ಹೈದ್ರಾಬಾದ್ನಲ್ಲಿ 4 ತಿಂಗಳ ಮಗುವಿಗೆ ಕಿಡ್ನಿ ಸ್ಟೋನ್ ಆಗಿತ್ತು. ವೈದ್ಯರಿಂದ ಸರ್ಜರಿ ಏನೋ ನಡೀತು. ಆದ್ರೆ, ಮಗುವಿನ ಯಾವುದೇ ಅಂಗವನ್ನ ಕೊಯ್ಯದೇ ಸರ್ಜರಿ ಮಾಡಿ ಕಿಡ್ನಿಯಲ್ಲಿನ ಕಲ್ಲುಗಳನ್ನು ತೆಗೆದಿದ್ದಾರೆ. ಅರೇ ಸರ್ಜರಿ ಅಂತೀರಾ ಹೇಗೆ ಯಾವುದೇ ಅಂಗವನ್ನ ಕೊಯ್ಯದೇ ಆಪರೇಷನ್ ಮಾಡಿದ್ರು ಅಂತ ನೀವು ಕೇಳಬಹುದು. ಹಾಗಾದ್ರೆ ಈ ಸ್ಟೋರಿ ಓದಿ..!
ಕಿಡ್ನಿಯಲ್ಲಿನ 6 ಕಲ್ಲುಗಳನ್ನು ತೆಗೆದ ವೈದ್ಯರು..!
ಮಗುವಿನ ಪೋಷಕರು ಮೊದಲಿಗೆ ತಮ್ಮ ಮಗು ಮೂತ್ರ ವಿಸರ್ಜನೆ ಮಾಡುತ್ತಿಲ್ಲ ಅಂತಾ ಹೈದರಾಬಾದ್ನ ನಿಲೌಫರ್ ಹಾಸ್ಪಿಟಲ್ಗೆ ಕರೆತಂದಿದ್ದಾರೆ. ಅಲ್ಲಿನ ವೈದ್ಯರು ಮಗುವಿಗೆ ಪರೀಕ್ಷೆ ನಡೆಸಿ, ಮಗುವಿನ ಕಿಡ್ನಿಯಲ್ಲಿ ಕಲ್ಲುಗಳಿವೆ. ಹಾಗಾಗಿ ಪೋಷಕರಿಗೆ ‘ಪ್ರೀತಿ ಯೂರಾಲಾಜಿ ಮತ್ತು ಕಿಡ್ನಿ ಹಾಸ್ಪಿಟಲ್’ ಗೆ ರೆಫರ್ ಮಾಡಿದ್ದಾರೆ. ನಂತರ ಅಲ್ಲಿಗೆ ತೆರಳಿದ ಪೋಷಕರು ಮಗುವಿಗೆ ರೆಟ್ರೋಗ್ರೇಡ್ ಇನ್ಟ್ರಾ ರೆನಾಲ್ ಸರ್ಜರಿ (RIRS) ಮೂಲಕ ಸುಮಾರು 1 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ, ಮಗುವಿನ ಎರಡು ಕಿಡ್ನಿಯಲ್ಲಿದ್ದ ಒಟ್ಟು 6 ಕಲ್ಲುಗಳನ್ನ ಯಶಸ್ವಿಯಾಗಿ ತೆಗೆದಿದ್ದಾರೆ. ಮಗುವಿನ ಕಿಡ್ನಿಯಲ್ಲಿನ ಒಂದೊಂದು ಕಲ್ಲುಗಳು ಸುಮಾರು 8 ರಿಂದ 9 ಮಿಲಿ ಮೀಟರ್ ಇತ್ತು ಅಂತಾ ವೈದ್ಯರು ಹೇಳಿದ್ದಾರೆ.
ರೆಟ್ರೋಗ್ರೇಡ್ ಇನ್ಟ್ರಾ ರೆನಾಲ್ ಸರ್ಜರಿ (RIRS) ಅಂದ್ರೆ ಹೇಗಿರುತ್ತೆ..?
RIRS ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಯಾಗಿದ್ದು, ಸಣ್ಣದಾದ ಫ್ಲೆಕ್ಸಿಬಲ್ ಪೈಪ್ ಅನ್ನ ಈ ಸರ್ಜರಿಗೆ ಬಳಸಲಾಗುತ್ತದೆ. ಆ ಪೈಪ್ ಮೂತ್ರನಾಳದಿಂದ ಮೂತ್ರಪಿಂಡವನ್ನು ತಲುಪುತ್ತದೆ. ಈ ಸಾಧನದಲ್ಲಿ ಲೇಸರ್ ಫೈಬರ್ ಇದ್ದು, ಈ ಲೇಸರ್ ಸಹಾಯದಿಂದ ಕಿಡ್ನಿಯಲ್ಲಿನ ಕಲ್ಲುಗಳನ್ನ ಸಣ್ಣ ಸಣ್ಣ ತುಣುಕುಗಳಾಗಿ ಮಾಡಲಾಗುತ್ತದೆ. ನಂತರ ಇದೇ ಸಾಧನದಲ್ಲಿರುವ ಒಂದು ರೀತಿಯ ಬುಟ್ಟಿಯಂತಹ ವಸ್ತು ಕಿಡ್ನಿಯಲ್ಲಿನ ಕಲ್ಲುಗಳನ್ನ ಹೊರತೆಗೆಯುತ್ತದೆ.
