ನವದೆಹಲಿ: ಕಳೆದ ಕೆಲ ವರ್ಷಗಳಿಂದ ದೇಶದಲ್ಲಿ ನಡೆಯುತ್ತಿರುವ ಘಟನೆಗಳು ಮಹಾತ್ಮ ಗಾಂಧಿ ಅವರ ಆತ್ಮಕ್ಕೆ ನೋವನ್ನುಂಟು ಮಾಡುತ್ತಿದೆ ಅಂತಾ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ವೇದನೆ ವ್ಯಕ್ತಪಡಿಸಿದ್ದಾರೆ.
ಗಾಂಧಿಜೀ ಅವರ 150 ನೇ ಜನ್ಮ ದಿನದ ಹಿನ್ನೆಲೆ, ರಾಹುಲ್ ಗಾಂಧಿ ನೇತೃತ್ವದಲ್ಲಿ ‘ಗಾಂಧಿ ಸಂದೇಶ ಯಾತ್ರೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು. ರಾಜ್ಘಾಟ್ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ರು. ‘ಭಾರತ ಅಂದ್ರೆ ಗಾಂಧಿ.. ಆದ್ರೆ ಕೆಲವರು ಭಾರತ ಅಂದ್ರೆ ಆರ್ಎಸ್ಎಸ್ ಅಂತಾ ಮಾರ್ಪಾಟು ಮಾಡಲು ಹೊರಟಿದ್ದಾರೆ.. ತಮ್ಮನ್ನು ತಾವೇ ದೊಡ್ಡವರು ಅಂದುಕೊಂಡವರಿಗೆ ಗಾಂಧಿ ಜೀ ಅವರ ಶಾಂತಿಯ ತತ್ವ ಅರ್ಥವಾಗಲ್ಲ’ ಅಂತಾ ಕಿಡಿಕಾರಿದ್ರು.
ಇನ್ನು ಕಾರ್ಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಪ್ರಿಯಾಂಕ ವಾದ್ರಾ, ಸತ್ಯ ಪರಿಪಾಲನೆ ಮಹಾತ್ಮ ಗಾಂಧಿಯವರ ಸೂಚನೆಯಾಗಿತ್ತು. ಅದರಂತೆ, ಬಿಜೆಪಿ ಮೊದಲು ಸತ್ಯದ ದಾರಿಯನ್ನು ಅರಿಯ ಬೇಕು, ನಂತರ ಗಾಂಧಿ ಜೀ ಬಗ್ಗೆ ಮಾತನಾಡಲಿ ಅಂತಾ ಹೇಳಿದ್ರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post