ಮೈಸೂರು: ರಾಜಕೀಯದಲ್ಲಿ ಯಾರೂ ಪರ್ಫೆಕ್ಟ್ ಅಲ್ಲ, ಬಿಜೆಪಿಯಲ್ಲಿ ಇರುವವರು ಎಲ್ಲರೂ ಸಾಚಾಗಳಾ? ಮೋದಿ ತನ್ನ ರಾಜಕೀಯ ವಿರೋಧಿಗಳನ್ನು ಹಣಿಯಲು ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡ ಆರೋಪಿಸಿದ್ದಾರೆ.
ಮೈಸೂರಲ್ಲಿ ಮಾತನಾಡಿದ ಅವರು, ಪರಮೇಶ್ವರ್ ಐಟಿ ದಾಳಿಯಾಗಿರುವುದು ರಾಜಕೀಯ ಪ್ರೇರಿತ ದಾಳಿ. ಅದಲ್ಲದೇ ಮತ್ತೇನು..? ಪರಮೇಶ್ವರ್ ಬಳಿ ಸಿಕ್ಕಿದೆ ಎನ್ನಲಾದ ₹6 ಸಾವಿರ ಕೋಟಿ ಅವರು ಸಂಪಾದನೆ ಮಾಡಿರೋದಲ್ಲ. ಅವರ ತಂದೆ ಗಂಗಾಧರಪ್ಪ ಅವರು ಸಂಪಾದನೆ ಮಾಡಿದ್ದು. ಪರಮೇಶ್ವರ್ ತಂದೆ ಕಾಲದಲ್ಲೇ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಿದ್ದರು. ಹಾಗಂತ ಅವರು ಮೆಡಿಕಲ್ ಸೀಟಿಗೆ ಎಲ್ಲರ ಬಳಿ ದುಡ್ಡು ತೆಗೆದುಕೊಂಡಿದ್ದಾರೆ ಅಂತಲ್ಲ, ಕೆಲವರ ಬಳಿ ದುಡ್ಡು ತೆಗೆದುಕೊಂಡಿದ್ದಾರೆ. ₹6 ಸಾವಿರಕ್ಕೆ ಇಂಜಿನಿಯರಿಂಗ್, ₹10 ಸಾವಿರಕ್ಕೂ ಅವರು ಮೆಡಿಕಲ್ ಸೀಟು ಕೊಟ್ಟಿದ್ದಾರೆ ಎಂದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post