ಮಂಡ್ಯ: ಉತ್ತರ ಕರ್ನಾಟಕದಲ್ಲಿ ನೆರೆ ಪರಿಸ್ಥಿತಿ ಇದ್ದರೂ ಮೋಡ ಬಿತ್ತನೆ ಮಾಡಲಾಗುತ್ತಿದೆ ಅನ್ನೋದ್ರ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಅದು ಹಿಂದಿನ ಸರ್ಕಾರ ಕೈಗೊಂಡ ತೀರ್ಮಾನ. ದುಂದುವೆಚ್ಚ ಮಾಡೋದಕ್ಕೆ ನನ್ನ ವಿರೋಧ ಇದೆ. ಈ ವಿಷಯವನ್ನ ನಾನು ನಾಳೆ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದರು.
ನಗರದಲ್ಲಿ ಮಾತನಾಡಿದ ಆರ್.ಅಶೋಕ್, ನಾನು ನಾಳೆ ಬೆಂಗಳೂರಿಗೆ ಹೋದ ನಂತರ ಉತ್ತರ ಕರ್ನಾಟಕದಲ್ಲಿ ಮೋಡ ಬಿತ್ತನೆ ಕುರಿತಂತೆ ರಿವ್ಯೂ ಮಾಡ್ತೀನಿ. ಈಗ 5 ಜಿಲ್ಲೆಗಳಲ್ಲಿ ಬರಗಾಲದ ಛಾಯೆ ಇದೆ. ಆದ್ರೆ ಕೆಲವು ದಿನಗಳಿಂದ ಅಲ್ಲೂ ಕೂಡ ಮಳೆಯಾಗ್ತಿದೆ. ಅದನ್ನು ನೋಡಿಕೊಂಡು ಮುಂದಿನ ತೀರ್ಮಾನ ಮಾಡುತ್ತೇನೆ. ಈಗಾಗಲೇ ಬರ ಇರೋ ಜಿಲ್ಲೆಗಳನ್ನು ಗುರುತು ಮಾಡಿ ಈಗಾಗಲೇ ಅದಕ್ಕೆ ಸಮೀಕ್ಷೆ ಮಾಡಿ ಅಪ್ರೂವಲ್ ಕೊಟ್ಟಿದ್ದೀನಿ. ಅದನ್ನು ಕೂಡ ನಾವು ಕೇಂದ್ರಕ್ಕೆ ಕಳುಹಿಸಿಕೊಡಲಿದ್ದೇವೆ ಅಂತಾ ತಿಳಿಸಿದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post