ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಲು ತಯಾರಿ ನಡೆಸಿಕೊಳ್ಳುತ್ತಿದ್ದಾರೆ. ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾ ಸರಣಿಯಿಂದ ಹೊರಗುಳಿದಿರುವ ಧೋನಿ, 2020 ಜನವರಿ ತಿಂಗಳಲ್ಲಿ ತಂಡಕ್ಕೆ ವಾಪಸ್ಸಾಗಲಿದ್ದಾರೆ.
ಈಗಾಗಲೇ ಫಿಟ್ನೆಸ್ ಟ್ರೈನಿಂಗ್ ನಡೆಸಿ ಫುಲ್ ಫಿಟ್ ಆಗಿರೋ ಧೋನಿ, ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯಲ್ಲಿ ಅಭ್ಯಾಸ ಶುರು ಮಾಡಲಿದ್ದಾರಂತೆ. ಸದ್ಯ ಜಾರ್ಖಂಡ್ ಸೀನಿಯರ್ ಟೀಮ್, ಸೈಯದ್ ಮುಶ್ತಾಕ್ ಆಲಿ ಟೂರ್ನಿಯ ತಯಾರಿಗಾಗಿ ಸೂರತ್ಗೆ ಪ್ರಯಾಣ ಬೆಳಸಲಿದೆ. ಹೀಗಾಗಿ ಧೋನಿ ಜಾರ್ಖಂಡ್ ಅಂಡರ್ 23 ತಂಡದ ಜೊತೆ, ಸಮರಭ್ಯಾಸ ಶುರು ಮಾಡಲಿದ್ದಾರೆ ಅಂತ ಜೆಎಸ್ಸಿಎ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
‘ ಧೋನಿ ಜೆಎಸ್ಸಿಎ ಸ್ಟೇಡಿಯಮ್ನಲ್ಲಿ ಈಗಾಗಲೇ ಫಿಟ್ನೆಸ್ ಟ್ರೈನಿಂಗ್ ಆರಂಭಿಸಿದ್ದಾರೆ. ಧೋನಿ ಬ್ಯಾಡ್ಮಿಂಟನ್, ಟೆನಿಸ್, ಬಿಲಿಯರ್ಡ್ಸ್ ಆಡುತ್ತಿದ್ದಾರೆ. ಇದು ಧೋನಿಯ ಪ್ರಿಪರೇಶನ್ಸ್. ಜನವರಿಯಲ್ಲಿ ಧೋನಿ ಮತ್ತೆ ಕಾಂಪಿಟೇಟಿವ್ ಕ್ರಿಕೆಟ್ಗೆ ಮರಳುತ್ತಾರೆ. ಹೀಗಾಗಿ ಅಂಟರ್ 23 ತಂಡದ ಜೊತೆ ಪ್ರಾಕ್ಟೀಸ್ ಆರಂಭಿಸಲಿದ್ದಾರೆ.’
– ಜೆಎಸ್ಸಿಎ ಅಧಿಕಾರಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post