ಮಂಡ್ಯ: ಕಬ್ಬಿನ ಸಮಸ್ಯೆಗೆ ಮತ್ತೊಬ್ಬ ರೈತ ಬಲಿಯಾಗಿದ್ದಾರೆ. ಕಬ್ಬು ಕಡಿಯಲು ಅನುಮತಿ ಸಿಗದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹುಲಿವಾನ ಗ್ರಾಮದ ಮಂಜುನಾಥ್(40) ಮೃತ ರೈತ.
ಇಂದು ನಸುಕಿನ ಜಾವ 4 ಗಂಟೆ ವೇಳೆಯಲ್ಲಿ, ಮಂಜುನಾಥ್ ತಮ್ಮ ಜಮೀನಿಗೆ ತೆರಳಿ ನೇಣಿಗೆ ಶರಣಾಗಿದ್ದಾರೆ. 3 ಎಕರೆ ಜಮೀನಿನಲ್ಲಿ 14 ತಿಂಗಳ ಕಬ್ಬು ಬೆಳೆದು ನಿಂತಿತ್ತು. ಕಬ್ಬು ತೆಗೆದುಕೊಳ್ಳುವಂತೆ ಕೊಪ್ಪದ ಎನ್ಎಸ್ಎಲ್ ಬಣ್ಣಾರಿ ಅಮ್ಮನ್ ಕಾರ್ಖಾನೆಗಳ ಪರ್ಮಿಟ್‌ಗಾಗಿ ಮಂಜುನಾಥ್ ಕಾದಿದ್ದರು. ಆದರೆ ಕಾರ್ಖಾನೆ ಅಧಿಕಾರಿಗಳು ಇಂದು, ನಾಳೆ ಅಂತಾ ಹೇಳುತ್ತಿದ್ದರು ಎನ್ನಲಾಗಿದೆ.
ಅಲ್ಲದೆ ಮಂಜುನಾಥ್ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಿದ್ದರು. ಇದಕ್ಕಾಗಿ ಮಂಜುನಾಥ್ ಸಾಲ ಮಾಡಿಕೊಂಡಿದ್ದರು. ಕಬ್ಬು ಸೇಲ್ ಆಗದಿದ್ದರೆ ಗತಿಯೇನು ಎಂಬ ಆತಂಕಕ್ಕೆ ಒಳಗಾಗಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.
ಕೃಷಿ ಕೆಲಸಕ್ಕೆ ತೆರಳಿದ್ದ ಅಕ್ಕಪಕ್ಕದ ರೈತರಿಂದ, ಮಂಜುನಾಥ್ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಕೆರಗೋಡು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post