ವಿಶೇಷ ಅಂದ್ರೆ ಈ ಸರ್ಜರಿಯಲ್ಲಿ ಯಾವುದೇ ಅಂಗಗಳನ್ನ ಕಟ್ ಮಾಡುವುದಿಲ್ಲ, ಹೊಲಿಗೆ ಹಾಕಲ್ಲ ಹಾಗೂ ಯಾವುದೇ ರೀತಿಯ ರಕ್ತಸ್ರಾವ ಕಾಣಸಿಗುವುದಿಲ್ಲ ಅಂದ್ರೆ ನೀವು ನಂಬಲೇಬೇಕು.
RIRS ಸರ್ಜರಿ 3D ಟೆಕ್ನಾಲಜಿಯಲ್ಲಿ ಹೀಗಿರುತ್ತೆ…!
HU-MO #VirtualReality RIRS- Retrograde Intrarenal Surgery, Research Product of @MedTRainModsim @EUErasmusPlus Project. Amazing experience for students👍 @nidaylmaz1 @HacettepeIEEE @HacettepeIEEE @Medimagazin @Uro_News @BTechInnovation #3DModeling @EAU_YAUroTech @eauesut pic.twitter.com/4QlpQD6LUY
— Emre Huri, MD-PhD 🇹🇷 (@EmreHuri_MD) February 25, 2018
ಸರ್ಜರಿ ಬಗ್ಗೆ ವೈದ್ಯರು ಹೇಳೋದೇನು..?
ಪ್ರೀತಿ ಯೂರಾಲಜಿ ಮತ್ತು ಕಿಡ್ನಿ ಹಾಸ್ಪಿಟಲ್ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ವಿ ಚಂದ್ರಮೋಹನ್ ಮಾತನಾಡಿ, ’’ಈ ರೀತಿಯ ಸರ್ಜರಿ ವಿರಳಾತಿ ವಿರಳವಾಗಿರುತ್ತದೆ. ಅದರಲ್ಲೂ ಚಿಕ್ಕ ಮಕ್ಕಳ ಮೇಲೆ ಚೀನಾ ಮತ್ತು ಅಮೆರಿಕಾದ ಕೆಲವು ಸೆಂಟರ್ಗಳಲ್ಲಿ ಮಾತ್ರ ಈ ರೀತಿಯ ಸರ್ಜರಿಗಳು ನಡೆದಿವೆ. ಆದ್ರೆ ಪ್ರಪಂಚದಲ್ಲೇ ಇದೇ ಮೊದಲ ಬಾರಿಗೆ 4 ತಿಂಗಳ ಮಗುವಿನ 2 ಕಿಡ್ನಿಗಳಲ್ಲಿನ ಕಲ್ಲುಗಳನ್ನು ನಾವು ಯಶಸ್ವಿಯಾಗಿ ಹೊರತೆಗೆದಿದ್ದೇವೆ. ಹಾಗೂ ಚಿಕ್ಕ ಮಕ್ಕಳಲ್ಲಿ ಈ ಸಮಸ್ಯೆ ತೀರಾ ವಿರಳಾತಿ ವಿರಳ. ಅದ್ರಲ್ಲೂ 4 ತಿಂಗಳ ಮಗುವಿನಲ್ಲಿ ಈ ಸಮಸ್ಯೆ ಅಂದ್ರೆ ಇದೊಂದು ವಿರಳ ಕೇಸ್ ಅಂತಾ ವೈದ್ಯರು ಹೇಳಿದ್ದಾರೆ.
ಕಿಡ್ನಿಯಲ್ಲಿ ಕಲ್ಲು ಹೇಗೆ ಉಂಟಾಗುತ್ತದೆ..?
ಭಾರತದಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ತುಂಬಾನೇ ಕಾಮನ್. ಹೆಚ್ಚಾಗಿ ಡೀ-ಹೈಡ್ರೇಷನ್, ಮಾಲ್ನ್ಯೂಟ್ರೀಷನ್, ಆಹಾರದಲ್ಲಿ ಅತೀ ಹೆಚ್ಚಿನ ಉಪ್ಪಿನ ಬಳಕೆ ಮತ್ತು ಅತಿಯಾದ ಮಾಂಸಾಹಾರ ಸೇವನೆಯಿಂದ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ವಿಶೇಷ ವರದಿ: ಸತ್ಯಮೂರ್ತಿ.ಕೆ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post