಾಟ್ಗೆ ತಾಗಿದ ಚೆಂಡು ಬೌಂಡರಿಯತ್ತ ಹಾರಿತು. ಆಗ ಅದ್ಭುತ ರೀತಿಯಲ್ಲಿ ಜಿಗಿದು, ಒಂದೇ ಕೈನಲ್ಲಿ ಕೊಹ್ಲಿ ಚೆಂಡನ್ನು ಹಿಡಿದ್ರು.
ಜಂಪ್ ಮಾಡಿ ಕ್ಯಾಚ್ ಹಿಡಿಯೋದೆ ಕಷ್ಟ. ಆದ್ರೆ ಕೊಹ್ಲಿ ಜಂಪಿಂಗ್ ಜೊತೆಗೆ ಒಂದೇ ಕೈಯಲ್ಲಿ ಕ್ಯಾಚ್ ಹಿಡಿದು ಅಭಿಮಾನಿಗಳಿಂದ ಶಹಬ್ಬಾಶ್ ಗಿರಿ ಪಡೆದುಕೊಂಡಿದ್ದಾರೆ.
What a sensational catch by Virat Kohli #IndvsSA pic.twitter.com/QLpvJUD8IU
— SumitSamhaLega (@sumitsamhaLega) September 18, 2019
ಜಡ್ಡು ಕ್ಯಾಚ್ ಸೂಪರ್
ಇನ್ನು ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ ಅದ್ಭುತ ಕ್ಯಾಚೊಂದನ್ನು ಹಿಡಿದ್ರು. ತಾವೇ ಬೌಲ್ ಮಾಡಿ, ಕ್ಯಾಚ್ ಹಿಡಿದ ಜಡ್ಡು ಸ್ಟೈಲ್ ರೋಚಕವಾಗಿತ್ತು. ರಸ್ಸೇ ವಾನ್ ಡೆರ್ ದುಸೇನ್ ರನ್ನು ಜಡೇಜಾ ಕಾಟ್ ಅಂಡ್ ಬೌಲ್ಡ್( caught and bowled) ಮಾಡಿ ಔಟ್ ಮಾಡಿದ್ರು. ಜಡೇಜಾರ ಎಸೆತವನ್ನು ಬೌಂಡರಿಯತ್ತ ಬಾರಿಸಲು ದುಸೇನ್ ಮುಂದಾಗಿದ್ದರು. ಆದರೆ ಚೆಂಡು ಬ್ಯಾಟ್ಗೆ ತಗುಲಿ ಬೌಲರ್ನತ್ತ ಚಿಮ್ಮಿತು. ಆಗ ಸೂಪರ್ ಡೈವ್ ಮಾಡಿದ ಜಡೇಜಾ ಕ್ಯಾಚ್ ಹಿಡಿದ್ರು.
Sir-ry for the disturbance. Must watch and must hear video! 🤭 #WhistlePodu #JustSirThings #INDvSA @imjadeja 🦁💛 https://t.co/I2YN8h7gL4
— Chennai Super Kings (@ChennaiIPL) September 18, 2019
ಮಿಲ್ಲರ್ ಕಿಲ್ಲಿಂಗ್ ಕ್ಯಾಚ್
ಟೀಂ ಇಂಡಿಯಾ ಫೀಲ್ಡರ್ಸ್ಗೆ ಹೋಲಿಸಿದರೆ ನಾವೇನು ಕಮ್ಮಿ ಅನ್ನೋದು ದಕ್ಷಿಣ ಆಫ್ರಿಕಾ ಆಟಗಾರರ ಮನಸ್ಸಲ್ಲಿ ಇತ್ತೇನೋ? ಇದಕ್ಕೆ ಸಾಕ್ಷಿ ಎಂಬಂತೆ ಡೇವಿಡ್ ಮಿಲ್ಲರ್ ಹಿಡಿದ ಕ್ಯಾಚ್, ಸ್ಟೇಡಿಯಂನಲ್ಲಿದ್ದವರನ್ನ ತುದಿಗಾಲಲ್ಲಿ ಕೂರಿಸಿತ್ತು. ಅಷ್ಟೇ ಯಾಕೆ, ಸ್ವತಃ ವಿರಾಟ್ ಕೊಹ್ಲಿಯನ್ನೇ ಬೆಚ್ಚಿ ಬೀಳಿಸಿತ್ತು.
ತಬ್ರಾಯಿ ಶಂಸಿ ಬೌಲಿಂಗ್ ನಲ್ಲಿ ಸಿಕ್ಸ್ ಹೊಡೆಯೋಕೆ ಯತ್ನಿಸಿದ್ದು ಶಿಖರ್ ಧವನ್ಗೆ ಮುಳುವಾಯ್ತು, ಅವರು ಹೊಡೆದ ಬಾಲ್ ಇನ್ನೇನು ಬೌಂಡರಿ ಗೆರೆ ದಾಟಬೇಕು ಅನ್ನೋದ್ರಲ್ಲಿ, ಮಿಲ್ಲರ್ನ ಕೈ, ಚೆಂಡನ್ನ ಹಿಡಿದುಬಿಟ್ಟಿತ್ತು. ಇದನ್ನು ನೋಡಿ ಶಿಖರ್ ಧವನ್ ಕಣ್ಣಲ್ಲೂ ಅಚ್ಚರಿ ಬಿಟ್ಟು ಬೇರೆನೂ ಕಾಣ್ತಿರಲಿಲ್ಲ.
What a Miller-acle!!
Stunning catch from David Miller to dismiss Shikhar Dhawan #INDvSA #SAvIND pic.twitter.com/Fj4w3b0I5s
— 🏏 Sports Trend India🏏 (@SportsTrend_IND) September 18, 2019
Highlights of Today's #INDvSA
● De Kock 52(37) & Bavuma 49(43) made it a debut to remember
● #ViratKohli Catch & Another Fifty
● Deepak Chahar & Navdeep Saini Outstanding spells
● Sir Jadeja Catch & Bowled
● David Miller Unbelievable Catch
● #TeamIndia won the match#T20i pic.twitter.com/9PVHv4Gfa7— Archie Agarwal (@_rchie00425) September 18, 2019
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post