ಮೈಸೂರು: ಪೊಲೀಸ್ ಆಯುಕ್ತರ ನೂತನ ಕಚೇರಿ ಕಟ್ಟಡ ಉದ್ಘಾಟನೆಗೆ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಸ್ತು ಎಂದಿದ್ದಾರೆ.
ಉದ್ಯಾನವನಕ್ಕೆ ಮೀಸಲಿದ್ದ ಸ್ಥಳದಲ್ಲಿ ನಗರ ಪೊಲೀಸ್ ಆಯುಕ್ತರ ಕಚೇರಿ ನಿರ್ಮುಸಲಾಗಿ ಎಂದು ಆರ್ಟಿಐ ಕಾರ್ಯಕರ್ತರ ಅಶೋಕ್ ಕೋರ್ಟ್ ಮೊರೆ ಹೋಗಿದ್ದರು. ಆಮ ಮೂಲಕ ನಗರ ಪೊಲೀಸ್ ಆಯುಕ್ತರ ಕಚೇರಿ ಉದ್ಘಾಟನೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು.
ಪರಿಣಾಮ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕಡೆ ಘಳಿಗೆಯಲ್ಲಿ ಕಟ್ಟಡ ಉದ್ಘಾಟನೆಯಿಂದ ದೂರ ಉಳಿದಿದ್ದರು. ಅಂದಿನಿಂದಲೂ ನಗರ ಪೊಲೀಸ್ ಆಯುಕ್ತರ ಕಚೇರಿಯ ನೂತನ ಕಟ್ಟಡ ಉದ್ಘಾಟನೆ ಭಾಗ್ಯ ಕಾಣದೆ ಉಳಿದಿತ್ತು.
ಇದೀಗ ಸಾಮಾಜಿಕ ಕಾರ್ಯಕರ್ತ ಸ್ನೇಹಮಹಿ ಕೃಷ್ಣ, ದೂರುದಾರ ಅಶೋಕ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ನಡುವೆ ಸಂಧಾನ ಮಾಡಿಸಿದ್ದಾರೆ. ಸದ್ಯ ಸಚಿವರ ಮನವಿಗೆ ಓಗೊಟ್ಟು ಕೇಸ್ ವಾಪಾಸ್ ಪಡೆಯುವುದಾಗಿ ಆರ್ಟಿಐ ಕಾರ್ಯಕರ್ತ ಅಶೋಕ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಉದ್ಯಾನವನಕ್ಕೆ ಬದಲೀ ಜಾಗ ನೀಡುವುದಾಗಿ ಸೋಮಣ್ಣ ಭರವಸೆ ಕೂಡಾ ನೀಡಿದ್ದಾರಂತೆ. ಈ ಹಿನ್ನೆಲೆ ಕೆಲವೇ ದಿನಗಳಲ್ಲಿ ಕಟ್ಟಡ ಉದ್ಘಾಟನೆಯಾಗಲಿದೆ. ಉದ್ಘಾಟನೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆಗಮಿಸಲಿದ್ದಾರೆ ಅಂತಾ ಸೋಮಣ್ಣ ಹೇಳಿದ್ದಾರೆ.
ಕಳೆದ ಸರ್ಕಾರ ಬಡವರಿಗಾಗಿ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ನೀಡಿದ್ದ ವಿಚಾರವಾಗಿ ರೇಷ್ಮೆ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಸರ್ಕಾರದಲ್ಲಿ ಆ ರೀತಿಯ ಯೋಜನೆ ದೇವರಾಣೆಗೂ ಇಲ್ಲ. ಅಂತಹ ಯೋಜನೆಗಳಿಂದ ಯಾರಿಗೂ ಲಾಭವಿಲ್ಲ. ಆ ಯೋಜನೆಯಲ್ಲಿ ಬಡವರಿಗೆ ರೇಷ್ಮೆ ಸೀರೆ ಸಿಕ್ಕಿಲ್ಲ. ಎಲ್ಲಾ ಶ್ರೀಮಂತರಿಗೆ ರೇಷ್ಮೆ ಸೀರೆ ಸಿಕ್ತು. ಕಳೆದ ಬಾರಿಯ ರೇಷ್ಮೆ ಸಚಿವರು ₹5 ಸಾವಿರಕ್ಕೆ ಸೀರೆ ಕೊಟ್ಟಿದ್ರು. ಕಳೆದ ಬಾರಿಯ ಸಚಿವರು ನಮ್ಮ ಸ್ನೇಹಿತರು ಅವರ ಬಗ್ಗೆ ನಾನು ಟೀಕೆ ಮಾಡಲ್ಲ. ಅವರು ಯಾವ ಉದ್ದೇಶದಿಂದ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಕೊಡೋ ಪ್ಲಾನ್ ಮಾಡಿದ್ರು ನಂಗೆ ಗೊತ್ತಿಲ್ಲ. ನನಗೆ ಸಂಸ್ಥೆ ಮುಖ್ಯ. ನಮಗೆ ಆ ಥರದ ಚೀಫ್ ಪಾಪ್ಯುಲರ್ ಸ್ಕೀಮ್ ಅವಶ್ಯಕತೆ ಇಲ್ಲ ಅಂತಾ ಕಿಡಿಕಾರಿದ್ರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post