ಬೆಂಗಳೂರು: ಕೆಲ ದಿನಗಳಿಂದ HAL (Hindustan Aeronautics Employees Association) ನೌಕರರು ನಡೆಸ್ತಿರುವ ಪ್ರತಿಭಟನೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಹೆಚ್ಎಎಲ್ ನೌಕರರ ಹೋರಾಟವನ್ನ ಪ್ರಶ್ನೆ ಮಾಡಿ ಹೆಚ್ಎಎಲ್ ಆಡಳಿತ ಮಂಡಳಿ ಹೈಕೋರ್ಟ್ ಮೊರೆ ಹೋಗಿತ್ತು. ಇಂದು ವಿಚಾರಣೆ ನಡೆಸಿದ ಹೈಕೋರ್ಟ್, ಮಧ್ಯಂತರ ಆದೇಶ ನೀಡಿದೆ. ಪ್ರತಿಭಟನೆ ಹೆಚ್ಎಎಲ್ ಸಂಸ್ಥೆಯ ದಿನನಿತ್ಯದ ಕೆಲಸ-ಕಾರ್ಯಗಳಿಗೆ ಅಡ್ಡಿ ಆಗಬಾರದು. ನಿಮ್ಮ ಪ್ರತಿಭಟನೆಯಿಂದಾಗಿ ಸಂಸ್ಥೆಯ ಕೆಲಸ ನಿಧಾನಗತಿಯಲ್ಲಿ ಸಾಗಿದೆ. ಹೀಗಾಗಿ ಮುಷ್ಕರವನ್ನ ನಿಲ್ಲಿಸಿ ಅಂತಾ ಕೋರ್ಟ್ ಸೂಚನೆ ನೀಡಿದೆ.
ವೇತನ ಪರಿಷ್ಕರಣೆ ಹಾಗೂ ವಿವಿಧ ಬೇಡಿಕೆ ಈಡೇರಿಕೆ ಸಂಬಂಧ ಹೆಚ್ಎಎಲ್ ನೌಕರರು ಅಕ್ಟೋಬರ್ 14 ರಿಂದ ಪ್ರತಿಭಟನೆ ನಡೆಸ್ತಿದ್ದಾರೆ. ಪ್ರತಿಭಟನೆ ಹಿನ್ನೆಲೆ ಸಂಸ್ಥೆಗೆ ಭಾರೀ ನಷ್ಟ ಆಗ್ತಿದೆ. ಹೀಗಾಗಿ ಹೆಚ್ಎಎಲ್ ಆಡಳಿತ ಮಂಡಳಿ ಹೈಕೋರ್ಟ್ ಮೊರೆ ಹೋಗಿದೆ.
ಇದನ್ನೂ ಓದಿ: ಎಚ್.ಎ.ಎಲ್ ನೌಕರರ ಪ್ರತಿಭಟನೆ, ಸಂಸ್ಥೆಗೆ ಪ್ರತಿ ನಿತ್ಯ ₹17 ಕೋಟಿ ನಷ್ಟ..!
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post