ಬೆಂಗಳೂರು: ಸಂರಕ್ಷಿತ ಅರಣ್ಯದಲ್ಲಿ ರಾಷ್ಟ್ರೀಯ ಹೈವೇ ನಿರ್ಮಾಣ ವಿಚಾರವಾಗಿ NHAI (ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ) ವನ್ನ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ. ಅಲ್ಲದೇ ಮುಂದಿನ ಆದೇಶದವರೆಗೂ ಮರಗಳನ್ನ ಕಡಿಯದಂತೆ ಖಡಕ್ ಸೂಚನೆ ನೀಡಿದೆ.
ಕೇಂದ್ರ ಸರ್ಕಾರದಿಂದಲೇ ರಸ್ತೆ ನಿರ್ಮಾಣಕ್ಕೆ 2ನೇ ಹಂತದ ಕ್ಲಿಯರೆನ್ಸ್ ಸಿಕ್ಕಿಲ್ಲ. 2ನೇ ಹಂತದ ಕ್ಲಿಯರೆನ್ಸ್ ಸಿಗುವ ಮುನ್ನವೇ ರಸ್ತೆ ನಿರ್ಮಾಣ ಮಾಡಲು ಮರಗಳನ್ನು ಕಡಿಯಲಾಗಿದೆ. ಇದು ಸರಿಯಾದ ನಡೆಯಲ್ಲ. ಹೈಕೋರ್ಟ್‌ಗೆ ಎಷ್ಟು ಮರಗಳನ್ನ ಕಡಿದಿದ್ದೀರಾ ಎಂಬುದರ ಅಫಿಡೆವಿಟ್ ಸಲ್ಲಿಸಿ. ಆಫಿಡೆವಿಟ್‌ನಲ್ಲಿ ಯಾರ ಅನುಮತಿ ಪಡೆದು ಮರ ಕಡಿದಿದ್ದೀರಾ ಎಂಬ ಬಗ್ಗೆ ನಮೂದಿಸಬೇಕು ಎಂದು ಸೂಚನೆ ನೀಡಿದೆ. ಬಳಿಕ ಅರ್ಜಿ ವಿಚಾರಣೆಯನ್ನ ಅಕ್ಟೋಬರ್ 31ಕ್ಕೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ:
ಖಾನಾಪುರ-ಗೋವಾಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ದಾಂಡೇಲಿ ಬಳಿ ಇರುವ ಅಣಿಶಿ(ಕಾಳಿ) ಟೈಗರ್ ರಿಸರ್ವ್ ಅರಣ್ಯದಲ್ಲಿ ಮರಗಳನ್ನ ಕಡಿದು ರಸ್ತೆ ನಿರ್ಮಿಸಲು ಮುಂದಾಗಿತ್ತು. ಈ ವೇಳೆ ಪರಿಸರವಾದಿ ಸುರೇಶ್ ಹೆಬ್ಳೀಕರ್ ಎಂಬವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post